MYNTRA ಸಂಸ್ಥೆ ಲೋಗೋ ವಿವಾದ : ಬದಲಾಗಿದ್ದೇಕೆ..?
ಇ ಕಾಮರ್ಸ್ ದೈತ್ಯ FLIPCART ಒಡೆತನದ, ಫ್ಯಾಷನ್ ಇ ರಿಟೇಲರ್ ಆನ್ ಲೈನ್ಸ್ ಸೆಲ್ಲಿಂಗ್ ಸಂಸ್ಥೆಯಾಗಿರೋ MYNTRA ತನ್ನ ಲೋಗೋವನ್ನು ಅಧಿಕೃತವಾಗಿ ಬದಲಾಯಿಸಿಕೊಂಡಿದೆ. ಹೌದು ಈ ಹಿಂದಿನ MYNTRA ಲೋಗೋ ಮಹಿಳೆಯರಿಗೆ ಅವಮಾನ ಮಾಡುವ ರೀತಿಯಲ್ಲಿತ್ತು ಎಂದು ಕಳೆದ ತಿಂಗಳು ಅವೆಸ್ತಾ ಸಂಸ್ಥೆಯ ನಾಜ್ ಪಟೇಲ್ ಅವರು ಪೊಲೀಸರಿಗೆ ದೂರು ನೀಡಿದ್ರು. ಜೊತೆಗೆ ಮಿಂತ್ರಾ ಸಂಸ್ಥೆಗೂ ಈ ಬಗ್ಗೆ ತಿಳಿಸಲಾಗಿತ್ತು.
ಅತ್ತೆಯೊಂದಿಗೆ ಹೊಲಕ್ಕೆ ಹೋದ ಬಾಲಕಿ ಮೇಲೆ ಅತ್ಯಚಾರ : ಕೃತ್ಯಕ್ಕೆ ಸಾಥ್ ನೀಡಿದ ಅತ್ತೆ..!
ಮಹಿಳಾ ಸಂಘಟನೆಗಳ ಆಕ್ಷೇಪಕ್ಕೆ ಸಮ್ಮತ ವ್ಯಕ್ತಪಡಿಸಿದ MYNTRA ಸಂಸ್ಥೆ ತನ್ನ ಲೋಗೋದಲ್ಲಿ ಬದಲಾವಣೆ ಮಾಡಿಕೊಂಡಿದ್ದು, ಈಗ ವೆಬ್ ಸೈಟ್, ಆಪ್, ಪ್ಯಾಕೇಜಿಂಗ್ ಪದಾರ್ಥ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಹೊಸ ಲೋಗೋ ಹರಿದಾಡ್ತಿದೆ. ಹಳೆ ಲೋಗೋ ನೋಡಿದರೆ ಮಹಿಳೆಯೊಬ್ಬರು ನಗ್ನವಾಗಿ ಕಾಲು ಚಾಚಿ ಮಲಗಿಕೊಂಡಂತೆ ಭಾಸವಾಗುತ್ತಿದ್ದು, ಈ ಬಗ್ಗೆ ದೂರುಗಳು ಕೇಳಿ ಬಂದಿದ್ದರಿಂದ ಸರ್ಕಾರೇತರ ಸಂಸ್ಥೆ ಅವೆಸ್ತಾ ಫೌಂಡೇಷನ್ ಈ ವಿಷಯದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ರು.
KGF -2 ರಿಲೀಸ್ ದಿನ ರಜಾ ಬೇಕಂತೆ : ಪ್ರಧಾನಿ ಮೋದಿಗೆ ಪತ್ರ ಬರೆದ ಫ್ಯಾನ್..!
ಅವರು ಡಿಸೆಂಬರ್ ತಿಂಗಳಲ್ಲಿ ಮುಂಬೈ ಸೈಬರ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿ, ಸೂಕ್ತ ವಿವರ ಪಡೆದುಕೊಂಡ ಪೊಲೀಸರು ಇಮೇಲ್ ಮೂಲಕವೇ ಮಿಂತ್ರಾ ಸಂಸ್ಥೆಗೆ ಬಿಸಿ ಮುಟ್ಟಿಸಿದ್ರು. ಈ ಕುರಿತಂತೆ ಮಿಂತ್ರಾ-ಫ್ಲಿಪ್ ಕಾರ್ಟ್ ಸಂಸ್ಥೆಯ ಹಿರಿಯ ಅಧಿಕಾರಿಗಳು ಸಭೆ ಸೇರಿ ಚರ್ಚಿಸಿ, ಲೋಗೋ ಬದಲಾಯಿಸಲು ನಿರ್ಧಾರ ಮಾಡಿದ್ದು, ಇದೀಗ ಹೊಸ ಲೋಗೋ ತಂದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








