ಮೈಸೂರು ಸೈನ್ಸ್ ಫೌಂಡೇಷನ್- ನಾಳೆಯಿಂದ 7 ದಿನಗಳ ವೆಬಿನಾರ್- ಭಾಗವಹಿಸುವವರಿಗೆ ಇಲ್ಲಿದೆ ಮಾಹಿತಿ
ಮೈಸೂರು, ಸೆಪ್ಟೆಂಬರ್23: ಮೈಸೂರು ಸೈನ್ಸ್ ಫೌಂಡೇಷನ್ (ರಿ) ದಿನಾಂಕ 24-09-2020 ರಿಂದ 30-09-2020 ರ ವರೆಗೆ ವಿಜ್ಞಾನ ಸಪ್ತಾಹ ವನ್ನು ಆಚರಿಸುತ್ತಿದೆ. ಸಪ್ತಾಹದ ಅಂಗವಾಗಿ ಪ್ರತಿ ದಿನ ರಾತ್ರಿ 7.00 ಗಂಟೆಯಿಂದ 7.45 ರವರೆಗೆ ವಿವಿಧ ವಿಷಯಗಳ ಕುರಿತು ತಜ್ಞರಿಂದ ವೆಬಿನಾರ್(ಆನ್-ಲೈನ್ ಉಪನ್ಯಾಸ) ಹಮ್ಮಿಕೊಳ್ಳಲಾಗಿದೆ.
ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಸಹಯೋಗದೊಂದಿಗೆ 50 ಲಕ್ಷ ರೂ ಗೆಲ್ಲುವ ಅವಕಾಶ
ದಿನಾಂಕ 24-09-2020 ರಂದು ಡಾ.ಟಿ. ತಿಪ್ಪೇಸ್ವಾಮಿ, ವಿಜ್ಞಾನಿ, ಕೇಂದ್ರೀಯ ರೇಷ್ಮೆ ಸಂಶೋಧನಾ ಮತ್ತು ತರಬೇತಿ ಸಂಸ್ಥೆ ಯವರಿಂದ ಓಜೋನ್ ಪದರದ ಮಹತ್ವ ಕುರಿತು ಉಪನ್ಯಾಸ ಕಾರ್ಯಕ್ರಮವಿದೆ.
ದಿನಾಂಕ 25-09-2020 ರಂದು ಸಿ.ಡಿ. ಪ್ರಸಾದ್, ವಿಜ್ಞಾನಿ, ಇಸ್ರೊ ಅವರು, ಇಸ್ರೋನ ಭವಿಷ್ಯದ ಯೋಜನೆಗಳು ಕುರಿತು ಉಪನ್ಯಾಸ ನೀಡಲಿದ್ದಾರೆ.
ದಿನಾಂಕ 26-09-2020 ರಂದು ಡಾ.ಎಮ್.ಎಸ್. ಮಹೇಶ್, ಸಹಾಯಕ ಪ್ರಾಧ್ಯಾಪಕರು, ಆಹಾರ ವಿಜ್ಞಾನ ಮತ್ತು ಪೋಷಣೆ, ಯುವರಾಜ ಕಾಲೇಜು, ಮೈಸೂರು ಅವರಿಂದ ಕರೋನ ಸಮಯದಲ್ಲಿ ಜಂಕ್ ಆಹಾರಗಳು ಕುರಿತು ಉಪನ್ಯಾಸವಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಕೋವಿಡ್ ಸೋಂಕು ಮುಚ್ಚಿಹಾಕುವಿಕೆಯ ಭಾಗ – ಚೀನಾ ವೈರಾಲಜಿಸ್ಟ್
ದಿನಾಂಕ 27-09-2020 ರಂದು ಎಂ.ಜಿ.ಎನ್ ಪ್ರಸಾದ್, ಸೂಪರಿಂಟೆಂಡ್, ಆರ್.ಟಿ.ಒ. ನಾಗಮಂಗಲ ಮಂಡ್ಯ ಜಿಲ್ಲೆ ಅವರಿಂದ ವಾಹನ ಸಂಖ್ಯೆಗಳ ಹಿಂದಿನ ವಿಜ್ಞಾನ ಕುರಿತು ಉಪನ್ಯಾಸ ಕಾರ್ಯಕ್ರಮವಿದೆ.
ದಿನಾಂಕ 28-09-2020 ರಂದು ಎಚ್. ವಿ. ಮುರಳೀಧರ, ಓರಿಗಾಮಿ ಕಲಾವಿದ, ಮೈಸೂರು ಅವರು ಗಣಿತ ಓರಿಗಾಮಿ ಪ್ರಾತ್ಯಕ್ಷಿಕೆ ಕುರಿತು ಉಪನ್ಯಾಸ ಕಾರ್ಯಕ್ರಮ ನೀಡಲಿದ್ದಾರೆ.
ಮೊಬೈಲ್ ಅನ್ನು ಮೊಬೈಲ್ ಸೇವಾ ಕೇಂದ್ರದಲ್ಲಿ ಬಿಡುವ ಮೊದಲು ಈ ವಿಷಯಗಳನ್ನು ಗಮನಿಸಿ
ದಿನಾಂಕ 29-09-2020 ರಂದು ಡಾ. ಟಿ. ಶಿವಲಿಂಗ ಸ್ವಾಮಿ, ಸಹಾಯಕ ಪ್ರಾಧ್ಯಾಪಕರು, ಪ್ರಥಮ ದರ್ಜೆ ಕಾಲೇಜು, ಮಂಡ್ಯ ಅವರಿಂದ ನಕ್ಷತ್ರಗಳ ಹುಟ್ಟು ಮತ್ತು ಸಾವು ಕುರಿತು ಉಪನ್ಯಾಸವಿದೆ.
ದಿನಾಂಕ 30-09-2020 ರಂದು ಎಂ. ಕೆ.ಸಪ್ತಗಿರೀಶ್, ಪರಿಸರವಾದಿ, ಅರಣ್ಯ ಔಟ್ ರಿಚ್, ಮೈಸೂರು ಅವರು ಪ್ರಾಣಿಗಳ ರಸ್ತೆ ಅಪಘಾತ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
ನಕಲಿ ಆಕ್ಸಿಮೀಟರ್ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡದಂತೆ ಎಚ್ಚರಿಕೆ ನೀಡಿದ ಕೇಂದ್ರ ಗೃಹ ಸಚಿವಾಲಯ
ವೆಬಿನಾರ್ (ಆನ್ಲೈನ್ ಉಪನ್ಯಾಸ ಸರಣಿ)ಯಲ್ಲಿ ಭಾಗವಹಿಸಲು ಬಯಸುವವರು ತಮ್ಮ ವಾಟ್ಸಾಪ್ ನಿಂದ ಮೊಬೈಲ್ ಸಂಖ್ಯೆ – 8105503863 ಕ್ಕೆ ತಮ್ಮ ಹೆಸರು ಮತ್ತು ವಿಳಾಸವನ್ನು ಕಳುಹಿಸಿಕೊಡಲು ಪ್ರತಿಕಾ ಪ್ರಕಟಣೆಯಲ್ಲಿ ಕೋರಲಾಗಿದೆ. ವೆಬಿನಾರ್ ನಲ್ಲಿ ಭಾಗವಹಿಸುವವರಿಗೆ ಇ- ಸರ್ಟಿಫಿಕೇಟ್ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೈಸೂರು ಸೈನ್ಸ್ ಫೌಂಡೇಷನ್ ನ ಅಧ್ಯಕ್ಷರಾದ ಸಿ.ಕೃಷ್ಣೇಗೌಡ ಮೊಬೈಲ್ ಸಂಖ್ಯೆ – 9844405284 ರವರನ್ನು ಸಂಪರ್ಕಿಸಲು ಕೋರಲಾಗಿದೆ.
ಮೈಸೂರು ಸೈನ್ಸ್ ಫೌಂಡೇಷನ್- ನಾಳೆಯಿಂದ 7 ದಿನಗಳ ವೆಬಿನಾರ್@science @Star_Of_Mysore @karnataka @FactsOfSchool @webinar pic.twitter.com/GFCZMlDPJr
— Saaksha TV (@SaakshaTv) September 23, 2020