ADVERTISEMENT
Saturday, January 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

“ನಮ್​ ನಾಣಿ ಮದ್ವೆ ಪ್ರಸಂಗ”ಕ್ಕೆ ಶುಭಕೋರಿದ ಎಸ್ ಟಿ. ಸೋಮಶೇಖರ್

Namratha Rao by Namratha Rao
December 12, 2021
in Cinema, Newsbeat, ಮನರಂಜನೆ
nam madve prasanga saakshatv
Share on FacebookShare on TwitterShare on WhatsappShare on Telegram

“ನಮ್​ ನಾಣಿ ಮದ್ವೆ ಪ್ರಸಂಗ”ಕ್ಕೆ ಶುಭಕೋರಿದ ಎಸ್ ಟಿ. ಸೋಮಶೇಖರ್

ಅನ್ವಿತಾ ಆರ್ಟ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಹೇಮಂತ್ ಹೆಗಡೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ “ನಮ್ ನಾಣಿ ಮದ್ವೆ ಪ್ರಸಂಗ” ಸಿನಿಮಾದ ಮುಹೂರ್ತ ಸಮಾರಂಭವು ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿತು.. ಮೊದಲ ಸನ್ನಿವೇಶಕ್ಕೆ ಖ್ಯಾತ ನಿರ್ದೇಶಕರಾದ ಟಿ.ಎನ್.ಸೀತಾರಾಂ ಆರಂಭ ಫಲಕ ತೋರಿದರು.

Related posts

ಮಂತ್ರಗಳಿಂದ ಕಾಯಿಲೆ ವಾಸಿಯಾಗುವುದಿಲ್ಲ: ಪ್ರೇಮಾನಂದ್‌ ಜಿ ಹೇಳಿಕೆ ವೈರಲ್

ಮಂತ್ರಗಳಿಂದ ಕಾಯಿಲೆ ವಾಸಿಯಾಗುವುದಿಲ್ಲ: ಪ್ರೇಮಾನಂದ್‌ ಜಿ ಹೇಳಿಕೆ ವೈರಲ್

January 17, 2026
ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ: ಕೈ ಶಾಸಕ

ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ: ಕೈ ಶಾಸಕ

January 17, 2026

ಸಚಿವರಾದ ಎಸ್ ಟಿ ಸೋಮಶೇಖರ್ ಅವರು ಚಿತ್ರತಂಡಕ್ಕೆ ಶುಭ ಕೋರಿದರು. ಈ ವೇಳೆ  ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ವಿಶ್ ಮಾಡಿದ್ರು.

ಬಳಿಕ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಹೇಮಂತ್ ಹೆಗಡೆ , ಎರಡು ವರ್ಷಗಳ ನಂತರ ಮತ್ತೆ ಚಿತ್ರ ಮಾಡುತ್ತಿದ್ದೇನೆ. ಮಲೆನಾಡು ಹುಡುಗನ ಕಥೆ ಇದು. ಮಲೆನಾಡಿನಲ್ಲಿ ಕೃಷಿ ಮಾಡುವ ಹುಡುಗರಿಗೆ ಹುಡುಗಿ ಸಿಗುವುದಿಲ್ಲ. ಜ್ವಲಂತ ಸಮಸ್ಯೆಯೊಂದನ್ನು ಇಟ್ಟುಕೊಂಡು, ಅದನ್ನು ಹಾಸ್ಯದ ಮೂಲಕ ಹೇಳುವುದಕ್ಕೆ ಹೊರಟಿದ್ದೇನೆ.

ನನ್ನ ಸ್ವಂತ ಕಸಿನ್​ ಮದುವೆಯಾಗುವುದಕ್ಕೆ ಕಾಶ್ಮೀರದವರೆಗೂ ಹೋಗಿ ಬಂದ. ಸಾಮಾಜಿಕ ಸಂದೇಶವಿರುವ ಸುಂದರ ಚಿತ್ರ ಇದಾಗಲಿದೆ ಎಂಬ ನಂಬಿಕೆ ನನಗಿದೆ. ಜನ ತಮ್ಮನ್ನು ತಾವು ಕಂಡುಕೊಳ್ಳುತ್ತಾರೆ ಎಂದಿದ್ದಾರೆ.
nam madve prasanga saakshatv

ಇನ್ನೂ ಟಿ.ಎನ್.ಸೀತಾರಾಂ ಅವರು ಮಾತನಾಡಿ , ನನ್ನ ಮಾಯಾಮೃಗ ಧಾರಾವಾಹಿಯಲ್ಲಿ ಹೇಮಂತ್​ ಅವರಿಂದ ಒಂದು ಪಾತ್ರ ಮಾಡಿಸಿದ್ದೆ. ಆ ನಂತರ ಅವರ ಪಾತ್ರ ಬಹಳ ಜನಪ್ರಿಯವಾಯಿತು. ಮತದಾನ ಚಿತ್ರ ಮಾಡುವಾಗ ನನಗೆ ಸೌಮ್ಯ ಮುಖದ ಹೀರೋ ಬೇಕಾಗಿತ್ತು. ಆಗ ನಾನು ಆಯ್ಕೆ ಮಾಡಿಕೊಂಡಿದ್ದು ಹೇಮಂತ್​ ಅವರನ್ನು.

ಮಾಯಾಮೃಗದಲ್ಲಿ ಹೇಮಂತ್​ ಪಾತ್ರ ಮದುವೆಗಾಗಿ ಬಹಳ ಕಷ್ಟಪಡುತ್ತದೆ. ಮತದಾನದಲ್ಲಿ ಮದುವೆಯೇ ಆಗುವುದು. ಇದರಲ್ಲೂ ಮದುವೆಗಾಗಿ ಕಷ್ಟಪಡುವ ಪಾತ್ರ ಎಂದು ಕೇಳಿದ್ದೇನೆ.

ನಟನೆ ಮಾಡುವಾಗ ದುರಂತ ಪಾತ್ರಗಳನ್ನು ಮಾಡಿದರೂ, ನಿರ್ದೇಶನ ಮಾಡುವಾಗ ಹಾಸ್ಯಮಯ ಚಿತ್ರಗಳನ್ನೇ ಮಾಡುತ್ತಾರೆ, ಜನರನ್ನು ನಗಿಸುವುದಕ್ಕೆ ಪ್ರಯತ್ನ ಮಾಡುತ್ತಾರೆ ಹೇಮಂತ್​. ನಗು ಮತ್ತು ವಿಷಾದದ  ನಡುವೆ ನಾಣಿಯ ಮದುವೆ ಮಾಡಿಸುವುದಕ್ಕೆ ಅವರು ಹೊರಟಿದ್ದಾರೆ  ಅವರು. ಚಿತ್ರ  ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ..

ಈ ವೇಳೆ ರಾಜೇಶ್ ನಟರಂಗ ಮಾತನಾಡಿ , ನನಗೆ ಗೊತ್ತಿಲ್ಲ. ಫೋನ್​ ಮಾಡಿ ಒಂದು ಪಾತ್ರ ಮಾಡಬೇಕು ಎಂದರು. ನಮ್ಮಿಬ್ಬರದ್ದು ಹಳೆಯ ಪರಿಚಯ. 30 ವರ್ಷಗಳಿಂದ ಸ್ನೇಹಿತರು. ಬೇರೆಬೇರೆ ಹಂತಗಳಲ್ಲಿ, ವೇದಿಕೆಗಳಲ್ಲಿ ಕೆಲಸ ಮಾಡಿದ್ದೇವೆ. ಅವರ ನಿರ್ದೇಶನದಲ್ಲಿ ಅಭಿನಯಿಸಿರಲಿಲ್ಲ. ಈ ಚಿತ್ರದಲ್ಲಿ ನಟಿಸುವುದಕ್ಕೆ ಕೇಳಿದಾಗ, ತಕ್ಷಣ ಒಪ್ಪಿದೆ. ಅವರ ಮೇಲೆ ನಂಬಿಕೆ ಇದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದರು.

ಅರಿಶಿಣ ಶಾಸ್ತ್ರದ ಬಳಿಕ ಮೆಹಂದಿಯ ಫೋಟೋಗಳನ್ನ ಹಂಚಿಕೊಂಡ ವಿಕ್ – ಕ್ಯಾಟ್

ನಿರ್ದೇಶನದ ಜೊತೆಗೆ ನಾಯಕ ಆಗಿರುವ ಹೇಮಂತ್ ಹೆಗಡೆ ಅವರಿಗೆ ನಾಯಕಿಯರಾಗಿ ಶ್ರೇಯಾ ವಸಂತ್​ ಮತ್ತು ಶ್ರುತಿ ನಂದೀಶ್​ ನಟಿಸುತ್ತಿದ್ದಾರೆ. ಶರತ್​ ಲೋಹಿತಾಶ್ವ, ನಾರಾಯಣಸ್ವಾಮಿ ಮತ್ತು ರಿತೇಶ್​ ಗೌಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಜನವರಿ 15ರ ನಂತರ ಶಿರಸಿ ಸುತ್ತಮುತ್ತ ಒಂದೇ ಹಂತದ 30 ದಿನಗಳ ಚಿತ್ರೀಕರಣ ನಡೆಯಲಿದೆ

Tags: #saakshatvkannada filmnam madve prasangaSandalwood
ShareTweetSendShare
Join us on:

Related Posts

ಮಂತ್ರಗಳಿಂದ ಕಾಯಿಲೆ ವಾಸಿಯಾಗುವುದಿಲ್ಲ: ಪ್ರೇಮಾನಂದ್‌ ಜಿ ಹೇಳಿಕೆ ವೈರಲ್

ಮಂತ್ರಗಳಿಂದ ಕಾಯಿಲೆ ವಾಸಿಯಾಗುವುದಿಲ್ಲ: ಪ್ರೇಮಾನಂದ್‌ ಜಿ ಹೇಳಿಕೆ ವೈರಲ್

by Shwetha
January 17, 2026
0

ಆಧ್ಯಾತ್ಮಿಕತೆಯ ಹೆಸರಿನಲ್ಲಿ ನಡೆಯುತ್ತಿರುವ ಮೋಸಗಳು ಮತ್ತು ವಂಚನೆಗಳ ಬಗ್ಗೆ ಪ್ರೇಮಾನಂದ್‌ ಜಿ ಮಹಾರಾಜ್ ಸ್ಪಷ್ಟ ಹಾಗೂ ತೀಕ್ಷ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅವರ ಹೇಳಿಕೆ ಇದೀಗ ವ್ಯಾಪಕವಾಗಿ ವೈರಲ್...

ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ: ಕೈ ಶಾಸಕ

ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ: ಕೈ ಶಾಸಕ

by Shwetha
January 17, 2026
0

ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತ ಚರ್ಚೆಗಳು ಮತ್ತೆ ಬಿರುಸುಗೊಂಡಿರುವ ನಡುವೆಯೇ, ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ಶಾಸಕ ಶಿವಗಂಗಾ...

ಜಿಪಿಎಸ್ ಟ್ರ್ಯಾಕರ್‌ ಅಳವಡಿಸಿದ ರಣಹದ್ದು ಪತ್ತೆ

ಜಿಪಿಎಸ್ ಟ್ರ್ಯಾಕರ್‌ ಅಳವಡಿಸಿದ ರಣಹದ್ದು ಪತ್ತೆ

by Shwetha
January 17, 2026
0

ವಿಜಯಪುರ ಜಿಲ್ಲೆಯ ಚಡಚಣ ಪ್ರದೇಶದಲ್ಲಿ ಜಿಪಿಎಸ್ ಟ್ರ್ಯಾಕರ್, ಕ್ಯಾಮರಾ ಹಾಗೂ ಟ್ರ್ಯಾಕಿಂಗ್ ಸಾಧನಗಳನ್ನು ಅಳವಡಿಸಿರುವ ರಣಹದ್ದು ಪತ್ತೆಯಾಗಿರುವುದು ಭಾರೀ ಆತಂಕ ಮೂಡಿಸಿದೆ. ರಣಹದ್ದಿನ ಕಾಲಿನಲ್ಲಿ ಗುರುತು ಸಂಖ್ಯೆಯಿರುವ...

ವಿಶ್ವವೇ ನಿಬ್ಬೆರಗಾದ ಕ್ಷಣ ಕೊನೆಗೂ ಟ್ರಂಪ್ ಮಡಿಲಿಗೆ ಸೇರಿತು ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ

ವಿಶ್ವವೇ ನಿಬ್ಬೆರಗಾದ ಕ್ಷಣ ಕೊನೆಗೂ ಟ್ರಂಪ್ ಮಡಿಲಿಗೆ ಸೇರಿತು ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ

by Shwetha
January 17, 2026
0

ವಾಷಿಂಗ್ಟನ್: ಜಾಗತಿಕ ರಾಜಕೀಯ ವಲಯದಲ್ಲಿ ಅಚ್ಚರಿಯ ಹಾಗೂ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಹುಕಾಲದ ಕನಸೊಂದು ವಿಶೇಷ ರೀತಿಯಲ್ಲಿ ಈಡೇರಿದಂತಾಗಿದೆ. ವೆನೆಜುವೆಲಾದ...

ಮನೆಯಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯರಿದ್ದಾರೆಯೇ? ಹಾಗಾದರೆ ತಪ್ಪದೇ ಓದಿ, ಸರ್ಕಾರದಿಂದ ಸಿಗಲಿದೆ ಮಾಸಿಕ ಪಿಂಚಣಿ ಭಾಗ್ಯ

ಮನೆಯಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯರಿದ್ದಾರೆಯೇ? ಹಾಗಾದರೆ ತಪ್ಪದೇ ಓದಿ, ಸರ್ಕಾರದಿಂದ ಸಿಗಲಿದೆ ಮಾಸಿಕ ಪಿಂಚಣಿ ಭಾಗ್ಯ

by Shwetha
January 17, 2026
0

ಬೆಂಗಳೂರು: ವಯಸ್ಸಾದ ಕಾಲದಲ್ಲಿ ಯಾರಿಗೂ ಹೊರೆಯಾಗದೆ, ಆರ್ಥಿಕವಾಗಿ ಸ್ವತಂತ್ರರಾಗಿ ಬದುಕಬೇಕು ಎಂಬುದು ಪ್ರತಿಯೊಬ್ಬ ಹಿರಿಯ ಜೀವದ ಕನಸಾಗಿರುತ್ತದೆ. ಈ ಕನಸಿಗೆ ನೀರೆರೆದು ಪೋಷಿಸಲು ಕರ್ನಾಟಕ ರಾಜ್ಯ ಸರ್ಕಾರವು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram