Nagpura : ವಿಡಿಯೋ ನೋಡಿ ತಾನು ಜನ್ಮಕೊಟ್ಟ ನವಜಾತ ಶಿಶು ಕೊಂದ ಅಪ್ರಾಪ್ತೆ
ವಿಡಿಯೊ ನೋಡಿ ನವಜಾತ ಶಿಶು ಕೊಂದ ಬಾಲಕಿ
ಲೈಂಗಿಕ ಶೋಷಣೆಗೆ ಒಳಗಾಗಿದ್ದ ಬಾಲಕಿ
ಯೂಟ್ಯೂಬ್ ಮನೋಡಿಕೊಂಡು ಮಗುವಿಗೆ ಜನ್ಮ
ಹುಟ್ಟಿದ ಶಿಶು ಕತ್ತು ಹಿಸುಕಿ ಕೊಲೆ
ಮಹಾರಾಷ್ಟ್ರದ ನಾಗ್ಪುರದಲ್ಲಿ ಘಟನೆ
ನಾಗ್ಪುರ : ಲೈಂಗಿಕ ಶೋಷಣೆಗೆ ಒಳಗಾಗಿದ್ದ 15 ವರ್ಷದ ಬಾಲಕಿಯೊಬ್ಬಳು ಯೂಟ್ಯೂಬ್ ವೀಡಿಯೋಗಳನ್ನು ನೋಡಿಕೊಂಡು ನಂತರ ತನ್ನ ಮನೆಯಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ,, ಆದ್ರೆ ನವಜಾತ ಶಿಶುವನ್ನು ಕತ್ತು ಹಿಸುಕಿ ಕೊಂದು ಮಗುವಿನ ಮೃತದೇಹವನ್ನ ಪೆಟ್ಟಿಗೆಯೊಳಗೆ ಬಚ್ಚಿಟ್ಟಿದ್ದ ಘಟನೆ ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ನಡೆದಿದೆ..
ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ತಮಗೆ ಕೆಲವು ಆರೋಗ್ಯ ಸಮಸ್ಯೆಗಳಿವೆ ಎಂದು ಹೇಳುವ ಮೂಲಕ ಅವಳು ತನ್ನ ತಾಯಿಯಿಂದ ಗರ್ಭದಾರಣೆಯ ವಿಚಾರ ಮರೆಮಾಚಿದ್ದಳು ” ಎಂದು ಪೊಲೀಸರ್ ಅಧಿಕಾರಿಗಳು ತಿಳಿಸಿದ್ದಾರೆ.
Nagpura , girl killed new born baby after giving birth by watching youtube video