ನರೇಂದ್ರ ಮೋದಿ ಒಬ್ಬ ಅನಾಗರಿಕ ಪ್ರಧಾನಿ : ಬಡಗಲಪುರ ನಾಗೇಂದ್ರ
ಬೆಂಗಳೂರು : ನರೇಂದ್ರ ಮೋದಿ ಒಬ್ಬ ಅನಾಗರಿಕ ಪ್ರಧಾನಿ ಮಂತ್ರಿ ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ಆಕ್ರೋಶ ಹೊರಹಾಕಿದ್ದಾರೆ.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ಬೆಂಗಳೂರಿನಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ರಾಜಭವನದ ಬಳಿ ಪೊಲೀಸರು ರೈತರನ್ನು ತಡೆದು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಡಗಲಪುರ ನಾಗೇಂದ್ರ, ಕೃಷಿಯನ್ನು ರಕ್ಷಿಸಿ , ಪ್ರಜಾಪ್ರಭುತ್ವ ಉಳಿಸಿ ಎಂದು ಘೋಷಣೆ ಕೂಗಿದರು.
ಇನ್ನು ಸಂವಿಧಾನವನ್ನು ಕಸದ ಬುಟ್ಟಿಗೆ ಹಾಕಿದ್ದಾರೆ. ಕೊರೊನ ಇದೆ , ಇಲ್ಲಿಂದ ಹೋಗಿ ಅಂತಾರೆ. ಇವರ ಹೊಸ ನಿಯಮಗಳಿಂದ ನಮ್ಮನ್ನು ಸಾಯಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ನು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ನಮ್ಮ ಸ್ವಾತಂತ್ರ್ಯಹರಣ ಆಗಿದೆ. ಭೂಮಿಯ ಹಕ್ಕನ್ನು ನಾಶ ಮಾಡಿದ್ದಾರೆ.
ಭಾರತ ಸರ್ಕಾರ ಕೈ ಗೊಂಡ ನಿರ್ಧಾರ ರೈತರ ವಿರೋಧಿಯಾಗಿದೆ. ನಮ್ಮನ್ನು ಕಾಪಡಬೇಕು, ತುರ್ತು ಪರಿಸ್ಥಿತಿ ಮುಂದುವರೆದಿದೆ.
ಯಾವುದೇ ಸೌಲಭ್ಯ ಕೊರೊನಾ ಸಂದರ್ಭದಲ್ಲಿ ಸಿಗುತ್ತಿಲ್ಲ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.