ಐಪಿಎಲ್ 2021- ಸಿಎಸ್ ಕೆ ಗೆಲುವಿಗೆ ಅಡ್ಡಿಯಾದ ಪೊಲಾರ್ಡ್ ಬ್ಯಾಟಿಂಗ್ ಅಬ್ಬರ

1 min read
Kieron Pollard mumbai indians saakshatv

ಐಪಿಎಲ್ 2021- ಸಿಎಸ್ ಕೆ ಗೆಲುವಿಗೆ ಅಡ್ಡಿಯಾದ ಪೊಲಾರ್ಡ್ ಬ್ಯಾಟಿಂಗ್ ಅಬ್ಬರ

Moeen Ali and Faf du Plessis csk ipl 2021 saakshatvಇನ್ನೇನೂ ಸೋಲು ಖಚಿತ ಅಂತ ಅಂದುಕೊಂಡಿದ್ದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಗೆಲುವಿನ ನಗೆ ಮೂಡಿಸಿದ್ದು ಕಿರಾನ್ ಪೊಲಾರ್ಡ್.
ಐಪಿಎಲ್ ಟೂರ್ನಿಯ 27ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ನಾಲ್ಕು ವಿಕೆಟ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪರಾಭವಗೊಳಿಸಿದೆ.
ಈ ಮೂಲಕ ಸಿಎಸ್ ಕೆ ತಂಡದ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ಆಡಿರುವ ಏಳು ಪಂದ್ಯಗಳಲ್ಲಿ ಸಿಎಸ್ ಕೆ ತಂಡ 10 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ಡೆಲ್ಲಿ, ಆರ್ ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಲಾ ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದೆ.
ಗೆಲ್ಲಲು 219 ರನ್ ಗಳ ಕಠಿಣ ಸವಾಲನ್ನು ಬೆನ್ನಟ್ಟಿದ್ದ ಮುಂಬೈ ಇಂಡಿಯನ್ಸ್ ತಂಡ 81ಕ್ಕೆ ಮೂರು ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತ್ತು. ಡಿಕಾಕ್ 29 ರನ್, ರೋಹಿತ್ ಶರ್ಮಾ 35 ಮತ್ತು ಸೂರ್ಯಕುಮಾರ್ ಯಾದವ್ ಮೂರು ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡ್ರು.
ಆಗ ಕೃನಾಲ್ ಪಾಂಡ್ಯ ಜೊತೆ ಸೇರಿಕೊಂಡ ಕಿರಾನ್ ಪೊಲಾರ್ಡ್ ಪಂದ್ಯದ ತಿಯನ್ನೇ ಬದಲಾಯಿಸಿದ್ರು. ಕೃನಾಲ್ ಪಾಂಡ್ಯ 32 ರನ್ ಗಳಿಸಿ ಔಟಾದ್ರೆ, ಹಾರ್ದಿಕ್ ಪಾಂಡ್ಯ 16 ರನ್ ಗೆ ತನ್ನ ಹೋರಾಟವನ್ನು ಮುಗಿಸಿದ್ರು. ಜೇಮ್ಸ್ ನಿಶಾಮ್ ಶೂನ್ಯ ಸುತ್ತಿದ್ರು.
ಇನ್ನೊಂದೆಡೆ ಏಕಾಂಗಿ ಹೋರಾಟ ನಡೆಸಿದ್ದ ಕಿರಾನ್ ಪೊಲಾರ್ಡ್ ಅಜೇಯ 87 ರನ್ ಸಿಡಿಸಿ ತಂಡಕ್ಕೆ ರೋಚಕ ಗೆಲುವನ್ನು ತಂದುಕೊಟ್ಟರು. ಕಿರಾನ್ ಪೊಲಾರ್ಡ್ 34 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಎಂಟು ಸಿಕ್ಸರ್ ಗಳನ್ನು ಸಿಡಿಸಿದ್ದರು. ಈ ಮೂಲಕ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತ್ತು.
mumbai indians saakshatv ipl 2021ಇದಕ್ಕು ಮೊದಲು ಬ್ಯಾಟಿಂಗ್ ಮಾಡಿದ್ದ ಸಿಎಸ್ ಕೆ ಬ್ಯಾಟ್ಸ್ ಮೆನ್ ಗಳು ಕೂಡ ಮುಂಬೈ ಬೌಲರ್ ಗಳನ್ನು ಮನಬಂದಂತೆ ದಂಡಿಸಿದ್ರು.
ರುತುರಾಜ್ ಗಾಯಕ್ವಾಡ್ ನಾಲ್ಕು ರನ್ ಗಳಿಸಿ ನಿರಾಸೆ ಮೂಡಿಸಿದ್ರು. ಆದ್ರೆ ಫಾಫ್ ಡು ಪ್ಲೇಸಸ್ ಮತ್ತು ಮೋಯಿನ್ ಆಲಿ ಮಿಂಚಿನ ಬ್ಯಾಟಿಂಗ್ ನಡೆಸಿದ್ರು. ಅಲ್ಲದೆ ಶತಕದ ಜೊತೆಯಾಟವನ್ನು ಆಡಿದ್ರು. ಈ ಹಂತದಲ್ಲಿ ಮೋಯಿನ್ ಆಲಿ 58 ರನ್ ಗಳಿಸಿ ತನ್ನ ಹೋರಾಟವನ್ನು ಮುಗಿಸಿದ್ರು.
ಹಾಗೇ ಫಾಫ್ ಡು ಪ್ಲೇಸಸ್ 50 ರನ್ ದಾಖಲಿಸಿ ಪೆವಿಲಿಯನ್ ದಾರಿ ಹಿಡಿದ್ರು. ಸುರೇಶ್ ರೈನಾ ಕೇವಲ ಎರಡು ರನ್ ಗಳಿಸಿ ನಿರಾಸೆ ಮೂಡಿಸಿದ್ರು.
ಬಳಿಕ ಮುಂಬೈ ಇಂಡಿಯನ್ಸ್ ತಂಡಕ್ಕೆ ಕಂಟಕವಾಗಿ ಪರಿಣಮಿಸಿದ್ದು ಅಂಬಟಿ ರಾಯುಡು. ಕೇವಲ 27 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಏಳು ಸಿಕ್ಸರ್ ಗಳ ಸಹಾಯದಿಮದ ಅಜೇಯ 72 ರನ್ ಸಿಡಿಸಿ ಪಂದ್ಯದ ಗತಿಯನ್ನೇ ಬದಲಾಯಿಸಿದ್ರು. ಇವರಿಗೆ ರವೀಂದ್ರ ಜಡೇಜಾ ಅಜೇಯ 22 ರನ್ ದಾಖಲಿಸಿ ಉತ್ತಮ ಸಾಥ್ ನೀಡಿದ್ರು.
ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 2018 ರನ್ ಗಳಿಸಿತ್ತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd