ಪ್ರವಾಸಿಗರ ಪಾಲಿಗೆ ದೂರವಾಗಲಿದೆ ನಂದಿಬೆಟ್ಟ
ಚಿಕ್ಕಬಳ್ಳಾಪುರ : ಇಂದಿನಿಂದ ಪ್ರಸಿದ್ಧ ನಂದಿಬೆಟ್ಟ ಪ್ರವಾಸಿಗರ ಪಾಲಿಗೆ ಮತ್ತಷ್ಟು ದೂರವಾಗಲಿದೆ. ಕಳೆದ ಕೆಲ ದಿನಗಳ ಹಿಂದೆ ಮಳೆಯಿಂದಾಗಿ ನಂದಿಗಿರಿಧಾಮದ ಬಳಿ ಭೂಕುಸಿತವಾಗಿತ್ತು.
ಹೀಗಾಗಿ ಅಲ್ಲಿ ತಾತ್ಕಾಲಿಕವಾಗಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದ್ರೆ ಇದೀಗ ಆ ರಸ್ತೆಯೂ ಕೊಚ್ಚಿ ಹೋಗಿದೆ. ಪರಿಣಾಮ ಇಂದಿನಿಂದ ತಾತ್ಕಾಲಿಕ ರಸ್ತೆಯೂ ಸಂಪೂರ್ಣ ಬಂದ್ ಮಾಡಲಾಗಿದೆ.
ಪರಿಣಾಮ ಇಂದಿನಿಂದ ನಂದಿಬೆಟ್ಟಕ್ಕೆ ವಾಹನಗಳ ಸಂಚಾರ ಕಂಪ್ಲೀಟ್ ಬಂದ್ ಆಗಿದೆ. ಶಾಶ್ವತವಾಗಿ ಸೇತುವೆ ನಿರ್ಮಾಣ ಮಾಡುವ ಸಲುವಾಗಿ ಹಿಟಾಚಿ ಯಂತ್ರದಿಂದ ಮಣ್ಣು ತೆರವು ಕಾರ್ಯಾಚರಣೆಯನ್ನು ಲೋಕೋಪಯೋಗಿ ಇಲಾಖಾಧಿಕಾರಿಗಳು ಕೈಗೊಂಡಿದ್ದಾರೆ.
ಸದ್ಯ ಕಾಮಗಾರಿ ಮುಂದುವರೆದಿದ್ದು, 2 ತಿಂಗಳಿಗಿಂತ ಹೆಚ್ಚಿನ ದಿನಗಳಾಗಬಹುದು. ಹೀಗಾಗಿ ಶಾಶ್ವತ ರಸ್ತೆ ನಿರ್ಮಾಣ ಕಾಮಗಾರಿ ಆಗುವವರೆಗೆ ನಂದಿಗಿರಿಧಾಮ ಬಂದ್ ಆಗುವ ಸಾಧ್ಯತೆಗಳಿವೆ.