ಪವಿತ್ರಾ ಲೋಕೇಶ್ , ನರೇಶ್ , ರಮ್ಯಾ ಗಲಾಟೆ ನಡುವೆ ಎಂಟ್ರಿಯಾದ ಶ್ರೀರೆಡ್ಡಿ..!!
ಸದ್ಯಕ್ಕೆ ದಕ್ಷಿಣ ಸಿನಿಮಾರಂಗದಲ್ಲಿ ಟಾಲಿವುಡ್ ನಟ ನರೇಶ್ , ನಟಿ ಪವಿತ್ರಾ ಲೋಕೇಶ್ ನಡುವಿನ ಸಂಬಂಧದ ಬಗ್ಗೆ ನಾನಾ ಚರ್ಚೆಗಳು ಶುರುವಾಗಿದ್ದು ,,,ಇವರಿಬ್ಬರ ವಿರುದ್ಧ ನರೇಶ್ ಪತ್ನಿ ರಮ್ಯಾ ರಘುಪತಿ ಭಟ್ ಸಾಲು ಸಾಲು ಆರೋಪಗಳನ್ನ ಮಾಡ್ತಿದ್ಧಾರೆ..
ಈ ಮೂವರ ಜಗಳ ಬೀದಿಗೆ ಬಂದಿದೆ.. ಮೈಸೂರಿನ ಹೋಟೆಲ್ ಒಂದ್ರಲ್ಲಿ ಪವಿತ್ರಾ – ನರೇಶ್ ಒಂದೇ ರೂಮಿನಲ್ಲಿದ್ದಾಗ ಅಲ್ಲಿಗೆ ರಮ್ಯಾ ಹೋಗಿ ನರೇಶ್ ಗೆ ಚಪ್ಪಲಿಯಲ್ಲಿ ಹೊಡೆಯಲು ಯತ್ನಿಸಿದ್ದು ಭಾರೀ ಹೈಡ್ರಾಮಾವೇ ನಡೆದುಹೋಗಿದೆ.. ಇಷ್ಟೆಲ್ಲಾ ಗೊಂದಲದ ನಡುವೆ ಈಗ ಈ ಮ್ಯಾಟರ್ ಗೆ ಹೊಸ ಕ್ಯಾರೆಕ್ಟರ್ ಇಂಟರ್ ಫಿಯರ್ ಆಗಿದ್ದಾರೆ..
ಅಂದ್ರೆ ಈ ವಿಚಾರವಾಗಿ ಟಾಲಿವುಡ್ ನ ನಟಿ ಶ್ರೀ ರೆಡ್ಡಿ ಮಧ್ಯ ಪ್ರವೇಶಿಸಿದ್ದು ಪವಿತ್ರಾ , ನರೇಶ್ ವಿರುದ್ಧ ಕಿಡಿಕಾರಿದ್ಧಾರೆ.. ಶ್ರೀರೆಡ್ಡಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದು ಪವಿತ್ರಾ ಲೋಕೇಶ್ ಹಾಗೂ ನರೇಶ್ ವಿರುದ್ಧ ಆಕ್ರೋಶ ಹೊರಹಾಕಿದ್ದು ಇಬ್ಬರ ಮೇಲೆ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ.
ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿಗೆ ಅಡ್ಡಿಪಡಿಸಲು ನೀವು ಯಾರು.. ರಮ್ಯಾ ಚಾರಿತ್ರ್ಯದ ಬಗ್ಗೆ ಮಾತನಾಡಲು ನೀವು ಯಾರು.. ಅವರ ಬಗ್ಗೆ ಮಾತಾಡಲು ನಿಮಗೆ ಏನ್ ಹಕ್ಕಿದೆ.. ಬೇರೆಯವರ ಬದುಕಿಗೆ ಏಕೆ ಬೆಂಕಿ ಹಚ್ಚುತ್ತಿದ್ದೀರಿ ಎಂದು ಪ್ರಶ್ನೆಗಳನ್ನ ಮಾಡಿದ್ದಾರೆ..
ಅಂದ್ಹಾಗೆ ಈ ಹಿಂದೆ ಶ್ರೀರೆಡ್ಡಿ ಮೀಟೂ ಆಂದೋಲನ ಮಾಡುವಾಗ ನರೇಶ್ ಹಾಗೂ ಪವಿತ್ರಾ ಲೋಕೇಶ್ ಮೇಲೆ ಕಿಡಿಕಾರಿದ್ದರು. ಆಗ ಶ್ರೀರೆಡ್ಡಿಯನ್ನು ಬ್ಯಾನ್ ಮಾಡಿದ್ದರು ಸಹ. ಇದನ್ನು ಶ್ರೀ ಈಗ ನೆನಪಿಸಿಕೊಂಡಿದ್ದಾರೆ.. ಶ್ರೀರೆಡ್ಡಿ ಅರೆಬೆತ್ತಲಾಗಿ ಪ್ರತಿಭಟನೆ ಮಾಡಿದಾಗ ನರೇಶ್ ಆ್ಯಸಿಡ್‌ನಿಂದ ಕೈ ತೊಳೆಯಬೇಕು ಎಂದು ಕಮೆಂಟ್ ಮಾಡಿದ್ದರು. ಅದನ್ನು ನೆನಪಿಸಿಕೊಂಡು ಆಕ್ರೋಶ ಹೊರಹಾಕಿದ್ದಾರೆ..
ಪವಿತ್ರ ಲೋಕೇಶ್, ನರೇಶ್, ಕರಾಟೆ ಕಲ್ಯಾಣಿ, ಪವನ್ ಕಲ್ಯಾಣ್ ಹೆಸರನ್ನು ಶ್ರೀರೆಡ್ಡಿ ಮತ್ತೆ ಪ್ರಸ್ತಾಪಿಸಿದ್ದು , ಮೀಟೂ ಪ್ರತಿಭಟನೆಯ ವೇಳೆ ಇವರೆಲ್ಲರೂ ಅಪಹಾಸ್ಯ ಮಾಡಿದ್ದರು. ಈಗ ಅವರ ಜೀವನ ಏನಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಕಿಡಿಕಾರಿದ್ದಾರೆ. ಅಲ್ಲದೇ ಪವಿತ್ರಾ ಹಲವರ ಜೊತೆ ಸಂಬಂಧ ಹೊಂದಿದ್ದು, ಹಲವರ ಜೀವನ ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.