Naga Chaitanya : ಸಾಲು ಸಾಲು ಸಿನಿಮಾಗಳ ಸೋಲು, ಖಿನ್ನತೆಗೆ ಜಾರಿದ್ರಾ ನಾಗಚೈತನ್ಯ..??
10 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಟಾಲಿವುಡ್ ನ ಸ್ಟಾರ್ ಕಪಲ್ ಸಮಂತಾ ನಾಗಚೈತನ್ಯ ಡಿವೋರ್ಸ್ ಪಡೆದು ತಮ್ಮ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಇತಿಶ್ರೀ ಹಾಡಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ.
ಆನಂತರ ಇಬ್ಬರೂ ಸಿನಿಮಾರಂಗದಲ್ಲಿ ಬ್ಯೂಸಿಯಾಗಿದ್ದಾರೆ. ಸಮಂತ ಮತ್ತಷ್ಟು ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ ಅವಕಾಶಗಳೂ ಹೆಚ್ಚಾಗುತ್ತಿವೆ. ಪುಷ್ಪದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿ ಪಡ್ಡೆಗಳ ಫೇವರೇಟ್ ಆಗಿದ್ದಾರೆ.
ಅದ್ರೆ ಮತ್ತೊಂದೆಡೆ ನಾಗಚೈತನ್ಯ ಸಿನಿಮಾಗಳು ನೆಲ ಕಚ್ಚುತ್ತಿವೆ. ಸಾಲು ಸಾಲು ಸೋಲುಗಳಿಂದ ನಾಗಚೈತನ್ಯ ಖಿನ್ನತೆಗೆ ಒಳಗಾಗಿದ್ದಾರೆ ಎಂಬ ಸುದ್ದಿ ಇದೀಗ ಟಾಳಿವುಡ್ ಅಂಗಳದಲ್ಲಿ ಸದ್ದು ಮಾಡ್ತಿದೆ..
ಲಾಲ್ ಸಿಂಗ್ ಚಡ್ಡಾ ಮೂಲಕ ಬಾಲಿವುಡ್ ಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು ನಾಗಚೈತನ್ಯ.. ಆದ್ರೆ ಲಾಲ್ ಸಿಂಗ್ ಚಡ್ಡಾ ಫ್ಲಾಪ್ ಆಗಿದೆ.. ಜೋಷ್ ಸಿನಿಮಾ ಮೂಲಕ ಸಿನಿಮಾರಂಗಕ್ಕೆ 2009 ರಲ್ಲಿ ಎಂಟ್ರಿಕೊಟ್ಟ ನಾಗಚೈತನ್ಯ ಸಿನಿಮಾ ಡಸ್ಟ್ರಿಯಲ್ಲಿ 13 ವರ್ಷಗಳನ್ನ ಪೂರೈಸಿದ್ದಾರೆ..
ನಾಗಚೈತನ್ಯ ಸಮಂತಾ ಒಟ್ಟಿಗೆ ನಟಿಸಿದ ಸಿನಿಮಾಗಳೆಲ್ಲವೂ ಹಿಟ್ ಆಗಿವೆ.. ಇವರಿಬ್ಬರ ಕಾಂಬಿನೇಷನ್ ನಲ್ಲಿ ಹಲವು ಸಿನಿಮಾ ಬಾಕ್ಸಾಫೀಸ್ ನಲ್ಲಿ ಗೆದ್ದಿವೆ. ಆದ್ರೆ ಇತ್ತೀಚೆಗೆ ಥ್ಯಾಂಕ್ ಯು ಹಾಗೂ ಲಾಲ್ ಸಿಂಗ್ ಚಡ್ಡಾ ಸೋತ ನಂತರ ಚೈತನ್ಯ ಕುಗ್ಗಿದ್ದಾರೆ ಎನ್ನುವ ವದಂತಿಗಳಿಂದ ಅಭಿಮಾನಿಗಳು ಕೊಂಚ ಬೇಸರಗೊಂಡಿದ್ದಾರೆ..