ಹೊಸ ದಾಖಲೆ ಬರೆದ ನಾಸಾ.. ಸೂರ್ಯನ ಸಮೀಪಕ್ಕೆ ಪಾರ್ಕರ್ NASA saaksha tv
ಇಡೀ ವಿಶ್ವವನ್ನು ಬೆಳಗುವ ಸೂರ್ಯನ ಸಮೀಪಕ್ಕೆ ಯಾವುದೇ ವಸ್ತು ಹೋಗಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಸೂರ್ಯನ ಸಮೀಪಕ್ಕೆ ತಲುಪಿದರೇ ಯಾವುದೇ ವಸ್ತುವಾಗಿರಲಿ ಸುಟ್ಟುಭಸ್ಮವಾಗುತ್ತದೆ ಎನ್ನಲಾಗುತ್ತಿತ್ತು.
ಆದ್ರೆ ಇದೀಗ ನಾಸಾ ಅದನ್ನ ಕೊಂಚ ಮಟ್ಟಿಗೆ ಸುಳ್ಳಾಗಿಸಿದೆ. ನಾಸಾದ ಪಾರ್ಕರ್ ಬಾಹ್ಯಾಕಾಶ ಶೋಧ ನೌಕೆ ಇದೀಗ ಸೂರ್ಯನ ಸಮೀಪ ತಲುಪಿದೆ ಎಂದು ವರದಿಯಾಗಿದೆ.
ಆ ಮೂಲಕ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಾಹ್ಯಾಕಾಶ ನೌಕೆಯೊಂದು ಸೂರ್ಯನ ಪ್ರಭಾವ ವಲಯವನ್ನು ತಲುಪಿದೆ. ನಾಸಾ ಪಾರ್ಕರ್ ಸೂರ್ಯನ ಮೇಲ್ಮೈನಿಂದ 40.89 ಲಕ್ಷ ಮೈಲಿ ದೂರದ ವಾತಾವರಣದಲ್ಲಿ ಸಾಗಿದೆ.
ಈ ಪಾರ್ಕರ್ ನೌಕೆಯನ್ನು 2018ರಲ್ಲಿ ಸೂರ್ಯನ ಸಮೀಪದಲ್ಲಿ ಸುತ್ತುತ್ತಾ ಹಲವು ನಿಗೂಢ ಪ್ರಶ್ನೆಗಳಿಗೆ ಉತ್ತರ ಹುಡುಕಲು ಉಡಾವಣೆ ಮಾಡಲಾಗಿತ್ತು. ಅದರಂತೆ ಸೂರ್ಯ ಶೋಧಕ ನೌಕೆ ಪಾರ್ಕರ್ ಸೂರ್ಯನ ಸಮೀಪ ತಲುಪಿದೆ.
ಈ ನೌಕೆಯ ನಿರ್ಮಾಣ ಮತ್ತು ನಿರ್ವಹಣೆಯನ್ನು ಹಾರ್ವಡ್ ಮತ್ತು ಸ್ಮಿತ್ ಸೋನಿಯನ್ ನ ಖಭೌತ ಶಾಸ್ತ್ರಜ್ಞರು, ಹಲವು ವಿಜ್ಞಾನಿಗಳು ಹಾಗೂ ಎಂಜಿನಿಯರ್ ಗಳು ಜೊತೆಯಾಗಿ ಮಾಡಿದ್ದಾರೆ.