ಮೈಸೂರು | ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಕೊಲೆ Mysore saaksha tv
ಮೈಸೂರು : ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನು ಕೊಲೆ ಮಾಡಿ ಹೂತು ಹಾಕಿರುವ ಘಟನೆ ಮೈಸೂರಿನ ಹುಣಸೂರಿನಲ್ಲಿ ನಡೆದಿದೆ.
ಹುಣಸೂರಿನ ಬಿಬಿಸಿ ಕಾಲೋನಿಯ ಕೃಷ್ಣ(35) ಸ್ನೇಹಿತರಿಂದ ಕೊಲೆಯಾದ ಯುವಕನಾಗಿದ್ದಾರೆ. ನ.27 ರಂದು ಕೃಷ್ಣ ಸ್ನೇಹಿತರಾದ ಅಶೋಕ ಮತ್ತು ಗೋಪಾಲ್ ಅವರೊಂದಿಗೆ ಹೋಗಿದ್ದಾರೆ.
ಗ್ರಾಮದ ಹೊರವಲಯದಲ್ಲಿ ಮೂವರು ಮದ್ಯ ಪಾನ ಸೇವನೆ ಮಾಡುವಾಗ ಮಾತಿಗೆ ಮಾತು ಬೆಳೆದು ಅಶೋಕ್ ಮತ್ತು ಗೋಪಾಲ್ ಸೇರಿಕೊಂಡು ಕೃಷ್ಣನನ್ನು ಬಾಟಲ್ ನಿಂದ ಹೊಡೆದು ಕೊಲೆ ಮಾಡಿದ್ದಾರೆ.
ಯಾರಿಗೂ ಗೊತ್ತಾಗಬಾರದೆಂದು ಜೆಸಿಬಿಯಿಂದ ಹಳ್ಳ ತೆಗೆದು ಹೂತು ಹಾಕಿ ಪರಾರಿಯಾಗಿದ್ದಾರೆ.
ಈ ಸಂಬಂಧ ಕೃಷ್ಣನ ಪತ್ನಿ ಹುಣಸೂರು ಗ್ರಾಮದ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ಪೆÇಲೀಸರು ಬಲೆ ಬೀಸಿದ್ದಾರೆ.









