‘ನಮಸ್ತೇ ಘೋಸ್ಟ್’ ನಲ್ಲಿ ಕಿಚ್ಚ ಸುದೀಪ್ : ಸತ್ಯಾಸತ್ಯತೆ ಏನು..???
ಸ್ಯಾಂಡಲ್ ವುಡ್ ಕಿಚ್ಚ ಸುದೀಪ್ ಸದ್ಯ ಬಹುನಿರೀಕ್ಷೆಯ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಗಾಗಿ ಕಾಯ್ತಿದ್ದಾರೆ.. ಇದಾಧ ನಂತರ ಕಿಚ್ಚ ಸುದೀಪ್ ಯಾವ ಸಿನಿಮಾದಲ್ಲಿ ಯಾವ ನಿರ್ದೇಶಕರ ಜೊತೆಗೆ ಮಾಡ್ತಾರೆ ಅನ್ನೋ ಕುತೂಹಲ ಅಭಿಮಾನಿಗಳನ್ನ ಕಾಡ್ತಿತ್ತು…
ಅದಕ್ಕೆ ಇತ್ತೀಚೆಗಷ್ಟೇ ‘ಮಾನಾಡು’ ನಿರ್ದೇಶಕ ವೆಂಕಟ್ ಪ್ರಭು ಜೊತೆಗೆ ಕಿಚ್ಚ ಸುದೀಪ್ ಹೊಸ ಸಿನಿಮಾ ಮಾಡೋದು ಖಚಿತವಾಗಿದೆ.. ಹೀಗಿರೋವಾಗ್ಲೇ ಗಾಂಧಿ ನಗರದಲ್ಲಿ ಮತ್ತೊಂದು ಗಾಸಿಪ್ ತಲೆ ಎತ್ತಿದೆ.. ಹೌದು ಈ ಸುದ್ದಿ ಕಿಚ್ಚನ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ..
ಏನದು ವದಂತಿ..??
ಅಂದ್ಹಾಗೆ ಕಿಚ್ಚ ಸುದೀಪ್ ‘ಸಾಹೋ’ ಖ್ಯಾತಿಯ ನಿರ್ದೇಶಕ ಸುಜಿತ್ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ.. ಇದು ಸಿಕ್ಕಾಪಟ್ಟೆ ಕುತೂಹಲದ ಜೊತೆಗೆ ಕನ್ಫ್ಯೂಸ್ ಕೂಡ ಮಾಡ್ತಿದೆ.. ಸುದೀಪ್ ಮೇಣದ ಬತ್ತಿ ಹಿಡಿದು ನಿಂತಿರುವ ಫೋಟೋ ಜೊತೆಗೆ “ ನಮಸ್ಥೆ ಘೋಸ್ಟ್” ಟೈಟಲ್ ಕೂಡ ವೈರಲ್ ಆಗ್ತಿದೆ… ಜೊತೆಗೆ ಜೀ ಸ್ಟುಡಿಯೋಸ್ ನಿರ್ಮಾಣ ಮಾಡ್ತಿದ್ದು , ದಿಶಾ ಪಠಾನಿ , ಇಮ್ರಾನ್ ಹಶ್ಮಿ , ದೀಪಿಕಾ ಪಡುಕೋಣೆ ಹೆಸರುಗಳು ಕೂಡ ಸಿನಿಮಾದ ಕಾಸ್ಟ್ ಅಂಡ್ ಕ್ರೀವ್ ನಲ್ಲಿ ಕೇಳಿ ಬರುತ್ತಿದೆ..
ಏನಿದು Namasthe Ghost ಅಸಲಿ ಕಹಾನಿ..
ಅಸಲಿಗೆ ಈ ಸಿನಿಮಾದ ಬಗ್ಗೆ ಕಿಚ್ಚ ಸುದೀಪ್ ಆಗ್ಲೀ , ಸುಜಿತ್ ಆಗ್ಲೀ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ.. ಬದಲಾಗಿ ಹೀಗೊಂದು ಗಾಸಿಪ್ ಹರಿದಾಡ್ತಿದೆ.. ಅದಕ್ಕೆ ಕಾರಣ ಅಭಿಮಾನಿಗಳೇ ಕ್ರಿಯೇಟ್ ಮಾಡಿ ಫೇಕ್ ಟೈಟಲ್ ನೀಡಿ ಹರಿಬಿಟ್ಟಿದ್ದಾರೆ ಎನ್ನಲಾದ ಪೋಸ್ಟರ್.. ಅದ್ರ ಜೊತೆಗಿನ ಟ್ಯಾಗ್ಸ್..
ಆದ್ರೆ ಈ ಸುದ್ದಿ ನಿಜ ಅಲ್ದೇ ಹೋದ್ರು ಕಿಚ್ಚನ ಅಭಿಮಾನಿಗಳು ಮಾತ್ರ ಈ ಸಿನಿಮಾ ಬರಬೇಕು.. ಈ ಗಾಸಿಪ್ ನಿಜ ಆಗ್ಬೇಕು ಅಂತ ಅಂದುಕೊಳ್ತಿರೋದಂತೂ ಸುಳ್ಳಲ್ಲ.. ಹಾಗೆಯೇ ಮುಂದಿನ ದಿನಗಳಲ್ಲಿ ಕಿಚ್ಚ ಸುಜೀತ್ ಜೊತೆಗೆ ಸಿನಿಮಾ ಮಾಡೋದು ಕನ್ ಫರ್ಮ್ ಎನ್ನಲಾಗ್ತಿದೆ.. ಆದ್ರೆ ಯಾವ ಸಿನಿಮಾ ಮಾಡ್ತಾರೆ ಯಾವಾಗ ಮಾಡ್ತಾರೆ ಅನ್ನೋ ಯಾವ ವಿಚಾರವೂ ಇನ್ನೂ ಗೊತ್ತಾಗಿಲ್ಲ..