Mysuru | ನಡುರಸ್ತೆಯಲ್ಲಿ ಹೊತ್ತಿ ಉರಿದ ಸ್ಕೂಟರ್..!!
ಮೈಸೂರು : ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆ ಬಳಿ ನಡುರಸ್ತೆ ಮೇಲೆ ಸ್ಕೂಟರ್ ವೊಂದು ಹೊತ್ತಿ ಉರಿದ ಪರಿಣಾಮ ಸವಾರ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಮೈಸೂರು ಮೂಲದ ಶಿವರಾಮು ಮೃತ ವ್ಯಕ್ತಿಯಾಗಿದ್ದು, ಅನಂತ ರಾಮಯ್ಯ ಗಂಭೀರವಾಗಿ ಗಾಯಗೊಂಡಿದ್ದಾರೆ.
ನಿನ್ನೆ ಸಂಜೆ ಈ ಇಬ್ಬರೂ ಸ್ಕೂಟರ್ ನಲ್ಲಿ ಕೆ,ಆರ್.ಪೇಟೆ ಕಡೆಗೆ ಹೊರಟ್ಟಿದ್ದಾಗ ಈ ದುರಂತ ಸಂಭವಿಸಿದೆ.

ರಸ್ತೆ ಮಧ್ಯೆ ಸ್ಕೂಟರ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸಾರ್ವಜನಿಕರು ಇಬ್ಬರು ಸವಾರರನ್ನು ರಕ್ಷಿಸಿದ್ದಾರೆ.
ಅಲ್ಲದೇ ಗಂಭೀರವಾಗಿ ಗಾಯಗೊಂಡಿದ್ದ ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶಿವರಾಮು ಎಂಬುವರು ಕಳೆದ ರಾತ್ರಿ ಮೈಸೂರಿನ ಕೆ. ಆರ್ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ.
ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿದೆ.








