ಬೆಂಗಳೂರು: ರಾಜ್ಯದಲ್ಲಿ ಕೊರೊನಾಸುರನ ಅಟ್ಟಹಾಸ ಮುಂದುವರಿದೆ. ಸೋಂಕು ಹರಡುವುದನ್ನು ತಡೆಯಲು ಲಾಕ್ ಡೌನ್ ಮಾಡಲಾಗಿದೆ. ಈ ಹಿನ್ನೆಲೆ ಬಡವರಿಗೆ ಅನುಕೂಲವಾಗಲಿ ಎಂದು ಅನರ್ಹ ಶಾಸಕ ಮುನಿರತ್ನ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಅನ್ನದಾಸೋಹಕ್ಕೆ ಮುಂದಾಗಿದ್ದಾರೆ. ದಿನಕ್ಕೆ ಮೂರು ಬಾರಿ ಅನ್ನದಾಸೋಹ ನಡೆಯಲಿದೆ ಎಂದು ಕ್ಷೇತ್ರದಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ಗಳನ್ನು ಹಾಕಿಸಿದ್ದಾರೆ.
ಫ್ಲೆಕ್ಸ್ ಗಳಲ್ಲಿ ಮುನಿರತ್ನರ ಹೆಸರಿನ ಕೆಳಗೆ, ‘ಶಾಸಕರು, ಆರ್.ಆರ್.ನಗರ‘ ಎಂಬ ಬರಹ ಇದೆ. ಜೊತೆಗೆ ಬಿಜೆಪಿ ನಾಯಕರ ಭಾವಚಿತ್ರಗಳನ್ನು ಬಳಕೆ ಮಾಡಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದ್ದು, ಮುನಿರತ್ನ ಸದ್ಯ ಅನರ್ಹ ಶಾಸಕ. ಅನರ್ಹರಾದವರು ಹೇಗೆ ‘ಶಾಸಕರು’ ಅಂತ ನಮೂದಿಸುತ್ತಾರೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
Hockey india – ಕೇಸರಿ Vs ನೀಲಿ..! ಹಾಕಿ ಇಂಡಿಯಾದಲ್ಲಿ “ಬಣ್ಣದ” ರಾಜಕೀಯ..!
ಕೇಸರಿ ಬಣ್ಣ - ಧೈರ್ಯ, ತ್ಯಾಗ, ಶಕ್ತಿ ಮತ್ತು ಸೇವಾಭಾವದ ಪ್ರತೀಕ ನೀಲಿ ಬಣ್ಣ - ಶಾಂತಿ, ವಿಶ್ವಾಸ, ಜ್ಞಾನ ಮತ್ತು ಸ್ಥಿರತೆಯ ಸಂಕೇತ. ಈಗ ಹೇಳಿ.....








