ವಾಗ್ವಾದ ನಡೆಸಿದ್ದಕ್ಕೆ ಬಾಲಕನ ಕೊಂದೇ ಬಿಟ್ಟರು ಸ್ನೇಹಿತರು
ಮಹಾರಾಷ್ಟ್ರ : ಬಾವಿಯೊಂದರಲ್ಲಿ 16 ವರ್ಷದ ಬಾಲಕನ ಮೃತದೇಹ ಸಿಕ್ಕಿದ್ದು, ಮೊದಲಿಗೆ ಪೊಲೀಸರು ಇದೊಂದು ಆಕಸ್ಮಿಕ ಸಾವೆಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದ್ರೆ ತನಿಖೆಯ ನಂತರ ಸ್ನೇಹಿತರೇ ಆತನನ್ನ ಬಾವಿಗೆ ತಳ್ಳಿ ಕೊಲೆ ಮಾಡಿರುವುದು ಬಯಲಾಗಿದೆ. ಅಂದ್ಹಾಗೆ ಇಂತಹದೊಂದು ಘಟನೆ ನಡೆದಿರೋದು ಮಹಾರಾಷ್ಟ್ರದ ಪುಣೆಯಲ್ಲಿ.
16 ವರ್ಷದ ಬಾಲಕ ಸ್ನೇಹಿತರ ಜೊತೆಗೆ ಯಾವುದೋ ವಿಚಾರವಾಗಿ ವಾಗ್ವಾದ ಮಾಡಿದ್ದಾನೆ. ಈ ವೇಳೆ ಆತನ ಸ್ನೇಹಿತರೇ ರೊಚ್ಚಿಗೆದ್ದು ಬಾಲಕನನ್ನ ಬಾವಿಗೆ ತಳ್ಳಿ ಕೊಂದು ಹಾಕಿದ್ದಾರೆ. ಬಳಿಕ ಪೊಲೀಸರ ಬಳಿ ಆತನ ಕಾಲು ಜಾರಿ ಬಿದ್ದಿರುವುದಾಗಿ ಹೇಳಿದ್ದಾರೆ.
ಆದ್ರೆ ಬಾಲಕನ ತಂದೆ ಮಾತ್ರ ಬಾಲಕನ ಸ್ನೇಹಿತರ ಮೇಲೆ ಅನುಮಾನ ವ್ಯಕ್ತಪಡಿಸಿದ್ಧಾರೆ. ಇದಾದ ಬಳಿಕ ಸ್ನೇಹಿತರ ವಿಚಾರಣೆ ನಡೆಸಿದಾಗ ಬಾಲಕರು ಹೆದರಿ ನಡೆದ ವಿಚಾರವನ್ನ ಬಾಯ್ಬಿಟ್ಟಿದ್ದಾರೆ. ಹೀಗಾಗಿ ಕೊಲೆ ಪ್ರಕರಣ ದಾಖಲಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.







