ನರೇಂದ್ರ ಮೋದಿ ಆಧುನಿಕ ಭಸ್ಮಾಸುರ : ವಿ.ಎಸ್.ಉಗ್ರಪ್ಪ
ಬೆಂಗಳೂರು : ನರೇಂದ್ರ ಮೋದಿ ದೇಶಕ್ಕೆ ಭಸ್ಮಾಸುರರಂತೆ ವಕ್ಕರಿಸಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಕ್ರೋಶ ಹೊರಹಾಕಿದ್ದಾರೆ.
ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನರೇಂದ್ರ ಮೋದಿ ದೇಶಕ್ಕೆ ಭಸ್ಮಾಸುರರಂತೆ ವಕ್ಕರಿಸಿದ್ದಾರೆ. ರೈತರಿಗೆ ಮಾರಕ ಕಾನೂನು ತರಲು ಹೊರಟಿದ್ದಾರೆ.
ಕೇಂದ್ರದ ಕಾಯ್ದೆಗಳ ವಿರುದ್ಧ ಒಂದು ಕೋಟಿಗೂ ಹೆಚ್ಚು ರೈತರು, 500ಕ್ಕೂ ಹೆಚ್ಚು ಸಂಘಟನೆಗಳು, ಎಲ್ಲಾ ವಿರೋಧ ಪಕ್ಷಗಳು ಸಹ ಬೀದಿಗಳಿದು ಪ್ರತಿಭಟನೆ ಮಾಡುತ್ತಿದ್ದಾರೆ.
ಇದಕ್ಕೆ ಮೋದಿ ಪರಿಹಾರ ರೂಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಗುಡುಗಿದರು.
ಇನ್ನು ಸುಪ್ರೀಂ ಕೋರ್ಟ್ ರೈತರ ಹೋರಾಟದ ಬಗ್ಗೆ ಒಂದು ಕಮಿಟಿ ರಚನೆ ಮಾಡಿ ಸಮಸ್ಯೆ ಬಗೆಹರಿಸಿ ಎಂದು ಹೇಳಿದೆ.
ಒಳ ಒಪ್ಪಂದ ಎಲ್ಲ ಹೆಚ್ಡಿಕೆ, ಡಿಕೆಶಿ ಕೆಲಸ :ಆರ್.ಅಶೋಕ್
ಸಮಸ್ಯೆ ಬಗೆಹರಿಯುವವರೆಗೂ ಕಾನೂನು ತಡೆಹಿಡಿಯಿರಿ ಎಂದು ಮೌಖಿಕವಾಗಿ ತಿಳಿಸಿದೆ. ಆದರೆ ಕೇಂದ್ರ ಸರ್ಕಾರ ಇದಕ್ಕೂ ಬೆಲೆ ಕೊಡುತ್ತಿಲ್ಲ.
ಮೊದಲನೇ ಸ್ವಾತಂತ್ರ ಸಂಗ್ರಮ ನಡೆದಿತ್ತು. ಈಗ ಅದಾನಿ ಮತ್ತು ಅಂಬನಿ ಕಂಪನಿಗಳ ವಿರುದ್ಧ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಮಾಡಬೇಕಿದೆ.
ರೈತ ಹೋರಾಟದ ವಿಷಯದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ಮಾಜಿ ಗೃಹ ಸಚಿವ ರಾಮಲಿಂಗ ರೆಡ್ಡಿ, ವಿಧಾನಪರಿಷತ್ ಸದಸ್ಯರಾದ ಪಿ.ಆರ್ ರಮೇಶ್, ಪ್ರಕಾಶ್ ರಾಠೋಡ್ ಮೊದಲಾದವರು ಉಪಸ್ಥಿತದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel