ಮೈಸೂರು ದಸರಾ : ಜಂಬೂಸವಾರಿಯಲ್ಲಿ 6 ಸ್ತಬ್ಧ ಚಿತ್ರಗಳು

1 min read

ಮೈಸೂರು ದಸರಾ : ಜಂಬೂಸವಾರಿಯಲ್ಲಿ 6 ಸ್ತಬ್ಧ ಚಿತ್ರಗಳು Mysore Dasara saaksha tv

ಮೈಸೂರು : ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ.

ಇಂದು ಆಯುಧ ಪೂಜೆ ಅಂಗವಾಗಿ ರಾಜವಂಶಸ್ಥರ ಆಯುಧಗಳಿಗೆ, ರಾಜಪರಿವಾರದ ಆನೆ, ಕುದುರೆ, ಹಸು, ಪಲ್ಲಕ್ಕಿಗೆ ಯದುವಂಶದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಿದ್ದಾರೆ.

ಇನ್ನು ಮೈಸೂರು ದಸರಾ ಮಹೋತ್ಸವಕ್ಕಾಗಿ ಅರಮನೆ ನಗರಿ ನವವಧುವಿನಂತೆ ಸಿಂಗಾರಗೊಂಡಿದೆ.

ನಾಳೆ ವಿಶ್ವವಿಖ್ಯಾತ ಜಂಬೂಸವಾರಿನಡೆಯಲಿದ್ದು, ಈ ಬಾರಿ ಮೆರವಣಿಗೆಯಲ್ಲಿ 6 ಸ್ತಬ್ಧ ಚಿತ್ರಗಳ ಜೊತೆಗೆ ನೂರಾರು ಜಾನಪದ ಕಲಾವಿದರು ಹೆಜ್ಜೆ ಹಾಕಲಿದ್ದಾರೆ.

Mysore Dasara saaksha tv

ಪ್ರತಿ ಸ್ತಬ್ಧಚಿತ್ರದ ಹಿಂದೆ ಎರಡು ಕಲಾತಂಡಗಳು ಹೆಜ್ಜೆ ಹಾಕಲಿವೆ. ಮುಖ್ಯವಾಗಿ ಮೆರವಣಿಗೆಯಲ್ಲಿ ಮಹಿಳಾ ತಂಡಗಳಿಗೆ ಆದ್ಯತೆ ನೀಡಲಾಗಿದೆ.

ಸ್ತಬ್ಧಚಿತ್ರಗಳ ಮುಂದೆ ಎರಡು ಕಲಾ ತಂಡಗಳು ಹೆಜ್ಜೆ ಹಾಕಲಿವೆ.

ಕೊರೊನಾ ಕಾರಣದಿಂದಾಗಿ ಈ ಬಾರಿ ಸರಳ ದಸರಾ ಆಚರಿಸುತ್ತಿದೆ.

ಶುಕ್ರವಾರ ಅರಮನೆ ಮುಂಭಾಗದಲ್ಲಿ ಮಾತ್ರ ಅಭಿಮನ್ಯು ನೇತೃತ್ವದಲ್ಲಿ ಜಂಬೂಸವಾರಿ ನಡೆಯಲಿದೆ.

ಈಗಾಗಲೇ ಆನೆಗಳಿಗೆ ತಾಲೀಮು ನೀಡಿ ಜಂಬೂಸವಾರಿಗೆ ಸಿದ್ಧಗೊಳಿಸಲಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd