ಹುಬ್ಬಳ್ಳಿ – ಮಂಗಳೂರು ನಡುವೆ ಇಂಡಿಗೋ ತನ್ನ ನೂತನ ವಿಮಾನಯಾನ ಸೌಲಭ್ಯವನ್ನು ಮಾರ್ಚ್ 29 ರಿಂದ ಪ್ರಾರಂಭಿಸಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವ, ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದರು.

ಈ ವಿಮಾನ ಪ್ರತಿ ದಿನ ಸಾಯಂಕಾಲ ಸಮಯ : 5.15ಕ್ಕೆ ಹುಬ್ಬಳ್ಳಿಯಿಂದ ಹೊರಟು 6.25 ಕ್ಕೆ ಮಂಗಳೂರು ತಲುಪುವುದು.
ಬಹುದಿನಗಳಿಂದ ನಾವು ಬಂದರು ನಗರಿ ಮಂಗಳೂರಿಗೆ ನೇರ ವಿಮಾನ ಸಂಪರ್ಕ ಕಲ್ಪಿಸಲು ನಡೆಸಿದ ಪ್ರಯತ್ನ ಈಗ ಫಲಪ್ರದವಾಗಿದೆ. ಜನರ ಬಹುದಿನದ ಬೇಡಿಕೆ ಇದಾಗಿದ್ದು ಅನೇಕ ಪ್ರಯಾಣಿಕರಿಗೆ ಇದರ ಲಾಭ ಸಿಗಲಿದೆ ಎಂದು ಟ್ವೀಟ್ ಮಾಡಿದ್ದಾರೆ








