ವಾಷಿಂಗ್ಟನ್, ಮೇ.28 : ಬುಧವಾರ ಐತಿಹಾಸಿಕ ದಾಖಲೆ ನಿರ್ಮಿಸಲು ಕೆಲವೇ ನಿಮಿಷಗಳು ಬಾಕಿ ಇರುವಾಗ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಗಗನಯಾತ್ರಿ ಸಹಿತ ಸ್ಪೇಸ್ ಎಕ್ಸ್ ರಾಕೆಟ್ ಅನ್ನು ವಾಪಸು ಕರೆಸಿಕೊಂಡಿದೆ.
ಗುರಿ ತಲುಪಲು 17 ನಿಮಿಷಗಳು ಬಾಕಿ ಇರುವಾಗ ನಾಸಾ ವಿಜ್ಞಾನಿಗಳಿಗೆ ಅಪಾಯದ ಮುನ್ಸೂಚನೆ ಸಿಕ್ಕಿದ ಹಿನ್ನಲೆಯಲ್ಲಿ ಇಬ್ಬರು ಗಗನಯಾತ್ರಿಗಳುಳ್ಳ ಸ್ಪೇಸ್ ಎಕ್ಸ್ ರಾಕೆಟ್ ನ್ನು ವಾಪಸ್ ಕರೆಸಿಕೊಂಡಿದ್ದಾರೆ. ಡೇಂಜರ್ ಲೈಟ್ ಆನ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ವಿಜ್ಞಾನಿಗಳು ರಾಕೆಟ್ ಅನ್ನು ವಾಪಸು ಕರೆಸಿಕೊಂಡರು.
ಇದೀಗ ಮತ್ತೊಮ್ಮೆ ಗಗನಯಾತ್ರಿಗಳ ಸಹಿತ ರಾಕೆಟ್ ಉಡಾವಣೆಗೆ ನಾಸಾ ಸಜ್ಜಾಗಿದೆ. ಸ್ಪೇಸ್ ಎಕ್ಸ್ ರಾಕೆಟ್ ನಿರ್ದಿಷ್ಟ ಗುರಿ ತಲುಪಲು ಕೆಲವೇ ನಿಮಿಷಗಳಿದ್ದಾಗ ಪ್ರತೀಕೂಲ ವಾತಾವರಣದಿಂದ ವಿಫಲವಾದ ಹಿನ್ನಲೆಯಲ್ಲಿ ಮೇ.30ರ ಶನಿವಾರ ಮಧ್ಯಾಹ್ನ 3 ಗಂಟೆ 22 ನಿಮಿಷ 45 ಸೆಕೆಂಡ್ ಗೆ ಮತ್ತೊಮ್ಮೆ ರಾಕೆಟ್ ಉಡಾವಣೆಗೆ ನಾಸಾ ಸಮಯವನ್ನು ನಿಗದಿಪಡಿಸಿದೆ.
ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿಗಳನ್ನು ರವಾನಿಸಲು ಅಮೆರಿಕಾ ಬಾಹ್ಯಾಕಾಶ ಸಂಸ್ಥೆ ನಾಸಾ, ಕಳೆದ 2011ರಲ್ಲಿ ಬಾಹ್ಯಾಕಾಶ ನೌಕೆಯ ನಿವೃತ್ತಿ ಆದಾಗಿನಿಂದಲೂ ರಷ್ಯಾದ ರಾಕೆಟ್‌ಗಳನ್ನು ಬಳಸಿಕೊಳ್ಳುತ್ತಿದೆ. ಬುಧವಾರ ಮೊದಲ ಬಾರಿಗೆ ಇಬ್ಬರು ಗಗನಯಾತ್ರಿಗಳನ್ನು ಹೊಂದಿರುವ ಸ್ಪೇಸ್ ಎಕ್ಸ್ ರಾಕೆಟ್ ಅನ್ನು ನಾಸಾ ಬಾಹ್ಯಾಕಾಶಕ್ಕೆ ಉಡಾಯಿಸಿತ್ತು. ನಾಸಾ ವಿಜ್ಞಾನಿಗಳ ಪರಿಶ್ರಮಕ್ಕೆ ಧನ್ಯವಾದ ತಿಳಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ನಡೆಸುವ ನಿಮ್ಮ ಪ್ರಯತ್ನಕ್ಕೆ ಜಯ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.








