ಮುನಿರತ್ನ ಕಣ್ಣೀರು : ಡ್ರಾಮಾ ಬೇಡ ಎಂದ ಡಿ.ಕೆ.ಸುರೇಶ್
ಬೆಂಗಳೂರು : ಆರ್ ಆರ್ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ರಕ್ತ ಒಂದು ವರ್ಷದ ಹಿಂದೆ ಕೆಂಪು ಇತ್ತು. ಈಗ ಕೇಸರಿ ಆಗಿದೆ ಎಂದು ಸಂಸದ ಡಿ.ಕೆ.ಸುರೇಶ್, ಮುನಿರತ್ನರ ಕಾಲೆಳೆದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ಕಾಂಗ್ರೆಸ್ ಪಕ್ಷ ನನ್ನ ತಾಯಿ ಅಂತ ಮುನಿರತ್ನ ಅವರೇ ಹೇಳಿದ್ದರು. ಅದನ್ನ ನಾನು ಹೇಳಿದ್ದೇನೆ. ಅವರು ಕಟ್ ಅಂಡ್ ಪೇಸ್ಟ್ ಮಾಡಿ ಡ್ರಾಮಾ ಮಾಡೋದು ಬೇಡ. ಕಾಂಗ್ರೆಸ್ ನನ್ನ ತಾಯಿ, ಕಾಂಗ್ರೆಸ್ ನನ್ನ ರಕ್ತ ಅಂದಿದ್ದು ಅವರೇ.
ಎಲ್ಲೆಲ್ಲಿ ಯಾವುದನ್ನ ಕಟ್ ಮಾಡಬೇಕು ಯಾವುದನ್ನ ಪೇಸ್ಟ್ ಮಾಡಬೇಕು ಅನ್ನೋದು ಅವರಿಗೆ ಚೆನ್ನಾಗಿ ಗೊತ್ತು. ಕಟ್ ಪೇಸ್ಟ್ ಅವರ ವೃತ್ತಿ ಅಲ್ವಾ ಚೆನ್ನಾಗಿ ಮಾಡ್ತಾರೆ ಎಂದು ಮುನಿರತ್ನ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.
ಮುನಿರತ್ನ ನಿರ್ಮಾಪಕರು, ಅವರಿಗೆ ಕಣ್ಣಿರು ಹಾಕುವುದು, ಹಾಕಿಸುವುದು ಚೆನ್ನಾಗಿ ಗೊತ್ತಿದೆ. ಯಾರ ಬಳಿ ಬೇಕಿದ್ದರೂ ಕಣ್ಣೀರು ಹಾಕಿಸುತ್ತಾರೆ. ಜೋಡಿಸುವುದರಲ್ಲಿ ಕಟ್ ಮಾಡುವುದರಲ್ಲಿ ಅವರಿಗೆ ಹೇಳಿ ಕೊಡಬೇಕಾಗಿಲ್ಲ.
ಮುನಿರತ್ನ ಇವತ್ತು ಡ್ರಾಮ ಶುರು ಮಾಡಿದ್ದಾರೆ. ನನ್ನ ತಾಯಿ, ನನ್ನ ಉಸಿರು, ನನ್ನ ರಕ್ತ ಕಾಂಗ್ರೆಸ್ ಅಂತ ಹೇಳಿದ್ದರು. ನೀವು ನಿರ್ಮಾಪಕರು ಯಾರನ್ನ ಬೇಕಾದ್ರು ಕಣ್ಣೀರು ಹಾಕಿಸ್ತೀರಿ, ಯಾರನ್ನ ಬೇಕಾದ್ರು ನಗಿಸ್ತೀರಾ..
ಇದನ್ನೂ ಓದಿ : ಕುಸುಮಾ ಡಿ.ಕೆ.ರವಿ ತಂದೆ-ತಾಯಿಯನ್ನೇ ನೋಡ್ಲಿಲ್ಲ, ನಿಮ್ಮ ಕಷ್ಟ ಕೇಳ್ತಾರಾ : ಹೆಚ್ ಡಿಕೆ
ಮುನಿರತ್ನ ಪಕ್ಷ ಬಿಟ್ಟು ತಾಯಿಗೆ ದ್ರೋಹ ಮಾಡಿದ್ರು ಅಂತ ನಾನು ಸಹ ಅವರ ಬಗ್ಗೆ ಮಾತನಾಡಿದ್ದೇನೆ. ಅವರೇ ಹೇಳಿದ್ದಾರೆ ನನ್ನ ತಾಯಿ ಕಾಂಗ್ರೆಸ್ ಅಂತ. ಅವರ ರಕ್ತ ಒಂದು ವರ್ಷದ ಹಿಂದೆ ಕೆಂಪು, ಈಗ ಕೇಸರಿ ಆಗಿದೆ.
ಇದು ಪಕ್ಷದ ವಿಚಾರ ಮಾತನಾಡಿದ್ದೇವೆ. ವೈಯಕ್ತಿಕ ವಿಚಾರಗಳು ಯಾರೂ ಮಾತನಾಡಿಲ್ಲ. ನಾವು ಜವಾಬ್ದಾರಿ ಸ್ಥಾನದಲ್ಲಿ ಇದ್ದೇವೆ ಎಂದು ಮುನಿರತ್ನ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ವೇಳೆ ಕಂದಾಯ ಸಚಿವ ಆರ್.ಅಶೋಕ್ ರ ಆರ್ ಆರ್ ನಗರದಲ್ಲಿ ಜೆಡಿಎಸ್-ಬಿಜೆಪಿ ನಡುವೆ ಫೈಟ್ ಇದೆ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ಈಗ ನಾನು ಮಾತನಾಡಲ್ಲ, ಮೂರರಂದು ಗೊತ್ತಾಗುತ್ತೆ.
ಇದನ್ನೂ ಓದಿ : ಯಡಿಯೂರಪ್ಪ ಮತ್ತು ಮೋದಿ ಎಳೆ ಕಡಸುಗಳಾ? : ಸಿದ್ದರಾಮಯ್ಯ
ಅಶೋಕ್ ಹಾಗು ಒಕ್ಕಲಿಗ ಸಚಿವರಿಗೆ ಒಳ್ಳೆಯದಾಗ್ಲಿ. ಮೂರನೇ ತಾರೀಕಿನ ಬಳಿಕ ಯಾರು ಮೊದಲು ಯಾರು ಬಳಿಕ ಅನ್ನೋದು ಗೊತ್ತಾಗುತ್ತೆ ಎಂದು ಹೇಳಿದರು.
ಮುನಿರತ್ನ ಕಣ್ಣೀರು
ಮುನಿರತ್ನ ತನ್ನ ತಾಯಿಯನ್ನ ಬಿಜೆಪಿಗೆ ಮಾರಾಟ ಮಾಡಿದ್ದಾನೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಇಂದು ಪ್ರತಿಕ್ರಿಯೆ ನೀಡಿದ ಮುನಿರತ್ನ, ಕಾಂಗ್ರೆಸ್ ನಾಯಕರು ನನ್ನ ಬಗ್ಗೆ ಟೀಕೆಗಳನ್ನ ಮಾಡುತ್ತಿದ್ದಾರೆ.
ಇಲ್ಲ ಸಲ್ಲದ ಆರೋಪಗಳನ್ನ ಮಾಡುವ ಮೂಲಕ ಪ್ರಚಾರ ನಡೆಸುತ್ತಿರುವದಕ್ಕೆ ನನ್ನ ವಿರೋಧವಿಲ್ಲ. ತೀರಿ ಹೋಗಿರುವ ನನ್ನ ತಾಯಿಯನ್ನ ಮಾರಾಟ ಮಾಡಿದ್ದೀರಿ ಅಂತ ಹೇಳಿದ್ದೀರಿ. ನಮ್ಮ ಅಮ್ಮ ಸಾವನ್ನಪ್ಪಿ 25 ವರ್ಷ ಆಗಿದೆ. ಮುನಿರತ್ನ ತಾಯಿಯನ್ನ ಮಾರಾಟ ಮಾಡಿದ್ದಾನೆ ಎಂಬ ಹೇಳಿಕೆ ನಿಮಗೆ ಶೋಭೆ ತರುತ್ತಾ? ಎಂದು ಪ್ರಶ್ನಿಸಿದರು.
ನನಗೆ ಜನ್ಮ ಕೊಟ್ಟ ತಾಯಿ ಬಗ್ಗೆ ಮಾತನಾಡಬೇಡಿ. ನನ್ನ ಬಗ್ಗೆ ಮಾತಾಡಿ, ಟೀಕಿಸಿ ನಾನು ಬೇಡ ಅಂತ ಹೇಳಲ್ಲ. ಚುನಾವಣೆಯಲ್ಲಿ ತಾಯಿ ಬಗ್ಗೆ ಮಾತನಾಡೋದು ಏಕೆ? ಸತ್ತು ಹೋಗಿರುವ ತಾಯಿಯನ್ನ ಎಲ್ಲಿಂದ ಮಾರಾಟ ಮಾಡಲಿ? ಎಲ್ಲಿಂದ ನಮ್ಮ ತಾಯಿಯನ್ನ ಕರೆದುಕೊಂಡು ಬರಲಿ ಎಂದು ಕಾಂಗ್ರೆಸ್ ನಾಯಕರಿಗೆ ಕೈ ಮುಗಿದು ಮುನಿರತ್ನ ಕಣ್ಣೀರಿಟ್ಟರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










