ಆಸ್ತಿ ವಿವಾದದ ಹಿನ್ನೆಲೆ ವ್ಯಕ್ತಿಯ ಬರ್ಬರ ಕೊಲೆ

1 min read
darawada saaksha tv

ಆಸ್ತಿ ವಿವಾದದ ಹಿನ್ನೆಲೆ ವ್ಯಕ್ತಿಯ ಬರ್ಬರ ಕೊಲೆ

ಧಾರವಾಡ : ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಆಯಟ್ಟಿ ಗ್ರಾಮದಲ್ಲಿ ನಡೆದಿದೆ.

58 ವರ್ಷದ ವಿರುಪಾಕ್ಷಪ್ಪ ಆಚಮಟ್ಟಿ ಕೊಲೆಯಾದ ವ್ಯಕ್ತಿಯಾಗಿದ್ದಾರೆ. ಆಯಟ್ಟಿ ಗ್ರಾಮದ ಲಕ್ಷಣ ಕೊಲೆ ಆರೋಪಿಯಾಗಿದ್ದಾರೆ.

ಈ ಇಬ್ಬರ ನಡುವೆ ಆಸ್ತಿ ವಿಚಾರವಾಗಿ ಹಲವು ವರ್ಷಗಳಿಂದ ಗಲಾಟೆ ನಡೆಯುತ್ತಿತ್ತು.

darawada saaksha tv

ಇಂದು ಇಬ್ಬರೂ ಮುಖಾಮುಖಿಯಾಗಿದ್ದು, ಜಗಳವಾಡಿದ್ದಾರೆ.

ಈ ವೇಳೆ ಮಾತಿಗೆ ಮಾತು ಬೆಳೆದು ಲಕ್ಷ್ಮಣ ವಿರೂಪಾಕ್ಷನಿಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ.

ಸದ್ಯ ಆರೋಪಿಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd