ಗುಜರಾತ್ ನಲ್ಲಿ ಆಕಾಶದಿಂದ ಬಿದ್ದ ಲೋಹದ ಚೆಂಡುಗಳು…

1 min read

ಗುಜರಾತ್ ನಲ್ಲಿ ಆಕಾಶದಿಂದ ಬಿದ್ದ ಲೋಹದ ಚೆಂಡುಗಳು…

ಗುಜರಾತ್‌ ರಾಜ್ಯದ ಹಲವು ಪ್ರದೇಶಗಳಲ್ಲಿ ಆಕಾಶದಿಂದ ಲೋಹದ ಚೆಂಡುಗಳು ಬಿದ್ದು ಸ್ಥಳಿಯರನ್ನ ಕಂಗೆಡಿಸಿದ ಘಟನೆ ನಡೆದಿದೆ.   ಗುರುವಾರ ಸಂಜೆ ಗುಜರಾತ್‌ನ ಆನಂದ್ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಈ ಘಟನೆ ನಡೆದ ಬಗ್ಗೆ ವರದಿಯಾಗಿದೆ.

ಇದ್ದಕ್ಕಿದ್ದಂತೆ ದೊಡ್ಡ ಶಬ್ದ ಕೇಳಿ ಬಂದ ಹಿನ್ನಲೆ ಭೂಕಂಪದ ಭಯದಿಂದ ನಿವಾಸಿಗಳು  ತಮ್ಮ ಮನೆಗಳಿಂದ ಬಂದಿದ್ದಾರೆ.  ಆಕಾಶದಿಂದ ಉದುರಿದ ನಿಗೂಢ ಲೋಹದ ವಸ್ತುಗಳನ್ನ ಉಪಗ್ರಹದ ತುಣುಕುಗಳು ಎಂದು ನಂಬಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆ ವಸ್ತು ಏನು ಎಂದು ಖಚಿತಪಡಿಸಿಕೊಳ್ಳಲು ಲೋಹದ ಚೆಂಡುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಸುಮಾರು 5 ಕೆಜಿ ತೂಕದ ಕಪ್ಪು ಲೋಹದ  ಚೆಂಡು ಸಂಜೆ 4:45 ರ ಸುಮಾರಿಗೆ ಭಲೇಜ್‌ ಪ್ರದೇಶದಲ್ಲಿ ಮೊದಲು ಬಿದ್ದಿದೆ. ನಂತರ ಖಂಭೋಲಾಜ್ ಮತ್ತು ರಾಂಪುರದಲ್ಲಿ ಇದೇ ರೀತಿಯ ಘಟನೆಗಳು ಪುನರಾವರ್ತಿತವಾಗಿವೆ.

ಅದೃಷ್ಟವಶಾತ್ ಲೋಹದ ವಸ್ತುಗಳು ಮನೆಯಿಂದ ದೂರ  ಬಿದ್ದಿದ್ದರಿಂದ ಯಾರಿಗೂ ಯಾವುದೇ ಅಪಾಯಗಳಾಗಿಲ್ಲ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd