Bangalore | ಶಾಸಕರ ಕಚೇರಿ ಬಳಿ ವೃದ್ಧನ ಭೀಕರ ಹತ್ಯೆ!
ಬೆಂಗಳೂರು ನಗರದ ಚಾಮರಾಜಪೇಟೆ 4ನೇ ಕ್ರಾಸ್ ಬಳಿಯ ಶಾಸಕರ ಕಚೇರಿ ಸಮೀಪವಿರುವ ಅಪಾರ್ಟ್ ಮೆಂಟ್ ನಲ್ಲಿ ವೃದ್ಧರೊಬ್ಬರ ಭೀಕರ ಕೊಲೆ ನಡೆದಿದೆ.
77 ವರ್ಷದ ಜುಗ್ಗರಾಜ್ ಜೈನ್ ಕೊಲೆಯಾದವರಾಗಿದ್ದಾರೆ. ಈತ ದೀಪಂ ಎಲೆಕ್ಟ್ರಿಕಲ್ಸ್ ಎಂಬ ಅಂಗಡಿ ಇಟ್ಟುಕೊಂಡಿದ್ದರು.
ಹೀಗಾಗಿ ಹಣಕ್ಕಾಗಿ ಕೆಲಸಗಾರನೇ ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಚಾಮರಾಜಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾತ್ರಿ ಜುಗ್ಗರಾಜ್ ಹಾಗೂ ಅಂಗಡಿ ಕೆಲಸಗಾರ ಇಬ್ಬರೆ ರಾತ್ರಿ ಮನೆಯಲಿದ್ದರು.
ಇಂದು ಬೆಳಗ್ಗೆ ಸಮಯ ಕಳೆದರೂ ಅಂಗಡಿ ತೆರೆಯದೇ ಇದ್ದಾಗ ಮೊಮ್ಮಗ ಮನೆಗೆ ತೆರಳಿದ್ದಾನೆ.
ಈ ವೇಳೆ ಜುಗ್ಗರಾಜು ಅವರ ಕೊಲೆ ನಡೆದಿರುವುದು ತಿಳಿದುಬಂದಿದೆ.
ಕೊಲೆ ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಘಟನಾ ಸ್ಥಳಕ್ಕೆ ಎಫ್ ಎಸ್ ಎಲ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಶಂಕಿತ ಆರೋಪಿ ತನ್ನ ಊರು ಜೈಪುರಕ್ಕೆ ತೆರಳಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಕೊಲೆಯ ನಂತರ ಹಂತಕ ಮನೆಯಲ್ಲಿದ್ದ ಅಪಾರ ಪ್ರಮಾಣದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. murder of old man near mla office at Bangalore