Narendra Modi stadium : ಗಿನ್ನಿಸ್ ರೆಕಾರ್ಡ್ಸ್ ಬರೆದ ನರೇಂದ್ರ ಮೋದಿ ಸ್ಟೇಡಿಯಂ
ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನ ಹೆಸರು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ದಾಖಲಾಗಿದೆ.
ಐಪಿಎಲ್ 2022 ಟೂರ್ನಿಯ ಫೈನಲ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಆಗಮಿಸಿದ್ದಕ್ಕೆ, ವಿಶ್ವ ದಾಖಲೆ ಒಲಿದಿದೆ ಎಂದು ಬಿಸಿಸಿಐ ತಿಳಿಸಿದೆ. 2022ರ ಮೇ 29ರಂದು ನಡೆದ ಐಪಿಎಲ್ 2022 ಟೂರ್ನಿಯ ಫೈನಲ್ ಪಂದ್ಯವನ್ನು 1,01,566 ಮಂದಿ ವೀಕ್ಷಿಸಿದ್ದು, ಅದಕ್ಕಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಭಾನುವಾರ ಈ ಬಗ್ಗೆ ಟ್ವೀಟ್ ಮಾಡಿದ್ದು, “ಗುಜರಾತ್ ಕ್ರಿಕೆಟ್ ಸಂಸ್ಥೆಯ ನರೇಂದ್ರ ಮೋದಿ ಕ್ರೀಡಾಂಗಣವು ಟಿ20 ಪಂದ್ಯವೊಂದರಲ್ಲಿ ಅತಿ ಹೆಚ್ಚು ಪ್ರೇಕ್ಷಕರನ್ನು ಹೊಂದಿದ ಗಿನ್ನೆಸ್ ಬುಕ್ ರೆಕಾರ್ಡ್ಗೆ ಸೇರ್ಪಡೆಯಾಗಿದ್ದು, ಇದು ನನಗೆ ಹೆಮ್ಮೆ ಮತ್ತು ಸಂತೋಷ ತಂದಿದೆ. 2022ರ ಮೇ 22 ರಂದು ನಡೆದ ಐಪಿಎಲ್ ಫೈನಲ್ನಲ್ಲಿ ಕ್ರೀಡಾಂಗಣವು ಬರೋಬ್ಬರಿ 101,566 ಮಂದಿ ಪ್ರೇಕ್ಷಕರನ್ನು ಹೊಂದಿತ್ತು. ಇದಕ್ಕಾಗಿ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದಗಳು” ಎಂದಿದ್ದಾರೆ.
ನರೇಂದ್ರ ಮೋದಿ ಸ್ಟೇಡಿಯಂ ಪ್ರೇಕ್ಷಕರಿಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ) ಕ್ರೀಡಾಂಗಣಕ್ಕಿಂತಲೂ ಹೆಚ್ಚು ಆಸನ ಒದಗಿಸಬಲ್ಲದ್ದಾಗಿದ್ದು, 110,000 ಪ್ರೇಕ್ಷಕರನ್ನು ಹೊಂದುವ ಸಾಮರ್ಥ್ಯ ಹೊಂದಿದೆ. ಎಂಸಿಜಿ ಕ್ರೀಡಾಂಗಣ 100,024 ಮಂದಿ ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ.
narendra-modi-stadium-narendra-modi-stadium-by-guinness-records