Nargis Babu death : ಸ್ಯಾಂಡಲ್ ವುಡ್ ನ ಹಿರಿಯ ನಿರ್ಮಾಪಕ ನರ್ಗಿಸ್ ಬಾಬು ನಿಧನ
ಸ್ಯಾಂಡಲ್ ವುಡ್ ನ ಹಿರಿಯ ನಿರ್ಮಾಪಕರಾದ ನರ್ಗಿಸ್ ಬಾಬು ಅವರು ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಸಂಜೆ 7 ಗಂಟೆಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ..
ನರ್ಗಿಸ್ ಬಾಬು ಹಲವು ಸ್ಟಾರ್ ನಟರ ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ.. ನರ್ಗಿಸ್ ಆಂಡ್ ಎಂಟರ್‌ಪ್ರೈಸಸ್ ಮೂಲಕ ಚಿತ್ರ ಹಂಚಿಕೆ ಮಾಡುತ್ತಿದ್ದವರು ಸುಂದರ ಪುರುಷ ಸಿನಿಮಾ ಮೂಲಕ ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮಾಡಿದರು.. ಆ ನಂತರ 23 ಚಿತ್ರಗಳನ್ನ ನಿರ್ಮಾಣ ಮಾಡಿದರು.. 600ಕ್ಕೂ ಹೆಚ್ಚು ಸಿನಿಮಾಗಳನ್ನ ವಿತರಣೆ ಮಾಡಿದ್ದಾರೆ. ಯಾರಿಗೆ ಬೇಡ ದುಡ್ಡು, ಧನ್ ಧನಾ ಧನ್, ಅನಂತ್ ಗೌಡ ವರ್ಸಸ್ ರೆಡ್ಡಿ ಹೀಗೆ ಸಾಕಷ್ಟು ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ..
ಅಂದ್ಹಾಗೆ ಅನಂತ್ ನಾಗ್, ಶಶಿಕುಮಾರ್ , ನೆನಪಿರಲಿ ಪ್ರೇಮ್ ಸೇರಿದಂತೆ ಹಲವು ಸ್ಟಾರ್ ಗಳ ಸಿನಿಮಾಗಳಿಗೆ ಇವರು ಬಂಡವಾಳ ಹೂಡಿದ್ದಾರೆ.. ನರ್ಗಿಸ್ ಅವರಿಗೆ 6 ಜನ ಮಕ್ಕಳು ಅದರಲ್ಲಿ ಇಬ್ಬರು ಮಕ್ಕಳು ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ಧಾರೆ..
ಕಮಾರ್ ಹಾಗೂ ವಸೀಮ್ ಎಂಬ ಇಬ್ಬರು ಮಕ್ಕಳು ಸ್ಯಾಂಡಲ್‍ವುಡ್‍ನಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. 73 ವರ್ಷದ ನರ್ಗಿಸ್ ಬಾಬು ಅವರ ಅಂತ್ಯಕ್ರಿಯೆಯನ್ನು ಮುನುರೆಡ್ಡಿ ಪಾಳ್ಯದಲ್ಲಿ ಮುಸ್ಲಿಂ ಸಂಪ್ರದಾಯದ ಪ್ರಕಾರ ಇಂದು ಮಧ್ಯಾಹ್ನ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎನ್ನಲಾಗಿದೆ.