ನ್ಯೂಯಾರ್ಕ್ : ಶನಿವಾರ ನಡೆದ ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಜಪಾನ್ ನ ನವೊಮಿ ಒಸಾಕಾ ಅವರು ವಿಕ್ಟೋರಿಯಾ ಅಝರೆಂಕಾ ಅವರನ್ನು ಮಣಿಸಿ, ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಈ ಮೂಲಕ ಒಸಾಕಾ ಮೂರನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಆರ್ಥರ್ ಆಶೆ ಕ್ರೀಡಾಂಗಣದಲ್ಲಿ 1 ಗಂಟೆ 53 ನಿಮಿಷ ನಡೆದ ಹೋರಾಟದಲ್ಲಿ 1-6, 6-3, 6-3 ಸೆಟ್‍ಗಳಿಂದ ವಿಕ್ಟೋರಿಯಾ ಅಜರೆಂಕಾ ಅವರನ್ನು ನಾಲ್ಕನೇ ಶ್ರೇಯಾಂಕಿತ ಒಸಾಕಾ ಸೋಲಿಸಿದ್ದಾರೆ.
ಪಂದ್ಯದ ಆರಂಭದಲ್ಲಿ ಅಝರೆಂಕಾ ಅದ್ಭುತ ಪ್ರದರ್ಶನ ತೋರಿ ಕೇವಲ 26 ನಿಮಿಷಗಳಲ್ಲಿ ಮೊದಲ ಸೆಟ್ ಗೆದ್ದರು. ಎರಡನೇ ಸೆಟ್‍ನಲ್ಲೂ 2-0 ಮುನ್ನಡೆಯಲ್ಲಿದ್ದಾಗ, ಒಸಾಕಾ ಅದ್ಭುತ ಪ್ರತಿಹೋರಾಟ ತೋರಿದರು. ಎದುರಾಳಿಯ ಸರ್ವೀಸನ್ನು ಎರಡು ಬಾರಿ ಮುರಿದ ಒಸಾಕಾ 4-3 ಮುನ್ನಡೆ ಸಾಧಿಸಿದರು. ಬಳಿಕ ಮೂರನೇ ಬಾರಿಗೆ ಎದುರಾಳಿಯ ಸೆಟ್ ಮುರಿದ ಜಪಾನ್ ಬೆಡಗಿ ಪಂದ್ಯವನ್ನು ನಿರ್ಣಾಯಕ ಸೆಟ್‍ಗೆ ಒಯ್ದರು.
ಒಸಾಕಾ ಮೂರನೇ ಸೆಟ್‍ನಲ್ಲೂ ಎದುರಾಳಿಯ ಸರ್ವ್ ಮುರಿದು 3-1 ಮುನ್ನಡೆ ಸಾಧಿಸಿದರು. ಅತ್ಯಂತ ರೋಚಕ ಘಟ್ಟದಲ್ಲಿ ಹಲವು ಅವಕಾಶಗಳನ್ನು ವ್ಯರ್ಥಪಡಿಸಿಕೊಂಡ ಅಝರೆಂಕಾ, ಒಸಾಕಾ 4-1 ಮುನ್ನಡೆ ಗಳಿಸಿಕೊಳ್ಳಲು ಅವಕಾಶ ಮಾಡಿಕೊಟ್ಟರು.
ಇನ್ನು ಉದಯೋನ್ಮುಖ ಆಟಗಾರ್ತಿ ಒಸಾಕಾ ಈ ಹಿಂದೆ 2018ರ ಯುಎಸ್ ಓಪನ್ ಮತ್ತು 2019ರ ಆಸ್ಟ್ರೇಲಿಯನ್ ಓಪನ್‍ನಲ್ಲಿ ಜಯಗಳಿಸಿದ್ದರು.
ಕೇರಳ ಮತ್ತು ಕೊಳ್ಳೇಗಾಲದ ಮಹಾ ವಶೀಕರಣ ಮಾಂತ್ರಿಕರು ಮತ್ತು ತಾಂತ್ರಿಕರು ಪಂಡಿತ್ ಸಂತೋಷ್ ಆಚಾರ್ಯ ಗುರೂಜಿ
ಇವರು ನಿಮ್ಮ ಸಮಸ್ಯೆಗಳಾದ ವಶೀಕರಣ, ವಿವಾಹ, ಸಂತಾನ, ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಹೋಗಿದ್ರೆ, ಇಷ್ಟ ಪಟ್ಟ ಪುರುಷ ಮತ್ತು ಸ್ತ್ರಿ ನಿಮ್ಮ ವಶ ಆಗಬೇಕಾದರೆ ಮತ್ತು ಲೈಂಗಿಕ ಸಮಸ್ಯೆ, ಸಾಲಬಾಧೆ, ಗುಪ್ತ ಸಮಸ್ಯೆಗಳಿಗೆ ಕೇರಳದ ಭದ್ರಕಾಳಿ ದೇವಿ ಶಕ್ತಿಯಿಂದ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ದೂರವಾಣಿ ಸಂಖ್ಯೆ 9901005534
ಕರೆ ಅಥವಾ ವಾಟ್ಸಾಪ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ
https://youtu.be/_st-YDZlTCE