ಮುಂಬೈ : ಪೂರ್ವ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 22 ಭಾರತೀಯ ಯೋಧರು ಹುತಾತ್ಮರಾದ ಬಳಿಕ ಚೀನಾ ಉತ್ಪನ್ನಗಳನ್ನು ಬಹಿಷ್ಕಾರ ಮಾಡುವಂತೆ ದೇಶದೆಲ್ಲೆಡೆ ಕೂಗು ಕೇಳಿ ಬಂದಿತ್ತು. ಹೀಗಾಗಿ ಭಾರತ ಸರ್ಕಾರ ಸೋಮವಾರ ಟಿಕ್ ಟಾಕ್, ಯುಸಿ ಬ್ರೌಸರ್ ಸೇರಿದಂತೆ ಚೀನಾದ 59 ಆಪ್ ಗಳನ್ನು ಬ್ಯಾನ್ ಮಾಡಿ ಆದೇಶ ನೀಡಿದೆ. ಈ ಕುರಿತು ಪೃಥ್ವಿರಾಜ್ ಚವ್ಹಾಣ್, ಪ್ರತಿಕ್ರಿಯಿಸಿ ಮೊದಲು ನಮೋ ಆಪ್ ನಿಷೇಧಿಸಿ ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಚೀನಾದ 59 ಆಪ್ ಗಳನ್ನು ನಿಷೇಧಿಸುವ ಮೂಲಕ 130 ಕೋಟಿ ಭಾರತೀಯರ ಮಾಹಿತಿ ಗೌಪ್ಯತೆಯನ್ನು ಮೋದಿ ಸರ್ಕಾರ ಕಾಪಾಡುತ್ತಿರುವುದು ಒಳ್ಳೆಯ ವಿಚಾರ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ಮೊಬೈಲ್ ಫೋನ್ ಅಪ್ಲಿಕೇಶನ್ ಆಗಿರುವ ನಮೋ ಆಪ್, ಗೌಪ್ಯತೆ ಸೆಟ್ಟಿಂಗ್ ಗಳನ್ನು ಬಳಕೆದಾರರಿಗೆ ತಿಳಿಯದಂತೆ ರಹಸ್ಯವಾಗಿ ಬದಲಾಯಿಸುತ್ತದೆ. ಅಲ್ಲದೇ ಅಮೆರಿಕದ ಕೆಲ ಕಂಪನಿಗಳಿಗೆ ಡೇಟಾವನ್ನು ಕಳುಹಿಸುತ್ತದೆ ಎಂದು ಕಾಂಗ್ರೆಸ್ ಮುಖಂಡ ಪೃಥ್ವಿರಾಜ್ ಚವ್ಹಾಣ್ ಆರೋಪಿಸಿದ್ದಾರೆ.