ಫೆಬ್ರವರಿ 24-25ರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಭಾರತ ಪ್ರವಾಸಕ್ಕೆ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಹೌಡಿ ಮೋದಿ ರೀತಿಯಲ್ಲಿ, ಟ್ರಂಪ್ ಗೆ ಸ್ವಾಗತ ವನ್ನು ನೀಡಲು ಅಹಮದಾಬಾದ್ ನಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಮೊದಲು ‘ಕೇಮ್ ಚೋ ಟ್ರಂಪ್’ ಎಂದು ಈ ಕಾರ್ಯ ಕ್ರಮಕ್ಕೆ ಹೆಸರಿಸಲಾಗಿದ್ದು, ಇದೀಗ ‘ನಮಸ್ತೆ, ಪ್ರೆಸಿಡೆಂಟ್ ಟ್ರಂಪ್’ ಎಂದು ಹೆಸರನ್ನು ಬದಲಾಯಿಸಲಾಗಿದೆ.
ಕೇಮ್ ಚೋ ಟ್ರಂಪ್ ಪ್ರಾದೇಶಿಕತೆಯನ್ನು ಸೂಚಿಸುತ್ತದೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಭೇಟಿಯ ಸಂದರ್ಭದಲ್ಲಿ ವ್ಯಕ್ತಪಡಿಸುವ ಜಗತ್ತಿನಲ್ಲೇ ಖ್ಯಾತಿ ಪಡೆದಿರುವ ಗೌರವ ಸೂಚಕ ಪದ ‘ನಮಸ್ತೆ’ ಯನ್ನು ಬಳಸಿಕೊಂಡು ನಮಸ್ತೆ, ಪ್ರೆಸಿಡೆಂಟ್ ಟ್ರಂಪ್ ಎಂದು ಹೆಸರಿಸಲಾಗಿದೆ.
‘ಮುಂದಿನ 30 ವರ್ಷ ಕಾಂಗ್ರೆಸ್ಗೆ ಅಧಿಕಾರ ಸಿಗುವುದಿಲ್ಲ’: ಕಾಂಗ್ರೆಸ್, ಆಪ್ ವಿರುದ್ಧ ಅಮಿತ್ ಶಾ ವಾಗ್ದಾಳಿ
ಕಾಂಗ್ರೆಸ್ ಪಕ್ಷವು ತನ್ನ ನಕಾರಾತ್ಮಕ ರಾಜಕಾರಣದಿಂದಾಗಿ ಮುಂದಿನ 30 ವರ್ಷಗಳ ಕಾಲ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ....








