ಸಿಪಿಎಲ್ 2020 – ಟ್ರಿಂಬಾಗೊ ನೈಟ್ ರೈಡರ್ಸ್ ತಂಡಕ್ಕೆ ತಲೆಬಾಗಿದ ಗಯಾನಾ ಅಮೇಝಾನ್ ವಾರಿಯರ್ಸ್
ಕೋವಿಡ್-19 ಮಾರ್ಗಸೂಚಿಗಳೊಂದಿಗೆ ಎಂಟನೇ ಆವೃತ್ತಿಯ ಕೆರೆಬಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಗೆ ಚಾಲನೆ ಸಿಕ್ಕಿದೆ. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಗಯಾನ ಅಮೇಝಾನ್ ವಾರಿಯರ್ಸ್ ಮತ್ತು ಟ್ರಿಂಬಾಗೊ ನೈಟ್ ರೈಡರ್ಸ್ ಕಾದಾಟ ನಡೆದಿತ್ತು. ರೋಚಕವಾಗಿ ಸಾಗಿದ ಮೊದಲ ಪಂದ್ಯದಲ್ಲಿ ಟ್ರಿಂಬಾಗೊ ನೈಟ್ ರೈಡರ್ಸ್ ತಂಡ ನಾಲ್ಕು ವಿಕೆಟ್ಗಳಿಂದ ಗೆಲುವಿನ ನಗೆ ಬೀರಿತ್ತು.
17 ಓವರ್ಗಳಿಗೆ ಸೀಮಿತಗೊಂಡಿರುವ ಈ ಪಂದ್ಯದಲ್ಲಿ ಗಯಾನ ಅಮೇಝಾನ್ ವಾರಿಯರ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿತ್ತು. ಅಬ್ಬರದ ಮಾಡಿದ ಬ್ಯಾಟಿಂಗ್ ಮಾಡಿದ ಶಿಮ್ರೋನ್ ಹೆಟ್ಮೇರ್ ಅವರ ಅಜೇಯ 63 ರನ್ ಮತ್ತು ರಾಸ್ ಟೇಲರ್ ಅವರ ಅಮೂಲ್ಯ 33 ರನ್ಗಳ ನೆರವಿನಿಂದ ಗಯಾನ ಅಮೇಝಾನ್ ವಾರಿಯರ್ಸ್ ತಂಡ 5 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತ್ತು. ನೈಟ್ ರೈಡರ್ಸ್ ತಂಡದ ಪರ ಸುನೀಲ್ ನರೇನ್ ಅವರು 19 ರನ್ಗೆ ಎರಡು ವಿಕೆಟ್ ಉರುಳಿಸಿದ್ರು.
ಸವಾಲನ್ನು ಬೆನ್ನಟ್ಟಿದ್ದ ಟ್ರಿಂಬಾಗೊ ನೈಟ್ ರೈಡರ್ಸ್ ತಂಡ ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆ ಗೆಲುವಿನ ನಗೆ ಬೀರಿತ್ತು. ಆಲ್ ರೌಂಡ್ ಆಟವನ್ನಾಡಿದ್ದ ಸುನೀಲ್ ನರೇನ್ 50 ರನ್ ಸಿಡಿಸಿದ್ರೆ, ಡರೇನ್ ಬ್ರಾವೋ 30 ರನ್ ಗಳಿಸಿದ್ರು. ಅಮೇಝಾನ್ ವಾರಿಯರ್ಸ್ ತಂಡದ ಪರ ನವೀನ್ ಉಲ್ ಹಕ್ ಅವರು 21ಕ್ಕೆ 2 ಮತ್ತು ಇಮ್ರಾನ್ ತಾಹೀರ್ 40ಕ್ಕೆ 2 ವಿಕೆಟ್ ಉರುಳಿಸಿದ್ರು. ಅಂತಿಮವಾಗಿ ಟ್ರಿಂಬಾಗೊ ನೈಟ್ ರೈಡರ್ಸ್ ತಂಡ 16.4 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು.