ಮರುಭೂಮಿಯ ಹೀಟ್ ನಲ್ಲಿ ಹಚ್ಚ ಹಸಿರಾಗಿರುವ ಸುಂದರವಾದ ಮೂರು ಮೈದಾನಗಳು ಐಪಿಎಲ್ ಗಾಗಿ ಸಿದ್ಧವಾಗಿವೆ. ಇನ್ನು ಏನಿದ್ದರೂ ಆಕ್ಷನ್ ಮಾತ್ರ.
ಮಾಸ್ ಕಮರ್ಷಿಯಲ್ ಸಿನಿಮಾದ ಎಂಟರ್ ಟೈನ್ಮೆಂಟ್ ನೀಡೋ ಐಪಿಎಲ್ ಗೆ ಇಂದು ಅಧಿಕೃತ ಚಾಲನೆ ಸಿಗಲಿದೆ.
ಮೊದಲ ಕಾಳಗದಲ್ಲಿ ಎರಡು ಬಲಿಷ್ಠ ತಂಡಗಳು ಮುಖಾಮುಖಿ ಆಗಲಿವೆ. ನಾಲ್ಕು ಬಾರಿ ಟ್ರೋಫಿಗೆ ಮುತ್ತಿಟ್ಟಿರುವ ಮುಂಬೈಗೆ ಮೂರು ಬಾರಿ ಚಾಂಪಿಯನ್ ಆಗಿ ಮಿಂಚಿರುವ ಚೆನ್ನೈ ಸವಾಲ್ ಹಾಕಲಿದೆ.
ತಂಡಗಳ ಬಲಾಬಲ ಹೀಗಿದೆ.
ಚೆನ್ನೈ ಸೂಪರ್ ಕಿಂಗ್ಸ್
10 ಸೀಸನ್ಸ್, ಮೂರು ಬಾರಿ ಚಾಂಪಿಯನ್ಸ್, ಐದು ಬಾರಿ ರನ್ನರ್ ಅಪ್, ಒಂದು ಬಾರಿ ಸೆಮೀಸ್. ಇದು ಐಪಿಎಲ್ ದಂಗಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ದಿಗ್ವಿಜಯದ ಯಾತ್ರೆ.
ವಲ್ರ್ಡ್ ಕ್ಲಾಸ್ ಪ್ಲೇಯರ್ಸ್ ಇಲ್ಲದಿದ್ದರೂ, ಬಿಗ್ ಹಿಟ್ಟರ್ ಲಭ್ಯವಿಲ್ಲದಿದ್ದರೂ, ಸೀನಿಯರ್ಸ್ ಪ್ಲೇಯರ್ಸ್ ಅನುಭವದಿಂದ ಟ್ರೋಫಿ ಗೆದ್ದು ಬೀಗುವುದು ಸಿಎಸ್ ಕೆ ವಿಶೇಷತೆ.
ಮುಖ್ಯವಾಗಿ ಮಿಸ್ಟರ್ ಕೂಲ್ ಎಂಎಸ್ ಡಿ ಮಯಾಜಾಲ ಚೆನ್ನೈಗೆ ಬಹುದೊಡ್ಡ ಪ್ಲಸ್ ಪಾಯಿಂಟ್.

ಮೇಲ್ನೋಟಕ್ಕೆ ಸಾಧಾರಣವಾಗಿ ಕಾಣಿಸಿದದೂ ಮೈದಾನದಲ್ಲಿ ಅದ್ಭುತಗಳನ್ನು ಸೃಷ್ಟಿಸೋ ಧೋನಿ ಟೀಂ ಪ್ರತಿ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ.
ಈ ತಂಡದ ಸ್ಟ್ರೆಂಥ್ ಬಗ್ಗೆ ಹೇಳೋದಾದ್ರೆ ಸಿಎಸ್ ಕೆಗೆ ಧೋನಿಯೇ ಬಾಹುಬಲಿ. ವಿಕೆಟ್ ಹಿಂದೆ ನಿಂತು ತಂಡವನ್ನು ಗೆಲುವಿನತ್ತ ಕರೆದೊಯ್ಯುವ ಡಿ ಬಾಸ್ ಚಾಣಾಕ್ಷತೆ ಸಿಎಸ್ ಕೆ ಸ್ಟ್ರೆಂಥ್.
ಒಂಟಿ ಸಲಗನಾಗಿ ಮೈದಾನದಲ್ಲಿ ಘೀಳಿಟ್ಟು ಪಂದ್ಯ ಗೆಲ್ಲಿಸಿ ಕೋಡೋದು ಧೋನಿ ಸ್ಪೆಷಾಲಿಟಿ. ಆಟಗಾರರಲ್ಲಿ ವಿಶ್ವಾಸ ತುಂಬಿಸಿ, ಅವರಿಂದ ಅತ್ಯದ್ಭುತ ಆಟವನ್ನು ಹೊರತೆಗೆಯುವುದರಲ್ಲಿ ಮಹೇಂದ್ರನಿಗೆ ಮಹೇಂದ್ರನೇ ಸಾಟಿ.
ಬ್ಯಾಟಿಂಗ್ ನಲ್ಲಿ ವಾಟ್ಸನ್, ರಾಯುಡು, ಡು ಪ್ಲೆಸೀಸ್, ಧೋನಿ, ಬ್ರಾವೋ ಸಿಎಸ್ ಕೆ ಆನೆಬಲ. 
ಯುಎಇ ಮೈದಾನಗಳು ಸ್ಪೀನ್ ಬೌಲರ್ ಫ್ರೆಂಡ್ಲಿ ಆಗಿರುವುದರಿಂದ ಬೌಲಿಂಗ್ ನಲ್ಲಿ ರವೀಂದ್ರ ಜಡೇಜಾ, ತಾಹಿರ್ ಜಾದೂ ಮಾಡಬಹುದು.
ವೀಕ್ನೆಸ್ ಗಳು : ಈ ಬಾರಿ ಸಿಎಸ್ ಕೆ ಫೀಲ್ಡಿಂಗ್ ನಲ್ಲಿ ವೀಕ್ ಆಗಿರುವ ರೀತಿ ಕಾಣುತ್ತಿದೆ. ವೇಗಿಗಳ ವಿಭಾಗದಲ್ಲಿ ಹೇಳಿಕೊಳ್ಳುವಂತಹ ಆಟಗಾರನಿಲ್ಲ. ಸ್ಟಾರ್ ವಿದೇಶಿ ಬೌಲರ್ ಗಳಿಲ್ಲ. ಹೊಸ ಸುದ್ದಿಗಳನ್ನು ಇಲ್ಲಿ ಓದಿ
ಮುಂಬೈ ಇಂಡಿಯನ್ಸ್
ತಂಡದ ತುಂಬೆಲ್ಲಾ ಸ್ಟಾರ್ ಆಟಗಾರರು, ಬೆಸ್ಟ್ ಫಿನೀಷರ್ಸ್, ತಂಡವನ್ನು ಸೋಲಿನ ತಡದಿಂದ ಗೆಲುವಿನತ್ತ ಕೊಂಡೊಯ್ಯಬಲ್ಲ ವೀರರು, ಕಷ್ಟಕಾಲದಲ್ಲಿ ಆಪತ್ಬಾಂಧವರಂತೆ ತಂಡದ ಪರ ನಿಲ್ಲೋ ಆಲ್ ರೌಂಡರ್ ಗಳು.
ಇವೆಲ್ಲವುದಕ್ಕೂ ಮಿಗಿಲಾಗಿ ಐಪಿಎಲ್ ನ ಮೋಸ್ಟ್ ಸಕ್ಸಸ್ ಫುಲ್ ಕ್ಯಾಪ್ಟನ್. ಬಲಿಷ್ಠ ಕೋಚಿಂಗ್ ಸ್ಟಾಪ್. ಇದು ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪ್ರಸ್ಥಾನ. 
ಪ್ರತಿ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ಟೀಂ ಆಗಿ ಅಖಾಡಕ್ಕೆ ಇಳಿಯುವ ಮುಂಬೈ ಈ ಬಾರಿಯೂ ಅದೇ ಜೋಷ್ ನಲ್ಲಿ ಮೈದಾನಕ್ಕೆ ಧುಮುಖಲಿದೆ.
ಬೇರ್ಯಾವ ತಂಡಕ್ಕೂ ಸಾಧ್ಯವಾಗದ ರೀತಿಯಲ್ಲಿ ನಾಲ್ಕು ಬಾರಿ ಪ್ರಶಸ್ತಿಯನ್ನು ಗೆದ್ದಿರುವ ಘನತೆ ಮುಂಬೈ ತಂಡದ್ದು. ಬ್ಯಾಟಿಂಗ್,ಬೌಲಿಂಗ್ ಫೀಲ್ಡಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಮುಂಬೈ ಸಾಲಿಡ್ ಸ್ಟ್ರಾಂಗ್.
ತಂಡದ ಬಲಾಬಲದ ಬಗ್ಗೆ ಮಾತನಾಡೋವುದಾದರೇ ಮುಂಬೈಗೆ ಹಿಟ್ ಮ್ಯಾನ್ ಸೂಪರ್ ಹೀರೋ. ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ರೋಹಿತ್ ಸೂಪರ್ ಸ್ಟಾರ್.
ಎದುರಾಳಿ ಬೌಲರ್ ಯಾರೇ ಆಗಿರಲಿ, ಚೆಂಡನ್ನು ಬೌಂಡರಿ ದಾಟಿಸೋ ಶರ್ಮಾ ಆಟ ಮುಂಬೈಗೆ ಬಹು ದೊಡ್ಡಬಲ.

ಬ್ಯಾಟಿಂಗ್ ನಲ್ಲಿ ಡಿಕಾಕ್, ರೋಹಿತ್, ಕ್ರಿಸ್ ಲಿನ್, ಸೂರ್ಯ ಕುಮಾರ್ ತಂಡಕ್ಕೆ ಬಲ ತುಂಬಿದರೆ, ಹಾರ್ಧಿಕ್ ಪಾಂಡ್ಯ, ಪೊಲಾರ್ಡ್ ಆಲ್ ರೌಂಡರ್ ಗಳಾಗಿ ತಂಡವನ್ನು ಗೆಲ್ಲಿಸಿಕೊಡೋ ಸಾಮಥ್ರ್ಯ ಹೊಂದಿದ್ದಾರೆ.
ಇನ್ನು ಬೌಲಿಂಗ್ ನಲ್ಲಿ ಬೂಮ್ರಾಗೆ ಎದುರಾಳಿ ಬ್ಯಾಟ್ಸ್ ಮನ್ ಗಳು ತಲೆಬಾಗಲೇಬೇಕು. ಬೌಲ್ಟ್ ಆಗಮನ ಮುಂಬೈಗೆ ಮತ್ತಷ್ಟು ಬಲ ನೀಡಿದೆ.
ಇಂದಿನ ಮೊದಲ ಪಂದ್ಯದಲ್ಲಿ ಈ ಮದಗಜಗಳ ಕಾಳಗವನ್ನು ಕಣ್ತುಂಬಿಕೊಳ್ಳಲು ಕ್ರೀಡಾಭಿಮಾನಿಗಳು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ಧೋನಿ(ಕ್ಯಾಪ್ಟನ್), ವಿಕೆಟ್ ಕೀಪರ್, ಶೇನ್ ವಾಟ್ಸನ್, ಡ್ವೇನ್ ಬ್ರಾವೋ, ಡುಪ್ಲೆಸಿ, ಕೇದಾರ್ ಜಾಧವ್, ಜಡೇಜಾ, ಚಾವ್ಲಾ, ಶಾರ್ದೂಲ್ ಠಾಕೂರ್, ಇಮ್ರಾನ್ ತಾಹೀರ್, ಋತುರಾಜ್ ಗಾಯ್ಕವಾಡ್, ಜಗದೀಶನ್, ಕರ್ಣ ಶರ್ಮಾ, ಲುಂಗಿ ಗಿಡಿ, ಸ್ಯಾಂಟನರ್, ಸ್ಯಾಮ್ ಕರನ್, ಹ್ಯಾಜಲ್ ವುಡ್, ಸಾಯಿ ಕಿಶೋರ್
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ(ಕ್ಯಾಪ್ಟನ್), ಕ್ವಿಂಟನ್ ಡಿಕಾಕ್, ಆದಿತ್ಯ ತಾರೆ(ವಿಕೆಟ್ ಕೀಪರ್) ದೇಶಮುಖ, ಸೌರಭ್ ತಿವಾರಿ, ಜಸ್ ಪ್ರೀತ್ ಬೂಮ್ರಾ, ಕೃಣಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಪೊಲಾರ್ಡ್, ಚಾಹರ್, ಕ್ರಿಸ್ ಲಿನ್, ರುದರ್ , ಅನ್ಮೋಲ್ ಪ್ರೀತ್, ಮೆಕ್ಲೆಂಗಾನ್, ಅನುಕೂಲ್ ರಾಯ್, ಇಶಾನ್ ಕಿಶನ್, ನೇಥನ್ ಕೌಲ್ಟರ್, ಪ್ಯಾಟಿನ್ಸನ್.








