Mumbai | ಲಿಫ್ಟ್ ನಲ್ಲಿ ಸಿಲುಕಿ ಟೀಚರ್ ಸಾವು!
ಶಾಲಾ ಮಕ್ಕಳ ಎದುರು ಶಿಕ್ಷಕಿ ಸಾವು
ಮುಂಬೈನ ಮಲಾಡ್ ವೆಸ್ಟ್ ನಲ್ಲಿ ಘಟನೆ
ಜಿನಾಲ್ ಫರ್ನಾಂಡಿಸ್ ಮೃತ ಶಿಕ್ಷಕಿ
6ನೇ ಮಹಡಿ ಲಿಫ್ಟ್ ನಲ್ಲಿ ಸಿಲುಕಿ ಸಾವು
ಮುಂಬೈ : ಶಾಲೆಯ ಕಟ್ಟಡದ ಲಿಫ್ಟ್ ನಲ್ಲಿ ಸಿಲುಕಿ ಗಾಯಗೊಂಡು ಶಿಕ್ಷಕಿ ಮೃತಪಟ್ಟಿರುವ ಘಟನೆ ಮುಂಬೈನ ಮಲಾಡ್ ವೆಸ್ಟ್ ನ ಎಸ್ ವಿ ರಸ್ತೆಯಲ್ಲಿರುವ ಚಿಂಚಲಿ ಸಿಗ್ನಲ್ ಬಳಿಯ ಮೇರಿ ಇಂಗ್ಲಿಷ್ ಶಾಲೆಯಲ್ಲಿ ನಡೆದಿದೆ.
ಜಿನಾಲ್ ಫರ್ನಾಂಡಿಸ್ ಮೃತ ಶಿಕ್ಷಕಿಯಾಗಿದ್ದಾರೆ. ಇವರು ಶಾಲೆಯ ಕಟ್ಟಡದ 6ನೇ ಮಹಡಿಯಲ್ಲಿ ಜಿನಾಲ್ ಫರ್ನಾಂಡಿಸ್ ತರಗತಿಯನ್ನು ಮುಗಿಸಿ ಆಫೀಸ್ ರೂಮಿಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಅವರು ಆರನೇ ಮಹಡಿಯಲ್ಲಿ ಲಿಫ್ಟ್ ನೊಳಗೆ ಪ್ರವೇಶಿಸಿದಾಗ ಲಿಫ್ಟ್ ಇದ್ದಕ್ಕಿದ್ದಂತೆ ಮೇಲಕ್ಕೆ ಹೋಗಿದೆ. ಈ ವೇಳೆ ಒಂದು ಕಾಲು ಲಿಫ್ಟ್ ನೊಳಗೆ ಮತ್ತು ಅವರ ದೇಹವು ಹೊರಗೆ ಸಿಲುಕಿಕೊಂಡಿತ್ತು.
ಇದರಿಂದ ಅವರಿಗೆ ಗಂಭೀರ ಗಾಯಗಳಾಗಿತ್ತು. ಅವರನ್ನು ಮಲ್ಟಿ – ಸ್ಪೆಷಾಲಿಟಿ ಆಸ್ಪತ್ರೆಗೆ ಸಾಗಿಸಲಾಯಿತು. ಆದ್ರೆ ಅಲ್ಲಿ ಅವರು ಮೃತಪಟ್ಟಿದ್ದಾರೆ.
ಈ ಘಟನೆಗೆ ಅಸಹಜ ಸಾವು ಕೇಸ್ ದಾಖಲಿಸಿಕೊಳ್ಳಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಶಾಲೆಯ ಸಿಬ್ಬಂದಿ, ಆಡಳಿತ ಮಂಡಳಿ, ಲಿಫ್ಟ್ ನಿರ್ವಹಣೆ ನೋಡಿಕೊಳ್ಳುವ ಕಂಪನಿಯ ಹೇಳಿಕೆಗಳನ್ನು ದಾಖಲಿಸಿಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.