ಮೊಟ್ಟೆ ಹಂಚಿಕೆ ವಿಚಾರದಲ್ಲಿ ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ : ಪೇಜಾವರ ಶ್ರೀ ಅಸಮಾಧಾನ pejawara shri saaksha tv
ಉಡುಪಿ : ಮೊಟ್ಟೆ ಹಂಚಿಕೆ ವಿಚಾರದಲ್ಲಿ ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ ಎಂದು ಪೇಜಾವರ ವಿಶ್ವೇಶ್ವತೀರ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಲೆಗಳಲ್ಲಿ ಮೊಟ್ಟೆ ವಿತರಣೆ ವಿಚಾರವಾಗಿ ಮಾತನಾಡಿರುವ ಅವರು, ಮೊಟ್ಟೆ ವಿಚಾರದಲ್ಲಿ ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ.
ನನ್ನ ಅಭಿಪ್ರಾಯವನ್ನು ತಿರುಚಿ ಸಮಾಜವನ್ನು ನನ್ನ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನ ಮಾಡುತ್ತಿವೆ ಎಂದು ಮಾಧ್ಯಮಗಳ ಮೇಲೆ ಪೇಜಾವರ ಶ್ರೀ ಗರಂ ಆಗಿದ್ದಾರೆ.
ಇನ್ನು ಇದನ್ನ ನಾನು ಖಂಡಿಸುತ್ತೇನೆ. ಆಹಾರದ ಹಕ್ಕು, ಸ್ವಾತಂತ್ರ್ಯ ಎಲ್ಲರಿಗೂ ಇದೆ. ಶಾಲೆಗಳಲ್ಲಿ ಸಸ್ಯಹಾರಿ ವಿದ್ಯಾರ್ಥಿಗಳಿರುತ್ತಾರೆ.
ಕೆಲವರಿಗೆ ಮೊಟ್ಟೆ ಕೊಟ್ಟು ಕೆಲವರಿಗೆ ಕೊಡದೆ ಇದ್ದಾಗ ಮತಭೇದ ಉಂಟಾಗುತ್ತದೆ.
ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಸಾಮೂಹಿಕವಾಗಿ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದೆ.
ಆದರೆ ಮಾಧ್ಯಮಗಳು ಒಂದು ಮೊಟ್ಟೆ ಕಥೆ ಎಂದು ಶೀರ್ಷಿಕೆಯಡಿ ನನ್ನ ಹೇಳಿಕೆಯನ್ನು ತಿರುಚಿವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.