ಮ್ಯಾಮ್ಮಾರ್ ಮಿಲಿಟರಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಬ್ರಿಟನ್..!
ಬ್ರಿಟನ್ : ಮ್ಯಾನ್ಮಾರ್ ನಲ್ಲಿ ಅಸ್ವಾಬಾವಿಕವಾಗಿ ಅಧಿಕಾರ ವಹಿಸಿಕೊಂಡಿರುವ ಮಿಲಿಟರಿ ಸರ್ಕಾರ ಪ್ರಜಾಪ್ರಭುತ್ವದ ಹಕ್ಕನ್ನ ಕಸಿದಿದ್ದು, ಜನರು ಮಿಲಿಟರಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ ಈ ಹೋರಾಟದಲ್ಲಿ 500ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಮ್ಯಾನ್ಮಾರ್ ನ ಮಿಲಿಟರಿ ಸರ್ಕಾರದ ಧೋರಣೆ , ಶೋಷಣೆ ವಿರುದ್ಧ ಇತ್ತೀಚೆಗಷ್ಟೇ ವಿಶ್ವದ ದೊಡ್ಡಣ್ಣ ಅಮೆರಿಕಾ ತಿರುಗಿಬಿದ್ದಿತ್ತು. ವಿಶ್ವಸಂಸ್ಥೆಯಲ್ಲಿ ಮ್ಯಾನ್ಮಾರ್ ಸೇನಾ ಅಧಿಪತ್ಯವನ್ನ ಭಾರತವು ತೀವ್ರವಾಗಿ ವಿರೋಧಿಸಿತ್ತು. ಇದೀಗ ಬ್ರಿಟನ್ ಮ್ಯಾನ್ಮಾರ್ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದು, ಆರ್ಥಿಕವಾಗಿ ಮಿಲಿಟರಿ ಸರ್ಕಾರಕ್ಕೆ ಪೆಟ್ಟು ನೀಡಿದೆ.
ಗಂಭೀರ ಮಾನವಹಕ್ಕುಗಳ ಉಲ್ಲಂಘನೆಗಳಲ್ಲಿ ವಹಿಸಿರುವ ಪಾತ್ರಕ್ಕಾಗಿ ಮ್ಯಾನ್ಮಾರ್ ಆರ್ಥಿಕ ನಿಗಮದ ವಿರುದ್ಧ ಬ್ರಿಟನ್ ಸರ್ಕಾರ ದಿಗ್ಬಂಧನಗಳನ್ನ ಘೋಷಿಸಿದೆ. ಮ್ಯಾನ್ಮಾರ್ ಸೇನೆಯೊಂದಿಗೆ ನಂಟು ಹೊಂದಿರುವ ಈ ನಿಗಮದ ವಿರುದ್ಧ ಅವೆುರಿಕ ಕ್ರಮಗಳನ್ನು ತೆಗೆದುಕೊಂಡ ಒಂದು ವಾರದ ಬಳಿಕ ಬ್ರಿಟನ್ ದಂಡನಾ ಕ್ರಮಗಳನ್ನು ತೆಗೆದುಕೊಂಡಿದೆ. ಈ ದಿಗ್ಬಂಧನಗಳ ಮೂಲಕ ಮ್ಯಾನ್ಮಾರ್ ಮಿಲಿಟರ ಸರ್ಕಾರಕ್ಕೆ ಆರ್ಥಿಕವಾಗಿ ಪೆಟ್ಟು ನೀಡಲು ಬ್ರಿಟನ್ ಹೊರಟಿದೆ.
ಹಳಿ ತಪ್ಪಿದ ರೈಲು – 36 ಕ್ಕೂ ಹೆಚ್ಚು ಮಂದಿ ಸಾವು , 70ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ..!
ಮತ್ತೆ ಲಾಕ್ ಡೌನ್ ಫಿಕ್ಸ್..? ಒಂದೇ ದಿನ ದೇಶದಲ್ಲಿ ಪತ್ತೆಯಾಯ್ತು 81 ಸಾವಿರ ಕೇಸ್..!