NationalFilmAwards: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ – ಅತ್ಯುತ್ತಮ ನಟ, ನಟಿ, ಚಿತ್ರ ಯಾವುದು ಗೊತ್ತಾ?
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ 2020 ನೇ ಸಾಲಿನ 68 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ನವದೆಹಲಿಯಲ್ಲಿ ಪ್ರದಾನ ಮಾಡಿದರು. 2020 ರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರಸಿದ್ಧ ನಟಿ ಆಶಾ ಪರೇಖ್ ಅವರಿಗೆ ನೀಡ ಗೌರವಿಸಲಾಯಿತು. ಅತ್ಯುತ್ತಮ ಚಲನಚಿತ್ರ ಅವಾರ್ಡ್ ನ್ನ ತಮಿಳಿನ ಸೂರರೈ ಪೊಟ್ರು ಚಿತ್ರಕ್ಕೆ ಪ್ರಧಾನ ಮಾಡಲಾಯಿತು.
ಬಾಲಿವುಡ್ ಚಿತ್ರ ತಾನ್ಹಾಜಿ: ದಿ ಅನ್‌ಸಂಗ್ ವಾರಿಯರ್’ ಅತ್ಯುತ್ತಮ ಜನಪ್ರಿಯ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ಇದೇ ಚಿತ್ರಕ್ಕಾಗಿ ಅಜವ್ ದೇವಗನ್ ಅತ್ಯುತ್ತಮ ನಟ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಜೊತೆಗೆ ಸೂರೂರೈ ಪೋಟ್ರೂ ಚಿತ್ರಕ್ಕಾಗಿ ನಟ ಸೂರ್ಯ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಪಡೆದರೆ ನಟಿ ಅಪರ್ಣಾ ಬಾಲಮುರುಳಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದರೆ. ಮಲಯಾಳಂ ಸಿನಿಮಾ ಅಯ್ಯಪ್ಪನುಂ ಕೊಶಿಯುಮ್ ಚಿತ್ರಕ್ಕಗಿ ಸಚ್ಚಿದಾನಂದನ್ ಕೆಆರ್ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನ ಸ್ವೀಕರಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್, ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್.ಮುರುಗನ್ ಉಪಸ್ಥಿತರಿದ್ದರು..
National Film Awards; President Murmu presents 68th National Film Awards; Asha Parekh conferred with Dadasaheb Phalke Award