Mumbai indians | ಹರಾಜಿನಲ್ಲಿ ಮುಂಬೈ ತಪ್ಪು ಮಾಡಿದೆಯಂತೆ..
ಮುಂಬೈ ಇಂಡಿಯನ್ಸ್ ತಂಡ ನ್ಯೂಜಿಲೆಂಡ್ ಬೌಲರ್ ಟ್ರೆಂಟ್ ಬೋಲ್ಟ್ ಅವರನ್ನ ರಿಟೈನ್ಡ್ ಮಾಡಿಕೊಳ್ಳದೇ ತಪ್ಪು ಮಾಡಿದೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಬಾಲ್ಯ ಕೋಚ್ ರಾಜ್ ಕುಮಾರ್ ಶರ್ಮಾ ತಿಳಿಸಿದ್ದಾರೆ.
ಐಪಿಎಲ್ ಮೆಗಾ ಹರಾಜು-2022 ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್ ನಾಲ್ವರು ಆಟಗಾರರನ್ನು ಉಳಿಸಿಕೊಂಡಿತ್ತು.
ನಾಯಕ ರೋಹಿತ್ ಶರ್ಮಾ, ಹಿಟ್ಟರ್ ಕೀರನ್ ಪೊಲಾರ್ಡ್ (ವೆಸ್ಟ್ ಇಂಡೀಸ್), ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಪ್ರಮುಖ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರನ್ನ ಮುಂಬೈ ಇಂಡಿಯನ್ಸ್ ರಿಟೈನ್ಡ್ ಮಾಡಿತ್ತು.
ಆದ್ರೆ ನ್ಯೂಜಿಲೆಂಡ್ ಬೌಲರ್ ಟ್ರೆಂಟ್ ಬೋಲ್ಟ್ ಅವರನ್ನ ಉಳಿಸಿಕೊಳ್ಳಲಿಲ್ಲ. ಆದ್ರೆ ಬೆಂಗಳೂರಿನಲ್ಲಿ ನಡೆದ ಮೆಗಾ ಹರಾಜಿನಲ್ಲಿ ಮುಂಬೈ ಬೋಲ್ಟ್ ಗಾಗಿ ಪೈಪೋಟಿ ನಡೆಸಿದ್ರೂ ಅವರು ರಾಜಸ್ಥಾನ್ ಪಾಲಾದರು.
ಈ ಬಗ್ಗೆ ಮಾತನಾಡಿದ ರಾಜ್ ಕುಮಾರ್ ಶರ್ಮಾ, “ಮುಂಬೈ ಲೆಕ್ಕಾಚಾರ ತಪ್ಪಿದೆ. ಮುಂಬೈ ಖಂಡಿತವಾಗಿಯೂ ಟ್ರೆಂಟ್ ಬೌಲ್ಟ್ ಸೇವೆಗಳನ್ನು ಕಳೆದುಕೊಳ್ಳಿದೆ.
ಬೌಲ್ಟ್ ಮತ್ತು ಜಸ್ಪ್ರೀತ್ ಬುಮ್ರಾ ಜೊತೆಯಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಬೋಲ್ಟ್ ರಂತಹ ಬೌಲರನ್ನ ಮುಂಬೈ ಇಂಡಿಯನ್ಸ್ ಬಿಟ್ಟಿದ್ದು ಯಾಕೆ ಅಂತಾ ನನಗೆ ಗೊತ್ತಾಗುತ್ತಿಲ್ಲ.
ಬಹುಶಃ ಅವರು ಬೋಲ್ಟ್ ಸ್ಥಾನವನ್ನು ಉನಾದ್ಕಟ್ ಮೂಲಕ ಭರ್ತಿ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.









