Mumbai Marathon: 80 ರ ಇಳಿ ವಯಸ್ಸಿನಲ್ಲೂ ಮ್ಯಾರಥಾನ್ ನಲ್ಲಿ ಓಡಿದ ಅಜ್ಜಿ…
ಸೌಲಭ್ಯಗಳು ಹೆಚ್ಚಾದಂತೆ ಮನುಷ್ಯನಲ್ಲಿ ಸೋಮಾರಿತನ ಹೆಚ್ಚುಗುತ್ತಿದೆ. ಅಂಗೈಯಲ್ಲಿ ಎಲ್ಲವೂ ಎಟಕುವಾಗ ಕಾಲು ಕದಲಿಸದಂತಿದ್ದಾರೆ ಈಗಿನ ಪೀಳಿಗೆ. ಅದಕ್ಕೇ ಹಿಂದಿನ ಪೀಳಿಗೆಗೆ ಹೋಲಿಸಿದರೆ ಈಗಿನ ತಲೆಮಾರು ಅಷ್ಟೊಂದು ಸ್ಟ್ರಾಂಗ್ ಇಲ್ಲ ಎಂಬ ಮಾತಿದೆ. ಆದರೆ, ಆರೋಗ್ಯವಾಗಿರಲು ವ್ಯಾಯಾಮ ಅತ್ಯಗತ್ಯ. ಯಾರು ದಿನವಿಡೀ ಕ್ರಿಯಾಶೀಲರಾಗಿರುತ್ತಾರೋ ಅವರು ಆರೋಗ್ಯವಾಗಿರುತ್ತಾರೆ.
ನಿಜವಾದ ವಿಷಯಕ್ಕೆ ಬರುವುದಾರೇ… ನಾವು ಕಿಲೋಮೀಟರ್ ನಡೆದರೇನೆ ಸುಸ್ತಾಗುತ್ತೇವೆ ಅಂಥಹದ್ದರಲ್ಲಿ 80 ವರ್ಷದ ಅಜ್ಜಿ ಒಬ್ಬರೇ 5 ಕಿ.ಮೀ ಮ್ಯಾರಥಾನ್ ಪೂರ್ಣಗೊಳಿಸಿದ್ದಾರೆ. ಆ ವಯಸ್ಸಿನಲ್ಲೂ ಯುವಕರ ಜತೆ ಪೈಪೋಟಿ ನೀಡಿ ಓಡುವ ಸಾಮರ್ಥ್ಯ ಹೊಂದಿದ್ದರು ಎಂಬುದು ಗಮನಾರ್ಹ.
View this post on Instagram
ಮುಂಬೈನಲ್ಲಿ ನಡೆದ ವಾರ್ಷಿಕ ಟಾಟಾ ಮ್ಯಾರಥಾನ್ ನಲ್ಲಿ 80 ವರ್ಷದ ಅಜ್ಜಿ ಭಾರತಿ ಭಾಗವಹಿಸಿ ಎಲ್ಲರ ಮನಗೆದ್ದರು. ಸೀರೆ ಉಟ್ಟು, ಕ್ರೀಡಾ ಶೂ ಧರಿಸಿ ರಾಷ್ಟ್ರಧ್ವಜ ಹಿಡಿದು ಓಡಿದರು. 4.2 ಕಿ.ಮೀ ಓಟವನ್ನು 51 ನಿಮಿಷಗಳಲ್ಲಿ ಪೂರ್ಣಗೊಳಿಸಿದರು. ಈ ವೇಳೇ ಕೆಲವೊಮ್ಮೆ ವೇಗವಾಗಿ ಮತ್ತು ಕೆಲವೊಮ್ಮೆ ನಿಧಾನವಾಗಿ ಓಡಿ ಗುರಿ ತಲುಪಿದರು. ಇನ್ನೊಂದು ವಿಷಯವೆಂದರೆ “ಈ ಮ್ಯಾರಥಾನ್ ಓಟ ಹೊಸದೇನಲ್ಲ. ಈ ಹಿಂದೆ ಐದು ಬಾರಿ ಈ ಓಟದಲ್ಲಿ ಭಾಗವಹಿಸಿದ್ದೆ” ಎಂದು ಮ್ಯಾರಥಾನ್ ನಂತರ ಮಾಧ್ಯಮಗಳಿಗೆ ಬಹಿರಂಗಪಡಿಸಿದರು. ಈ ವಯಸ್ಸಿನಲ್ಲೂ ಬೆಳಗ್ಗೆ ಸ್ವಲ್ಪ ಹೊತ್ತು ಓಡಿ ವ್ಯಾಯಾಮ ಮಾಡುತ್ತಾರೆ. ಇದು ತನ್ನ ಮ್ಯಾರಥಾನ್ ರಹಸ್ಯ ಎಂದು ಅವರು ಬಹಿರಂಗಪಡಿಸಿದರು.
ಈ ಅಜ್ಜಿಯ ಮ್ಯಾರಥಾನ್ ಓಟಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ನೆಟ್ ನಲ್ಲಿ ವೈರಲ್ ಆಗುತ್ತಿದೆ. ಅವರ ಮೊಮ್ಮಗಳು ಡಿಂಪಲ್ ಮೆಹ್ತಾ ಫರ್ನಾಂಡೀಸ್ ಈ ವೀಡಿಯೊವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. “ನನ್ನ ಅಜ್ಜಿಯ ದೃಢತೆ ಮತ್ತು ಧೈರ್ಯ. ಅವರೇ ನಮಗೆ ಸ್ಪೂರ್ತಿ” ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
Mumbai Marathon: Grandma who ran marathon even in her 80s…








