Nalin Kumar Kateel | ಸಿದ್ದರಾಮಯ್ಯ ಇತಿಹಾಸ ನೋಡಿ, ಶ್ರೀಮಂತ ಕುಟುಂಬದಿಂದ ಬಂದಿಲ್ಲ
ಬೆಳಗಾವಿ : ಸಿದ್ದರಾಮಯ್ಯ ಹುಟ್ಟುಹಬ್ಬಕ್ಕೆ 75 ಕೋಟಿ ರಾಪಾಯಿ ಖರ್ಚು ಮಾಡಲಾಗಿದೆ. ಅಷ್ಟೊಂದು ಹಣ ಸಿದ್ದರಾಮಣ್ಣ ಅವರಿಗೆ ಎಲ್ಲಿಂದ ಬಂತು ಎಂದು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.
ಚಿಕ್ಕೋಡಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ನಳಿಕ್ ಕುಮಾರ್ ಕಟೀಲ್ ಗುಡುಗಿದ್ದು, ಸಿದ್ದರಾಮಯ್ಯ ಹುಟ್ಟುಹಬ್ಬಕ್ಕೆ 75 ಕೋಟಿ ರಾಪಾಯಿ ಖರ್ಚು ಮಾಡಲಾಗಿದೆ.
ಅಷ್ಟೊಂದು ಹಣ ಸಿದ್ದರಾಮಣ್ಣ ಅವರಿಗೆ ಎಲ್ಲಿಂದ ಬಂತು. ಅವರ ಇತಿಹಾಸ ನೊಡಿ, ಶ್ರೀಮಂತ ಕುಟುಂಬದಿಂದ ಬಂದಿಲ್ಲ, ಆದರೂ ಅಷ್ಟೊಂದು ಹಣ ಖರ್ಚು ಮಾಡಿದ್ದಾರೆ.

ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮಾಡಿದೆ ಅಂತ ಹೇಳುತ್ತಾರೆ. ಯಾವ ದಾಖಲಾಗಿದೆ, ಸಿದ್ದರಾಮಯ್ಯ ಹತ್ತಿರ ದಾಖಲೆ ಇದ್ದರೇ ಬಿಡುಗಡೆ ಮಾಡಲಿ ಎಂದು ಕಟೀಲ್ ಸವಾಲು ಹಾಕಿದ್ದಾರೆ.
ಇನ್ನು ಕೊರೋನಾ ಲಸಿಕೆ ಯಲ್ಲಿ ದೇಶ ಕ್ರಾಂತಿ ಮಾಡಿದೆ. ಆದರೆ ಕಾಂಗ್ರೆಸ್ ಕೊರೋನಾ ಲಸಿಕೆ ಯಲ್ಲಿ ರಾಜಕೀಯ ಮಾಡುತ್ತದೆ.
ಸಿದ್ದರಾಮಣ್ಣ ಲಸಿಕೆ ಪಡೆಯಬೇಡಿ ಅಂತ ಹೇಳಿದ್ರು, ಆದರೆ ಅವರೇ ಲಸಿಕೆ ಪಡೆದರು. ರಾತ್ರಿ ಹೊತ್ತಿನಲ್ಲಿ ರಾಹುಲ್ ಗಾಂಧಿ ಪಡೆದಿದ್ದಾರೆ ಎಂದು ಕಟೀಲ್ ಕಿಡಿಕಾರಿದ್ದಾರೆ.









