ಹೊಸ ವರ್ಷದಿಂದ ಮುಂಬೈನಲ್ಲಿ ವಾಟರ್ ಟ್ಯಾಕ್ಸಿ ಸೇವೆ ಆರಂಭ..!
ಮುಂಬೈ: ಹೊಸ ವರ್ಷದಿಂದ ಮುಂಬೈನಲ್ಲಿ ವಾಟರ್ ಟ್ಯಾಕ್ಸಿ ಸೇವೆ ಆರಂಭವಾಗ್ತಿದೆ.. ನವಿ ಮುಂಬೈನಿಂದ ದಕ್ಷಿಣ ಮುಂಬೈಗೆ ಸಾರಿಗೆ ಸಂಪರ್ಕ ಕಲ್ಪಿಸುವ ಉದ್ದೇಶವನ್ನ ಈ ಯೋಜನೆ ಹೊಂದಿದೆ.. ವಾಟರ್ ಟ್ಯಾಕ್ಸಿಯು 2022ರ ಜನವರಿಯಿಂದಲೇ ಮುಂಬೈನಲ್ಲಿ ಸೇವೆ ಆರಂಭವಾಗಲಿದೆ. ವಾಟರ್ ಟ್ಯಾಕ್ಸಿ ಸೇವೆಯು ದಕ್ಷಿಣ ಮುಂಬೈ ಮತ್ತು ನಾವಿ ಮುಂಬೈ ನಡುವೆ, ಫೆರ್ರಿ ವಾರ್ಫ್‌ನಲ್ಲಿರುವ ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್ ಮತ್ತು ಬೆಲಾಪುರ್ ಹಾಗೂ ನೆರೂಲ್‌ನಲ್ಲಿರುವ ಟರ್ಮಿನಲ್ ನಿಂದ ಸಾರಿಗೆ ಸೇವೆ ಒದಗಿಸುವ ಗುರಿಯನ್ನು ಹೊಂದಿದೆ..
ವಾಟರ್ ಟ್ಯಾಕ್ಸಿ ಸೇವೆಗೆ ಅಂತಾರಾಷ್ಟ್ರೀಯ ಕ್ರೂಸ್ ಟರ್ಮಿನಲ್, ರೇವಾಸ್‌ನಿಂದ ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್ , ಧರ್ಮತಾರ್, ಕರಂಜಾಡೆ, ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್, ನೆರೂಲ್, ಐರೋಲಿ, ವಾಶಿ, ಖಂಡೇರಿ, ದ್ವೀಪಗಳು ಮತ್ತು ಜವಾಹರ್‌ಲಾಲ್ ಸೇರಿದಂತೆ ವಿವಿಧ ಮಾರ್ಗಗಳನ್ನು ಸರ್ಕಾರ ನಿಗದಿಪಡಿಸಿದೆ. 
ಜನವರಿ ಮೊದಲ ವಾರದಿಂದಲೇ ವಾಟರ್ ಟ್ಯಾಕ್ಸಿ ಸೇವೆ ಆರಂಭವಾಗಲಿದೆ. ಸದ್ಯಕ್ಕೆ 3 ಆಪರೇಟರ್ ವ್ಯವಸ್ಥೆ ಮಾಡಲಾಗಿದೆ. 2-3 ತಿಂಗಳಲ್ಲಿ 4ನೇ ಆಪರೇಟರ್ ವ್ಯವಸ್ಥೆ ಮಾಡುವ ಗುರಿಯಿದೆ.. ಡೊಮೆಸ್ಟಿಕ್ ಟರ್ಮಿನಲ್‌ನಿಂದ ನಾವಿ ಮುಂಬೈ ಪ್ರಯಾಣಕ್ಕೆ ಒಬ್ಬ ಪ್ರಯಾಣಿಕರಿಗೆ 1,200ರಿಂದ 15,000 ರೂ. ಟಿಕೆಟ್ ದರ ಇರಲಿದೆ. ಮುಂಬೈನ ಡಿಸಿಟಿಯಿಂದ ಜವಾಹರ್ ಲಾಲ್ ನೆಹರೂ ಮತ್ತು ನಾವಿ ಮುಂಬೈಗೆ 800ರಿಂದ 1,100 ರೂ. ದರ ಇದೆ.








