KGF -2 ರಿಲೀಸ್ ದಿನ ರಜಾ ಬೇಕಂತೆ : ಪ್ರಧಾನಿ ಮೋದಿಗೆ ಪತ್ರ ಬರೆದ ಫ್ಯಾನ್..!
ಬೆಂಗಳೂರು: ಇಡೀ ಭಾರತೀಯ ಸಿನಿಮಾರಂಗವೇ ಜಾತಕ ಪಕ್ಷಿಗಳಂತೆ ಕಾಯ್ತಿರುವ KGF 2 ಸಿನಿಮಾ ಸಿನಿ ಪ್ರಿಯರು ಹಾಗೂ ನಟ ಯಶ್ ಅಭಿಮಾನಿಗಳ ಕಾತರತೆಯನ್ನ ಹೆಚ್ಚಿಸಿದೆ. ಇದ್ರ ಬೆನ್ನಲ್ಲೇ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದೆ. ಹೌದು ಜುಲೈ.16ರಂದು ಚಿತ್ರ ಬಿಡುಗಡೆಯ ದಿನಾಂಕ ನಿಗದಿಗಿದೆ. ಆದ್ರೆ ಇದೀಗ ಯಶ್ ಅಭಿಮಾನಿಗಳು ಹೊಸದೊಂದು ಡಿಮಾಂಡ್ ಮಾಡೋಕೆ ಶುರು ಮಾಡಿದ್ದಾರೆ. ನೇರವಾಗಿ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡ್ತಾಯಿದ್ದಾರೆ.
ಬಿಗ್ ಬಾಸ್ ಕನ್ನಡ 08 : ‘ರಾಖಿ ಭಾಯ್’ ತಾಯಿ ದೊಡ್ಮನೆಗೆ ಹೋಗೋದು ನಿಜಾನಾ..?
ಹೌದು ಚಿತ್ರ ಬಿಡುಗಡೆಯಾಗಲಿರುವ ದಿನ – ಜುಲೈ 16ರಂದು ರಾಷ್ಟ್ರೀಯ ರಜಾದಿನ ಎಂದು ಘೋಷಿಸುವಂತೆ ಅಭಿಮಾನಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಈ ಮೂಲಕ ಹೊಸ ಅಂಧಾಭಿಮಾನಕ್ಕೆ ನಾಂದಿ ಹಾಡಿದ್ದಾರೆ. ಅಭಿಮಾನದ ಎಲ್ಲಾ ಎಲ್ಲೆ ಮೀರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ಯಾಗ್ ಮಾಡಿ, ಪೋಸ್ಟ್ ಮಾಡಿರುವ ಅಭಿಮಾನಿಗಳು, ನಮ್ಮ ಪ್ರೀತಿಯ ಪ್ರಧಾನಿ ನರೇಂದ್ರ ಮೋದಿ ಜೀ, ಯಶ್ ಅಭಿಮಾನಿಗಳ ಭಾವೋದ್ವೇಗವನ್ನು ಅರ್ಥ ಮಾಡಿಕೊಳ್ಳಿ. ನಮ್ಮ ಭಾವನೆಯನ್ನು ಅರ್ಥ ಮಾಡಿಕೊಂಡು, ಕೆಜಿಎಫ್ ಚಾಪ್ಟರ್ -2 ಬಿಡುಗಡೆಯ ದಿನವಾದ ಜುಲೈ 16ರಂದು ನ್ಯಾಷನಲ್ ಹಾಲಿಡೇ ಘೋಷಿಸುವಂತೆ ಮನವಿ ಮಾಡಿದ್ದಾರೆ. ಈ ಟ್ವೀಟ್ ಈಗ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು, ಅನೇಕ ಅಭಿಮಾನಿಗಳು ಇದಕ್ಕೆ ಕಮೆಂಟ್ ಮಾಡಿ ರಜೆ ಬೇಕು ಎಂದು ಧ್ವನಿಗೂಡಿಸುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel