‘ಮುಂದುವರೆದ ಅಧ್ಯಾಯ’ದಲ್ಲಿ ಆದಿತ್ಯನ ಆರ್ಭಟ..!
ಡೆಡ್ಲಿ ಸೋಮ, ಸ್ನೇಹಾನಾ ಪ್ರೀತಿನಾದಂತಹ ಮಾಸ್ ಸಿನಿಮಾಗಳ ಮೂಲಕ ಜನರ ಮನಸೆಳೆದಿದ್ದ ಡ್ಯಾಶಿಂಗ್ ಅಂಡ್ ಡೇರಿಂಗ್ ಹಿರೋ ಆದಿತ್ಯ ಸದ್ಯ ಬಣ್ಣದ ಜಗತ್ತಿನಿಂದ ಮಾಯವಾಗಿಬಿಟ್ಟಿದ್ರು.
ಕೆಲ ವರ್ಷಗಳಿಂದ ಅವರ ಸದ್ದು ಸ್ಯಾಂಡಲ್ ವುಡ್ ಅಂಗಳದಲ್ಲಿ ಕೇಳಿಸಿರಲಿಲ್ಲ. ಆದ್ರೆ ಡೆಡ್ಲಿ ಸೋಮನ ಫ್ಯಾನ್ಸ್ ಗೆ ಇದೀಗ ಥ್ರಿಲ್ಲಿಂಗ್ ನ್ಯೂಸ್ ಸಿಕ್ಕಿದೆ.
ಹೌದು ಬೆಳ್ಳಿ ಪರದೆ ಮೇಲೆ ಅದೇ ಡೇರಿಂಗ್ ನೆಸ್ ಅದೇ ಖದರ್ ನಲ್ಲೇ ಕಮ್ ಬ್ಯಾಕ್ ಮಾಡ್ತಿದ್ದಾರೆ ಆದಿತ್ಯ. ‘ಮುಂದುವರೆದ ಅಧ್ಯಾಯ’ದಲ್ಲಿ ಆದಿತ್ಯನ ಆರ್ಭಟ ಮತ್ತೆ ಶುರುವಾಗಲಿದೆ. ಆದ್ರೆ ಡೆಡ್ಲಿಯಾಗಿ ಬರುತ್ತಿಲ್ಲ. ಡೆಡ್ಲಿ ಸೋಮನ ತರ ಲಾಂಗು ಮಚ್ಚು ಹಿಡಿದು ರೋಡಿಗಿಳಿಯಲ್ಲ. ಬಟ್ ಹಳೇ ಖದರ್ ಮಾಸ್ ಲುಕ್ ಚೇಂಗ್ ಆಗಲ್ಲ. ಎಸ್ ಈ ಹೊಸ ಸಿನಿಮಾದಲ್ಲಿ ಸ್ಪೆಷಲ್ ಇನ್ವಿಸ್ಟಿಗೇಷನ್ ಆಫೀಸರ್ ಆಗಿ ಸ್ಯಾಂಡಲ್ ವುಡ್ ಗೆ ಮತ್ತೊಮ್ಮೆ ಬಲಗಾಲಿಡಲು ರೆಡಿಯಾಗಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಭರಿತ ಸಿನಿಮಾ ಟ್ರೇಲರ್ , ಟೀಸರ್ ನಿಂದಲೇ ಪ್ರೇಕ್ಷಕರ ಕಾತರತೆ ಹೆಚ್ಚಿಸಿದೆ.
ಮುಂಬೈನಲ್ಲಿ ಮದುವೆ ಮಾಡಿಕೊಂಡ ನವದಂಪತಿಗೆ 50 ಸಾವಿರ ರೂ. ದಂಡ..!
ಈಗಾಗ್ಲೇ ರಿಲೀಸ್ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಒಂದ್ ಕಡೆ ಫ್ಯಾನ್ಸ್ ಗೆ ಆದಿತ್ಯನ ಕಮ್ ಬ್ಯಾಕ್ ಖುಷಿ ಹಾಗೂ ಸರ್ಪೈಸ್ ಆಗಿದ್ರೆ , ಟೀಸರ್, ಡೈಲಾಗ್ ಟೀಸರ್ ಗೆ ನೆಟ್ಟಿಗರಿಂದ ಸಿಕ್ಕಾಪಟ್ಟೆ ಒಳ್ಳೆ ರೆಸ್ಪಾನ್ಸ್ ಸಿಗ್ತಿದೆ. ಟ್ರೇಲರ್ ನೋಡಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಟ್ರೇಲರ್ ನಲ್ಲಿ ಬಿಜಿಎಂ , ಮ್ಯೂಸಿಕಗ, ಎಲ್ಲವೂ ಮಸ್ತಾಗಿದೆ.
ಡೈರೆಕ್ಟರ್ ಬಾಲು ಚಂದ್ರಶೇಖರ್ ಅವರು ಈ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಕಣಜ ಎಂಟಪ್ರ್ರೈಸಸ್ ಬ್ಯಾನರ್ ನಡಿ ಮೂಡಿಬರುತ್ತಿರುವ ಚಿತ್ರಕ್ಕೆ ದಿಲೀಪ್ ಚಕ್ರವರ್ತಿಯವರ ಚಾಯಾಗ್ರಹಣವಿದೆ. ಇದೇ ಮಾರ್ಚ್ 19ರಂದು ಸಿನಿಮಾ ಬೆಳ್ಳಿತೆರೆಗೆ ಅಪ್ಪಳಿಸಿದ್ದು, ಡೆಡ್ಲಿ ಸೋಮನ ಹೊಸ ಅವತಾರಕ್ಕೆ ಪ್ರೇಕ್ಷಕರ ರೆಸ್ಪಾನ್ಸ್ ಹೇಗಿರಲಿದೆ ಅನ್ನೋದನ್ನ ಕಾದು ನೋಡಬೇಕಿದೆ.
ಹುಚ್ಚು….. ಅನ್ನೋದು ಇದನ್ನೇ ನೋಡಿ… ಚನ್ನಾಗಿರೋ ಮುಖವನ್ನ ಬೇಕಂತ್ಲೇ ಈ ರೀತಿ ಹಾಳು ಮಾಡಿಕೊಳ್ಳೋರನ್ನ ನೋಡಿದ್ದೀರಾ..!