ಆಂಜನೇಯನ ದೇಗುಲಕ್ಕೆ 1 ಕೋಟಿ ಮೌಲ್ಯದ ಭೂಮಿ ನೀಡಿದ ಮುಸ್ಲಿಂ ವ್ಯಕ್ತಿ!
ಬೆಂಗಳೂರು : ಹೊಸಕೋಟೆ ತಾಲೂಕಿನ ವಾಲಗೇರಪುರದಲ್ಲಿ ಆಂಜನೇಯ ದೇಗುಲ ಜೀರ್ಣೋದ್ಧಾರಕ್ಕೆ ಮುಸ್ಲಿಂ ವ್ಯಕ್ತಿಯೊಬ್ಬರು ಸುಮಾರು 1 ಕೋಟಿ ಬೆಲೆಬಾಳುವ ತಮ್ಮ ಭೂಮಿಯನ್ನ ದಾನ ಮಾಡಿದ್ದಾರೆ.
ಈ ಕುರಿತು ಬ್ಯಾನರ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರು ನಗರದ ಕಾಡುಗೋಡಿ ಬೆಳತೂರು ಕಾಲನಿ ನಿವಾಸಿಯಾಗಿರುವ ಎಚ್.ಎಂ.ಜಿ ಬಾಷಾ ಅವರು ಈ ಮಹಾನ್ ಕಾರ್ಯ ಮಾಡಿದವರಾಗಿದ್ದಾರೆ.
ವಾಲಗೇರಪುರದಲ್ಲಿ ಎಚ್ ಎಂ ಜಿ ಬಾಷಾ ಅವರ 3 ಎಕರೆ ಭೂಮಿಯಿದ್ದು, ಅದರಲ್ಲಿ 1.5 ಗುಂಟೆ ಜಾಗವನ್ನು ಉಚಿತವಾಗಿಯೇ ದೇಗುಲಕ್ಕೆ ದಾನ ಮಾಡಿದ್ದಾರೆ. ಆ ಮೂಲಕ ಭಾವೈಕ್ಯತೆಯನ್ನ ಸಾರಿದ್ದಾರೆ.
ಇನ್ನು ಈ ಬಗ್ಗೆ ಸುದ್ದಿಸಂಸ್ಥೆ ಜೊತೆ ಮಾತನಾಡಿರುವ ಬಾಷಾ ಅವರು, ಗ್ರಾಮದ ಜನ್ರು ಹಿಂದೂ ಮತ್ತು ಮುಸ್ಲಿಂ ಒಂದೇ ಎಂಬುದನ್ನು ಅವರು ಪರಿಗಣಿಸುತ್ತಾರೆ.
ಕೆಲ ರಾಜಕೀಯ ಮುಖಂಡರು ತಮ್ಮ ಸ್ವಂತ ಲಾಭಕ್ಕಾಗಿ ಮಾತನಾಡುವಾಗ ಜನರ ಧರ್ಮವನ್ನು ಎತ್ತಿ ತೋರಿಸುತ್ತಾರೆ. ಪ್ರಸ್ತುತ ಪೀಳಿಗೆ ಕೋಮುವಾದಿ ಮಾರ್ಗಗಳಲ್ಲಿ ಹೆಚ್ಚು ಯೋಚಿಸುತ್ತಿದೆ.
`ಲವ್ ಜಿಹಾದ್’, `ಗೋಹತ್ಯಾ’ ಮುಂತಾದ ವಿಷಯಗಳ ಬಗ್ಗೆ ನಾವು ದಿನನಿತ್ಯ ಕೇಳುತ್ತೇವೆ. ದೇಶವು ಈ ರೀತಿಯಾದರೆ ಪ್ರಗತಿ ಹೊಂದುತ್ತದೆಯೇ?
ನಾವು ಒಗ್ಗಟ್ಟಾಗಬೇಕು ಮತ್ತು ನಮ್ಮ ದೇಶದ ಬಗ್ಗೆ ನಮಗೆ ಪ್ರೀತಿ ಇರಬೇಕು ಎಂದು ಅವರು ವಿವರಿಸಿದ್ದಾರೆ.
ಅಂದಹಾಗೆ ಈ ಜಮೀನು ಓಲ್ಡ್ ಮದ್ರಾಸ್ ರಸ್ತೆಯ ಪಕ್ಕದಲ್ಲಿಯೇ ಹಾದುಹೋಗುವ ಹೆದ್ದಾರಿಯ ಸಮೀಪದಲ್ಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel