ADVERTISEMENT
Wednesday, May 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಕೋವಿಡ್-19 ಔಷಧಿ ಹೆಸರಲ್ಲಿ ಮೈಸೂರು ಪಾಕ್ ಮಾರಾಟ ಮಾಡುತ್ತಿದ್ದ ಅಂಗಡಿ ಲೈಸೆನ್ಸ್ ರದ್ದು

admin by admin
July 9, 2020
in International, Newsbeat, ದೇಶ - ವಿದೇಶ, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ಕೋವಿಡ್-19 ಔಷಧಿ ಹೆಸರಲ್ಲಿ ಮೈಸೂರು ಪಾಕ್ ಮಾರಾಟ ಮಾಡುತ್ತಿದ್ದ ಅಂಗಡಿ ಲೈಸೆನ್ಸ್ ರದ್ದು

ಕೊಯಮತ್ತೂರು, ಜುಲೈ 9: ನಮ್ಮ ಗಿಡಮೂಲಿಕಾ ಮೈಸೂರು ಪಾಕ್ ಕೋವಿಡ್-19ಗೆ ಔಷಧಿ ಎಂದು ಜಾಹೀರಾತು ನೀಡಿ ಜನರನ್ನು ವಂಚಿಸುತ್ತಿದ್ದ ಟಿಎನ್ ಸಿಹಿ ಅಂಗಡಿ ಪರವಾನಿಗೆಯನ್ನು ರದ್ದು ಮಾಡಲಾಗಿದೆ.
ಕಳೆದ ಮೂರು ತಿಂಗಳುಗಳಿಂದ ಅವರು ಕೋವಿಡ್-19 ರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಗಿಡಮೂಲಿಕೆಗಳ ಮೈಸೂರು ಪಾಕ್ ಮಾರಾಟ ಮಾಡಿ ಅವರನ್ನು ವಂಚಿಸುತ್ತಿದ್ದ.
45 ವರ್ಷದ ಶ್ರೀರಾಮ್ ಕೊಯಮತ್ತೂರು ನಗರದಾದ್ಯಂತ ‘ನೆಲ್ಲೈ ಲಾಲಾ ಸ್ವೀಟ್ಸ್’ ಹೆಸರಿನಲ್ಲಿ ಎಂಟು ಸ್ವೀಟ್ ಅಂಗಡಿಗಳ ಮಳಿಗೆಯನ್ನು ಹೊಂದಿದ್ದು, . ತಮಿಳುನಾಡಿನಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ, ತನ್ನ ಅಂಗಡಿಯಲ್ಲಿ ತಯಾರಿಸಿದ ಗಿಡಮೂಲಿಕೆ ಮೈಸೂರು ಪಾರ್ಕ್ ಕೊರೋನಾ ಗುಣಪಡಿಸುವ ಹೇಳಿಕೆಗಳು ನಗರದಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

Related posts

ಸಚಿವ ಸಂಪುಟ ಪುನಾರಚನೆ ಸದ್ದು: ದೆಹಲಿಗೆ ಧಾವಿಸಿದ ಸಚಿವಾಕಾಂಕ್ಷಿಗಳು

ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿ CM ಫೈನಲ್ ಫೈಟ್..!

May 27, 2026
ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ: ಇನ್ನು ನಾಲ್ಕೇ ದಿನಗಳಲ್ಲಿ ನಿಮ್ಮ ಖಾತೆಗೆ ಬರಲಿದೆ 2000 ರೂಪಾಯಿ ಬಾಕಿ ಹಣ!

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಮಹತ್ವದ ಸೂಚನೆ: ಈ ಕೆಲಸ ಮಾಡದಿದ್ದರೆ ನಿಲ್ಲಲಿದೆ ಪ್ರತಿ ತಿಂಗಳ 2,000 ರೂಪಾಯಿ ಹಣ

May 27, 2026

ಈ ಮೈಸೂರ್ ಪಾಕ​ನ್ನು 19 ವಿಧದ ಗಿಡಮೂಲಿಕೆಗಳಿಂದ ತಯಾರಿಸಲಾಗಿದೆ ಎಂದು ಹೇಳಿಕೊಂಡು‌ ಸ್ವೀಟ್ಸ್​ ಅಂಗಡಿ ಮಾಲೀಕ ಶ್ರೀರಾಮ್ ಕೆ.ಜಿಗೆ 800 ರೂಪಾಯಿಯಂತೆ ಮೈಸೂರು ಪಾರ್ಕ್ ಮಾರಾಟ ಮಾಡುತ್ತಿದ್ದ. ‌ ಗಿಡಮೂಲಿಕೆಗಳಿಂದ ತಯಾರಿಸಲಾಗಿರುವ ಈ ಮೈಸೂರ್ ಪಾಕ್ ತುಂಬಾ ಪರಿಣಾಮಕಾರಿಯಾಗಿದ್ದು ಕೊರೊನಾ ಸೋಂಕಿನಿಂದ ಒಂದೇ ದಿನದಲ್ಲಿ ಗುಣಪಡಿಸಬಲ್ಲದು ಮತ್ತು ಕೊರೋನಾ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲದು ಎಂದು ಕರಪತ್ರಗಳನ್ನು ಪ್ರಕಟಿಸಿ ಜಾಹೀರಾತು ನೀಡಿದ್ದ.

ಕೋವಿಡ್-19 ರೋಗಿಗಳು ಒಂದು ದಿನದಲ್ಲಿ ಗುಣಮುಖರಾಗುತ್ತಾರೆ, ಒಂದು ಪವಾಡ !!!
ಹೌದು, ಇದು ಚಿನ್ನಿಯಂಪಲಯಂ ಮತ್ತು ವೆಲ್ಲಲೂರಿನಲ್ಲಿ ಗಿಡಮೂಲಿಕೆಗಳ ಮೈಸೂರ್ ಪಾಕ್ ಸೇವನೆಯಿಂದ ಸಂಭವಿಸಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಮತ್ತು ಕರಪತ್ರಗಳಲ್ಲಿ ಪ್ರಕಟಿಸಿದ್ದ ಆತ,
ನೀವು ಕೊರೋನಾ (ವೈರಸ್), ವಿರುದ್ಧದ ಯುದ್ಧದಲ್ಲಿ ಪಾಲ್ಗೊಳ್ಳಲು ಬಯಸಿದರೆ, ಯಾವುದೇ ಕೋವಿಡ್-19 ರೋಗಿಗಳ ಬಗ್ಗೆ ಅಥವಾ ಸರ್ಕಾರವು ಸೂಚಿಸಿದಂತೆ ರೋಗಲಕ್ಷಣಗಳನ್ನು ಹೊಂದಿರುವವರ ಬಗ್ಗೆ ನಿಮಗೆ ತಿಳಿದಿದ್ದರೆ ದಯವಿಟ್ಟು ನಮಗೆ ತಿಳಿಸಿ. ನಮ್ಮ ಗಿಡಮೂಲಿಕೆಗಳ ಮೈಸೂರ್ ಪಾಕ್ ಅನ್ನು ಅವರ ಮನೆ ಬಾಗಿಲಿಗೆ ತಲುಪಿಸಲು ನಾವು ಸಿದ್ಧರಿದ್ದೇವೆ ‌ಎಂದು ಕರಪತ್ರಗಳಲ್ಲಿ ತಿಳಿಸಿದ್ದು, ಪ್ರತಿಯಾಗಿ ಯಾವುದೇ ನಿರೀಕ್ಷೆಗಳಿಲ್ಲದೆ ಈ ಮೈಸೂರು ಪಾಕ್ ಅನ್ನು ಸಿದ್ಧಪಡಿಸುವ ಸೂತ್ರವನ್ನು ಪ್ರಧಾನಿ ಮೋದಿಗೆ ತಿಳಿಸಲಾಗುವುದು ಎಂದು ಅವನು ನಮೂದಿಸಿದ್ದ.
ನನ್ನ ಅಜ್ಜ ಸಿದ್ಧ ತಜ್ಞ. ಅವರು ಜ್ವರಕ್ಕೆ ಲೇಹ್ಯವನ್ನು ತಯಾರಿಸುತ್ತಿದ್ದರು. ಆ ದಿನಗಳಲ್ಲಿ, ಇಂತಹುದೇ ಜ್ವರವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹರಡಿತ್ತು ಮತ್ತು ಉಬ್ಬಸ ಸಮಸ್ಯೆ ಇರುವ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಆದ್ದರಿಂದ ನಾವು ಅದೇ ಸೂತ್ರದಲ್ಲಿ ಈ ಮೈಸೂರು ಪಾಕ್ ತಯಾರಿಸಿದ್ದೇವೆ. ಏಕೆಂದರೆ ಅದನ್ನು ಲೇಹ್ಯವಾಗಿ ಮಾರಾಟ ಮಾಡಲು ನಮಗೆ ನಿರ್ದಿಷ್ಟ ಪರವಾನಗಿ ಬೇಕು ಎಂದು ಹೇಳಿಕೊಂಡಿದ್ದಾನೆ. ನಮ್ಮ ತಂಡವು ಕಳೆದ ಮೂರು ತಿಂಗಳುಗಳಿಂದ ಇದನ್ನು ಕೋವಿಡ್-19 ರೋಗಿಗಳಿಗೆ ಮತ್ತು ಅದರ ರೋಗಲಕ್ಷಣಗಳಿರುವ ವ್ಯಕ್ತಿಗಳಿಗೆ ವಿತರಿಸುತ್ತಿದ್ದು, ಎಲ್ಲರೂ ಯಶಸ್ಸನ್ನು ಕಂಡಿದ್ದಾರೆ ಎಂದು ಹೇಳಿದ ಶ್ರೀರಾಮ್, ಯಾವುದೇ ಅಡ್ಡಪರಿಣಾಮಗಳಿಲ್ಲದೆ ಸುಮಾರು 50 ಮಧುಮೇಹ ರೋಗಿಗಳಿಗೆ ಇದನ್ನು ಪೂರೈಸಿದ್ದೇನೆ ಎಂದು ಹೇಳಿರುವುದಾಗಿ‌ ವರದಿಗಳು ಹೇಳಿವೆ.

ಈ ಮೈಸೂರು ಪಾಕ್ ಗೆ ‘ಫೋಟಾನ್ ಸ್ಪೀಡ್ ಕೊರೊನಾ ಮೈಸೂರ್ ಪಾಕ್’ ಎಂದು ಹೆಸರಿಟ್ಟಿದ್ದು, ಮಾಹಿತಿ ತಿಳಿದ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ದ ಅಧಿಕಾರಿಗಳು ದಾಳಿ ನಡೆಸಿದಾಗ ಶ್ರೀರಾಮ್​, ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸುವಲ್ಲಿ ವಿಫಲನಾಗಿದ್ದಾನೆ. ಅಲ್ಲದೆ ಈ ಮೈಸೂರು ಪಾಕ್ ಗೆ ಉಪಯೋಗಿಸಿರುವ ಸಾಮಗ್ರಿಗಳ ಹೆಸರನ್ನು ಹೇಳಲು ಆತನಿಂದ ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಜನರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ಶ್ರೀರಾಮ್ ವಿರುದ್ಧ ಕೇಸ್ ದಾಖಲಿಸಿ ಆತನ ಅಂಗಡಿಯ ಪರವಾನಿಗೆಯನ್ನು ರದ್ದು ಮಾಡಲಾಗಿದೆ.

Tags: coronavirusHerbalindiamysore pakSweetSweet shoptamilnaduViralcoronavirus
ShareTweetSendShare
Join us on:

Related Posts

ಸಚಿವ ಸಂಪುಟ ಪುನಾರಚನೆ ಸದ್ದು: ದೆಹಲಿಗೆ ಧಾವಿಸಿದ ಸಚಿವಾಕಾಂಕ್ಷಿಗಳು

ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿ CM ಫೈನಲ್ ಫೈಟ್..!

by Shwetha
May 27, 2026
0

ಕರ್ನಾಟಕ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಇದೀಗ ತಾರಕಕ್ಕೇರಿದೆ. ಕಾಂಗ್ರೆಸ್‌ ಹೈಕಮಾಂಡ್ ಅಂಗಳದಲ್ಲಿ ರಾಜ್ಯದ CM ಕುರ್ಚಿಗಾಗಿ ‘ಫೈನಲ್ ಫೈಟ್’ ಆರಂಭವಾಗಿದ್ದು, ಮಹತ್ವದ...

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ: ಇನ್ನು ನಾಲ್ಕೇ ದಿನಗಳಲ್ಲಿ ನಿಮ್ಮ ಖಾತೆಗೆ ಬರಲಿದೆ 2000 ರೂಪಾಯಿ ಬಾಕಿ ಹಣ!

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಮಹತ್ವದ ಸೂಚನೆ: ಈ ಕೆಲಸ ಮಾಡದಿದ್ದರೆ ನಿಲ್ಲಲಿದೆ ಪ್ರತಿ ತಿಂಗಳ 2,000 ರೂಪಾಯಿ ಹಣ

by Shwetha
May 27, 2026
0

ಬೆಂಗಳೂರು: ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರಿ ಬದಲಾವಣೆಯಾಗುತ್ತಿದ್ದು, ಇನ್ಮುಂದೆ ಹಣ ಪಡೆಯಲು ಬಯೋಮೆಟ್ರಿಕ್ ಕಡ್ಡಾಯವಾಗಲಿದೆ. ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಯ ಲಾಭ ತಲುಪಿಸುವ...

ತಮಿಳುನಾಡಿನ ಸಿಎಂ ಪಟ್ಟಕ್ಕೇರಿದ ದಳಪತಿ ವಿಜಯ್: ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಮೂರು ಬಿಗ್ ಗ್ಯಾರಂಟಿ ಘೋಷಣೆ

ಮೇಕೆದಾಟು ಯೋಜನೆಗೆ ಮತ್ತೆ ತಮಿಳುನಾಡು ವಿರೋಧ..!

by Shwetha
May 27, 2026
0

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಮೇಕೆದಾಟು ಜಲಾಶಯ ಯೋಜನೆ ಮತ್ತೆ ರಾಜಕೀಯ ಕಾವು ಪಡೆದುಕೊಂಡಿದೆ. ಕಾವೇರಿ ನದಿಗೆ ಅಡ್ಡಲಾಗಿ ಯೋಜನೆಗೆ ಭೂಮಿ ಪೂಜೆ ಘೋಷಣೆ ಮಾಡಿರುವ ಬೆನ್ನಲ್ಲೇ ತಮಿಳುನಾಡು...

ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯಬೇಡಿ: ಇಂಧನ ದರ ಏರಿಕೆ ವಿರುದ್ಧ ಸಿಎಂ ಗುಡುಗು ; ಪ್ರಧಾನಿ ಮೋದಿ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ

ದ್ವೇಷ ಭಾಷಣ ತಡೆ ಮಸೂದೆಗೆ ಕೇಂದ್ರ ಬ್ರೇಕ್..! ರಾಜ್ಯ ಸರ್ಕಾರಕ್ಕೆ ಹಿನ್ನಡೆ

by Shwetha
May 27, 2026
0

ರಾಜ್ಯ ಸರ್ಕಾರಕ್ಕೆ ಮಹತ್ವದ ಹಿನ್ನಡೆಯಾಗಿದ್ದು, ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧ ತಡೆಗೆ ಸಂಬಂಧಿಸಿದ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ತಾತ್ಕಾಲಿಕ ಬ್ರೇಕ್ ಹಾಕಿದೆ. ರಾಜ್ಯ ಸರ್ಕಾರ...

ದೆಹಲಿಯತ್ತ ಎಲ್ಲರ ಚಿತ್ತ, ರಾಜಣ್ಣ ಮಾತ್ರ ಅಮೆರಿಕಕ್ಕೆ ಪಯಣ: ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಮೂಡಿಸಿದ ಮಾಜಿ ಸಚಿವರು!

ದೆಹಲಿಯತ್ತ ಎಲ್ಲರ ಚಿತ್ತ, ರಾಜಣ್ಣ ಮಾತ್ರ ಅಮೆರಿಕಕ್ಕೆ ಪಯಣ: ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಮೂಡಿಸಿದ ಮಾಜಿ ಸಚಿವರು!

by Shwetha
May 27, 2026
0

ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ಸಂಪುಟ ಪುನರ್‌ರಚನೆಯ ಚರ್ಚೆಗಳು ಕಾಡ್ಗಿಚ್ಚಿನಂತೆ ಹಬ್ಬುತ್ತಿರುವ ಬೆನ್ನಲ್ಲೇ, ಸಚಿವ ಕೆಎನ್ ರಾಜಣ್ಣ ಅವರು ನೀಡಿರುವ ಹೇಳಿಕೆ ಈಗ ಹೊಸ ಸಂಚಲನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram