Mumbai Indians : ಮುಂಬೈ ಇಂಡಿಯನ್ಸ್ ಪರ 12 ವರ್ಷ ಪೂರೈಸಿದ ರೋಹಿತ್ ಶರ್ಮಾ…
IPL ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಪ್ರಾಂಚೈಸಿಯಾಗಿರುವ ಮುಂಬೈ ಇಂಡಿಯನ್ಸ್ ತಂಡದ ಸಾರಥಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನ ಸೇರಿ 12 ವರ್ಷಗಳನ್ನ ಪೂರೈಸಿದ್ದಾರೆ. MI ತಂಡವನ್ನ ಐದು ಚಾಂಪಿಯನ್ ಪಟ್ಟಕ್ಕೇರಿಸಿರುವ ದಾಖಲೆ ಮತ್ತು ಖ್ಯಾತಿ ರೋಹಿತ್ ಶರ್ಮಾ ಹೆಸರಿನಲ್ಲಿದೆ.
MS ಧೋನಿ ನಂತರ ಯಾವುದೇ IPL ಫ್ರಾಂಚೈಸಿಗೆ ದೀರ್ಘಾವಧಿಯ ಸೇವೆ ಸಲ್ಲಿಸಿದ ಮತ್ತೊಬ್ಬ ನಾಯಕ ಎಂದರೇ ಅದು ರೋಹಿತ್ ಶರ್ಮಾ. ರೋಹಿತ್ 2011 ರ ಮೆಗಾ ಹರಾಜಿನಲ್ಲಿ (ಜನವರಿ 8) ₹ 9.2 ಕೋಟಿಗೆ MI ತಂಡವನ್ನ ಸೇರಿಕೊಂಡಿದ್ದರು.
35 ವರ್ಷ ರೋಹಿತ್ ಶರ್ಮಾ 182 IPL ಪಂದ್ಯಗಳಿಂದ 4709 ರನ್ ಬಾರಿಸುವ ಮೂಲಕ IPL MI ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಮುಂಬೈ ಪರ ಆಡುತ್ತಲೇ 1 ಶತಕ ಮತ್ತು 32 ಅರ್ಧಶತಕಗಳನ್ನು ಗಳಿಸಿದ್ದಾರೆ.
ಈ ಕುರಿತು ರೋಹಿತ್ ಶರ್ಮಾ ಮಾತನಾಡಿ “ಮುಂಬೈ ಇಂಡಿಯನ್ಸ್ನಲ್ಲಿ 12 ವರ್ಷಗಳು ಕಳೆದಿವೆ ಎಂದರೇ ನನಗೆ ನಂಬಲಾಗುತ್ತಿಲ್ಲ. ಇದು ನನಗೆ ಅತ್ಯಂತ ರೋಮಾಂಚನಕಾರಿ ಮತ್ತು ಭಾವನಾತ್ಮಕ ಪ್ರಯಾಣವಾಗಿದೆ. ದಿಗ್ಗಜರು ಮತ್ತು ಯುವಕರ MIಪಲ್ಟಾನ್ನೊಂದಿಗೆ ತುಂಬಾ ಸಾಧನೆ ಮಾಡಿದ್ದೇವೆ” ಎಂದು ಹೇಳಿದ್ದಾರೆ.
“ಮುಂಬೈ ಇಂಡಿಯನ್ಸ್ ನನ್ನ ಕುಟುಂಬ, ಮತ್ತು ನನ್ನ ಸಹ ಆಟಗಾರರು, ಅಭಿಮಾನಿಗಳು ಮತ್ತು ಮ್ಯಾನೇಜ್ಮೆಂಟ್ಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಮ್ಮ ಪಲ್ಟನ್ಗಾಗಿ ಇನ್ನೂ ಹೆಚ್ಚಿನ ನೆನಪುಗಳನ್ನು ಸೃಷ್ಟಿಸಲು ಮತ್ತು ಇನ್ನಷ್ಟು ನಗುವನ್ನು ಹರಡಲು ಎದುರು ನೋಡುತ್ತಿದ್ದೇನೆ” ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಎರಡು ಚಾಂಪಿಯನ್ಸ್ ಲೀಗ್ T20 ಟ್ರೋಫಿಗಳನ್ನ ಗೆದ್ದಿರುವ ರೋಹಿತ್, ಅತ್ಯಧಿಕ ಕ್ಯಾಪ್ಡ್ ಆಟಗಾರರಾಗಿದ್ದಾರೆ, ರೋಹಿತ್ ನಾಯಕನಾಗಿ IPL ನಲ್ಲಿ ಎರಡನೇ ಅತಿ ಹೆಚ್ಚು ಗೆಲುವುಗಳನ್ ಕಂಡ ನಾಯಕ 143 ಪಂದ್ಯಗಳಲ್ಲಿ 81 ಗೆಲುವುಗಳು.
Mumbai Indians: Rohit Sharma completed 12 years for Mumbai Indians…