ಕರಾವಳಿಯ ಗ್ರಾಮೀಣ ಕ್ರೀಡೆ ಕಂಬಳದ ಚಿತ್ರವನ್ನು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡ ನಾಯ್ಡು
ಹೊಸದಿಲ್ಲಿ, ಅಗಸ್ಟ್30:ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ದಿನವಾದ ಶನಿವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಕಂಬಳದ ಪೋಟೋವೊಂದನ್ನು ಹಂಚಿಕೊಂಡಿದ್ದು, ಕರಾವಳಿ ಜನರಿಗೆ ಹೆಮ್ಮೆ ತಂದಿದೆ. ಕುಸ್ತಿಯ ಫೋಟೋವನ್ನು ಸಹ ನಾಯ್ಡು ಹಂಚಿಕೊಂಡಿದ್ದು,
ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಶುಭಾಶಯಗಳು!
ಕೊರೋನಾ ಸೋಂಕು ನಮ್ಮ ಕ್ರೀಡಾ ಚಟುವಟಿಕೆಗಳಿಗೆ ಅಡ್ಡಿಪಡಿಸಿದೆ … ಆದರೆ ಇಂದು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರುವುದು ಹೆಚ್ಚು ಮುಖ್ಯವಾಗಿದೆ. ಆಗ ಮಾತ್ರ ನಾವು ಸೋಂಕಿನ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ.
ಆದ್ದರಿಂದ ನಿಯಮಿತವಾಗಿ ಯೋಗ ಮಾಡಿ … ವ್ಯಾಯಾಮ ಮಾಡಿ … ‘ಫಿಟ್ ಇಂಡಿಯಾ’ವನ್ನು ಬೃಹತ್ ಆಂದೋಲನ ಮಾಡಿ ಎಂದು ಟ್ವೀಟ್ ಮಾಡಿದ್ದಾರೆ.
राष्ट्रीय खेल दिवस की शुभकामनाएं!
कोरोना ने हमारी खेल-कूद की गतिविधियों को बाधित कर रखा है… लेकिन आज शारीरिक व मानसिक रूप से स्वस्थ रहना ज्यादा जरूरी है, तभी हम संक्रमण से लड़ पाएंगे।
अतः नियमित योग करें… व्यायाम करें… 'फिट इंडिया' को जन-आंदोलन बनाएं। #NationalSportsDay pic.twitter.com/E3UngDSv1v— Vice President of India (@VPSecretariat) August 29, 2020
ಕರಾವಳಿಯ ಗ್ರಾಮೀಣ ಕ್ರೀಡೆ ಕಂಬಳದಂತಹ ಕ್ರೀಡೆಯಲ್ಲಿ ತೊಡಗುವುದರಿಂದ ಫಿಟ್ ಆಗಿ ಇರಬಹುದು ಎಂಬರ್ಥದಲ್ಲಿ ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದು, ಇದು ಕಂಬಳದ ಮಹತ್ವವನ್ನು ಹೆಚ್ಚಿಸಿದೆ.