ಹಿಂದೂ ಸಮಾಜದ ಅಭಿವೃದ್ಧಿಯೇ ನನ್ನ ಗುರಿ : ಈಶ್ವರಪ್ಪ
ಶಿವಮೊಗ್ಗ : ಸಂಘಟನೆ ನೀಡುವ ಯಾವುದೇ ಜವಾಬ್ದಾರಿ ವಹಿಸಿಕೊಳ್ಳಲು ನಾನು ಸಿದ್ಧ. ಹಿಂದೂ ಸಮಾಜದ ಅಭಿವೃದ್ಧಿಯೇ ನನ್ನ ಗುರಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಾಯಕತ್ವ ಬದಲಾವಣೆ ಬಗ್ಗೆ ಕಟೀಲ್ ಆಡಿಯೋ ಬಗ್ಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಕಟೀಲ್ ಅವರದ್ದು ಎನ್ನಲಾದ ಆಡಿಯೋ ಯಾರೋ ಸೃಷ್ಟಿ ಮಾಡಿರುವಂಥದ್ದು. ಅವರು ಆ ರೀತಿ ಹೇಳಲೇ ಇಲ್ಲ. ಅವರ ಧ್ವನಿಯನ್ನು ಅನುಕರಣೆ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕರು ಈ ರೀತಿ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಇನ್ನು ಆಡಿಯೋದಲ್ಲಿ ಮಂತ್ರಿಸ್ಥಾನ ಹೋಗುವ ಬಗ್ಗೆ ಪ್ರಸ್ತಾಪವಾಗಿರುವ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ಮಂತ್ರಿ ಸ್ಥಾನ ಹೋದರೆ ನನಗೆ ಯಾವುದೇ ಚಿಂತೆ ಇಲ್ಲ. ಇದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಪಕ್ಷದ ಸಂಘಟನೆಯ ಕೆಲಸ ನಿರಂತರವಾಗಿ ಮುಂದುವರಿಸುತ್ತೇನೆ. ಸಂಘಟನೆ ನೀಡುವ ಯಾವುದೇ ಜವಾಬ್ದಾರಿ ವಹಿಸಿಕೊಳ್ಳಲು ನಾನು ಸಿದ್ಧ. ಇಡೀ ದೇಶದಲ್ಲಿ ಯುವಕರಿಗೆ ಜವಾಬ್ದಾರಿ ಕೊಡುತ್ತಿದ್ದಾರೆ. ನಳಿನ್ ಕುಮಾರ್ ನೇತೃತ್ವದಲ್ಲಿ ರಾಜ್ಯದಲ್ಲಿ ಸಂಘಟನೆ ಅತ್ಯದ್ಭುತವಾಗಿ ಬೆಳೆಯುತ್ತಿದೆ. ಹಿಂದೂ ಸಮಾಜದ ಅಭಿವೃದ್ಧಿಯೇ ನನ್ನ ಗುರಿ ಎಂದು ಸ್ಪಷ್ಟಪಡಿಸಿದ್ದಾರೆ.