ಡೆನ್ಮಾರ್ಕ್ ನಲ್ಲಿ ಭಾರತೀಯ ಸಮುದಾಯದವರೊಂದಿಗೆ ಡೋಲು ಭಾರಿಸಿದ ಮೋದಿ..
ಮೂರು ರಾಷ್ಟ್ರಗಳ ಭೇಟಿಗಾಗಿ ಯುರೋಪ್ಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಡೆನ್ಮಾರ್ಕ್ನ ಕೋಪನ್ಹೇಗನ್ಗೆ ಆಗಮಿಸಿದ ನಂತರ ತಮ್ಮನ್ನ ಸ್ವಾಗತಿಸಲು ಸೇರಿದ್ದ ಭಾರತೀಯ ಸಮುದಾಯದ ಕಲಾವಿದರೊಂದಿಗೆ ಸೇರಿಕೊಂಡು ಡೋಲು ಬಾರಿಸಿದ್ದಾರೆ.
ಮೂರು ದಿನಗಳ ಯುರೋಪ್ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಸೋಮವಾರ ಬರ್ಲಿನ್ ತಲುಪಿದ್ದಾರೆ. ಮಂಗಳವಾರ ಡೆನ್ಮಾರ್ಕ್ನಲ್ಲಿದ್ದರು ಮತ್ತು ಭಾರತಕ್ಕೆ ಹಿಂತಿರುಗುವ ಮೊದಲು ಫ್ರಾನ್ಸ್ಗೆ ಭೇಟಿ ನೀಡಲಿದ್ದಾರೆ.
ಮಂಗಳವಾರ, ಪ್ರಧಾನಿ ಮೋದಿ ಕೋಪನ್ಹೇಗನ್ನಲ್ಲಿ ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಿದರು. ಸಾಂಸ್ಕೃತಿಕ ವೈವಿಧ್ಯತೆಯು ಭಾರತೀಯ ಸಮುದಾಯದ ಶಕ್ತಿಯಾಗಿದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.
#WATCH | Prime Minister Narendra Modi tried his hands on a dhol today in Copenhagen, Denmark. pic.twitter.com/G2H82YH7Px
— ANI (@ANI) May 3, 2022
ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರ ಸಮ್ಮುಖದಲ್ಲಿ ಭಾರತೀಯ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸಾಂಸ್ಕೃತಿಕ ವೈವಿಧ್ಯತೆಯು ಭಾರತೀಯ ಸಮುದಾಯದ ಶಕ್ತಿಯಾಗಿದ್ದು ಅದು ನಮಗೆ ಪ್ರತಿ ಕ್ಷಣವೂ ಜೀವನೋತ್ಸಾಹವನ್ನು ನೀಡುತ್ತದೆ… ಅದು ಯಾವುದೇ ಭಾಷೆಯಾಗಿರಬಹುದು. , ಆದರೆ ನಮ್ಮೆಲ್ಲರ ಸಂಸ್ಕೃತಿ ಭಾರತೀಯವಾಗಿದೆ ಎಂದು ತಿಳಿಸಿದರು.
ಭಾರತೀಯ ಸಮುದಾಯದವನ್ನ ಉದ್ದೇಶಿಸಿ ಮಾತನಾಡಿದ ಅವರು “ನಿಮ್ಮ ಕನಿಷ್ಠ ಐದು ಸ್ನೇಹಿತರನ್ನು ಭಾರತಕ್ಕೆ ಭೇಟಿ ನೀಡಲು ನೀವು ಪ್ರೇರೇಪಿಸಬೇಕು … ಜನರು ‘ಚಲೋ ಇಂಡಿಯಾ’ ಎಂದು ಹೇಳುತ್ತಾರೆ. ನೀವೆಲ್ಲರೂ ‘ರಾಷ್ಟ್ರದೂತ’ರಾಗಿ ಮಾಡಬೇಕಾದ ಕೆಲಸ ಇದು ಎಂದು ಮೋದಿ ಹೇಳಿದರು.