ಸ್ನೇಹಿತನ ಸಹಾಯದಿಂದ ಗಂಡನಿಗೆ ಸ್ಲೋ ಪಾಯಿಸನ್ ಕೊಟ್ಟು ಕೊಂದ ಪತ್ನಿ…
ಎರಡು ತಿಂಗಳ ಕಾಲ ಗಂಡನಿಗೆ ಊಟದಲ್ಲಿ ಸ್ಲೋ ಪಾಯಿಸನ್ ಮಿಕ್ಸ್ ಮಾಡಿ ಗಂಡನನ್ನ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಸೇರಿದಂತೆ ಆಕೆಯ ಸ್ನೇಹಿತನನ್ನು ಬಂಧಿಸಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ.
ಪತಿ ಕಮಲ್ಕಾಂತ್ ಷಾ ಅವರನ್ನು ಹತ್ಯೆಗೈದಿದ್ದಕ್ಕಾಗಿ ಮಹಿಳೆ, ಕವಿತಾ ಮತ್ತು ಆಕೆಯ ಸ್ನೇಹಿತ ಹಿತೇಶ್ ಜೈನ್ ಅವರನ್ನು ಮುಂಬೈ ಕ್ರೈಂ ಬ್ರಾಂಚ್ ಬಂಧಿಸಿದ್ದಾರೆ. ಕವಿತಾ ತನ್ನ ಗಂಡನ ಊಟದಲ್ಲಿ ಆರ್ಸೆನಿಕ್ ಮತ್ತು ಥಾಲಿಯಮ್ ಮಿಶ್ರಣ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ವ್ಯಕ್ತಿ ಸ್ಲೋ ಪಾಯ್ಸನಿಂಗ್‌ನಿಂದಾಗಿ ಸೆಪ್ಟೆಂಬರ್ 3 ರಂದು ಆಸ್ಪತ್ರೆಗೆ ದಾಖಲಾದ 17 ದಿನಗಳ ನಂತರ ಸಾವನ್ನಪ್ಪಿದ್ದಾರೆ.
ಅಪರಾಧ ವಿಭಾಗದ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302,328 ಮತ್ತು 120(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನೂ ಬಂಧಿಸಿದ್ದಾರೆ.
ವೈದ್ಯರ ತಂಡ ಕಮಲಕಾಂತ್ ಅವರ ರಕ್ತದಲ್ಲಿ ಹೆವಿ ಮೆಟಲ್ ಕಂಡು ಬಂದ ಹಿನ್ನಲೆಯಲ್ಲಿ ಅನುಮಾನ ವ್ಯಕ್ತಪಡಿಸಿದೆ. ದೇಹದಲ್ಲಿ ಕಂಡುಬರುವ ಆರ್ಸೆನಿಕ್ ಮತ್ತು ಥಾಲಿಯಮ್ ಸಾಮಾನ್ಯಮಟ್ಟಕ್ಕಿಂತ ಹೆಚ್ಚಿತ್ತು ಎಂದು ತಿಳಸಿದ್ದಾರೆ.
ವೈದ್ಯರು ಆಜಾದ್ ಮೈದಾನ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಆಜಾದ್ ಮೈದಾನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಗಾಗಿ ಸಾಂತಾಕ್ರೂಜ್ ಪೊಲೀಸ್ ಠಾಣೆಗೆ ಪ್ರಕರಣವನ್ನು ಹಸ್ತಾಂತರಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಸಾಂತಾಕ್ರೂಜ್ ಪೊಲೀಸ್ ಠಾಣೆಯ ಬದಲಾಗಿ ಕ್ರೈಂ ಬ್ರಾಂಚ್ ಘಟಕ 9 ಕ್ಕೆ ಹಸ್ತಾಂತರಿಸಲಾಯಿತು. ಕ್ರೈಂ ಬ್ರಾಂಚ್ ತನಿಖೆ ಆರಂಭಿಸಿದೆ.
Mumbai Woman Slow Poisons, Kills Husband With Friend’s Help. How They Got Caught