ಮುಂಬೈ, ಜೂನ್ 1 : ಸಲ್ಮಾನ್ ಖಾನ್ ಅವರ ಹಾಡುಗಳಾದ ‘ಪ್ಯಾರ್ ಕರೋನಾ’ ಮತ್ತು ‘ಭಾಯ್ ಭಾಯ್’ ಸಂಯೋಜಿಸಿದ ಹೆಸರಾಂತ ಸಂಗೀತ ಸಂಯೋಜಕ ವಾಜಿದ್ ಖಾನ್ ಅವರು ಭಾನುವಾರ ರಾತ್ರಿ ನಿಧನರಾದರು. 42 ವರ್ಷದ ವಾಜಿದ್ ಖಾನ್ ಕಿಡ್ನಿ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು ಕೆಲವೇ ತಿಂಗಳುಗಳ ಹಿಂದೆ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಗೆ ಒಳಗಾಗಿದ್ದರು. ಕೆಲವು ದಿನಗಳ ಹಿಂದೆ ಅವರಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು.
ಆರೋಗ್ಯ ತೀವ್ರ ಹದಗೆಟ್ಟ ಹಿನ್ನಲೆಯಲ್ಲಿ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿದ್ದ ವಾಜಿದ್ ಖಾನ್ ಭಾನುವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ.
ಅನೇಕ ಚಲನಚಿತ್ರಗಳಿಗೆ ಸಹೋದರ ಸಾಜಿದ್ ಖಾನ್ ಜೊತೆ ಸೇರಿ ವಾಜಿದ್ ಖಾನ್ ಸಂಗೀತ ಸಂಯೋಜಿಸಿದ್ದರು. ಅವರ ನಿಧನಕ್ಕೆ ಬಾಲಿವುಡ್ ತಾರೆಯರು ಕಂಬನಿ ಮಿಡಿದಿದ್ದಾರೆ.






