ಪ್ರಮುಖ ರಾಷ್ಟ್ರೀಯ – ಅಂತರಾಷ್ಟ್ರೀಯ ಸುದ್ದಿಗಳು..! top news
ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನ ಕ್ಲಿಕ್ ಮಾಡಿ..!
ಎಸ್‌ಬಿಐ ಅಗ್ಗವಾಗಿ ಮನೆ ಖರೀದಿಸಲು ಅವಕಾಶ ನೀಡುತ್ತಿದೆ. ಅದು ಹೇಗೆ ? ಇಲ್ಲಿದೆ ಮಾಹಿತಿ..
ದೇಶದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನಿಮಗೆ ಮನೆಗಳು ಮತ್ತು ಅಂಗಡಿಗಳನ್ನು ಅಗ್ಗವಾಗಿ ಖರೀದಿಸುವ ಅವಕಾಶವನ್ನು ನೀಡುತ್ತಿದೆ. ವಾಸ್ತವವಾಗಿ, ಸಾಲವನ್ನು ಮರುಪಾವತಿಸದವರ ವಾಣಿಜ್ಯ ಮತ್ತು ವಸತಿ ಆಸ್ತಿಯನ್ನು ಎಸ್‌ಬಿಐ ಹರಾಜು ಮಾಡಲು ಹೊರಟಿದೆ. ಅಂತಹ ಡೀಫಾಲ್ಟ್ ಆಸ್ತಿಗಳನ್ನು ಹರಾಜು ಮಾಡುವ ಮೂಲಕ ಎಸ್‌ಬಿಐ ಸಾಲವನ್ನು ಮರುಪಡೆಯುತ್ತದೆ. ಅಂತಹ ಹರಾಜಿನಲ್ಲಿ, ಖರೀದಿದಾರರು ಮಾರುಕಟ್ಟೆ ಬೆಲೆಗಿಂತ ಸಾಕಷ್ಟು ಕಡಿಮೆ ಬೆಲೆಯಲ್ಲಿ ಆಸ್ತಿಯನ್ನು ಪಡೆಯಬಹುದು. ಎಸ್‌ಬಿಐ ಟ್ವೀಟ್ ಮಾಡುವ ಮೂಲಕ ಹರಾಜು ಬಗ್ಗೆ ಮಾಹಿತಿ ನೀಡಿದೆ. ಟ್ವೀಟ್ ಪ್ರಕಾರ, ಈ ಹರಾಜನ್ನು ಡಿಸೆಂಬರ್ 30 ರಂದು ಮಾಡಲಾಗುತ್ತಿದೆ ಅಂದರೆ ಬುಧವಾರ ವಿವಿಧ ಪತ್ರಿಕೆಗಳಲ್ಲಿನ ಜಾಹೀರಾತುಗಳ ಮೂಲಕ ಬ್ಯಾಂಕ್ ಈ ಬಗ್ಗೆ ಮಾಹಿತಿ ನೀಡಿದೆ. ಎಸ್‌ಬಿಐ ಇ-ಹರಾಜು ವಸತಿ, ವಸತಿ, ವಾಣಿಜ್ಯ, ಕೈಗಾರಿಕಾ ಇತ್ಯಾದಿ ಎಲ್ಲಾ ರೀತಿಯ ಆಸ್ತಿಗಳನ್ನು ಒಳಗೊಂಡಿರುತ್ತವೆ.
ಚೇತರಿಕೆ ಹಾದಿಯಲ್ಲಿದೆ… ಆದರೂ ದುರ್ಬಲವಾಗಿದೆ ಭಾರತದ ಆರ್ಥಿಕತೆ..!
ಒಂದೆಡೆ ಭಾರತದ ಆರ್ಥಿಕತೆ ಚೇತರಿಕೆ ಕಾಣುತ್ತಿದೆ ಎನ್ನಲಾಗ್ತಿದೆ. ಆದರೆ ಮತ್ತೊಂದೆಡೆ ದುರ್ಬಲವೂ ಆಗಿದೆ ಎನ್ನಲಾಗ್ತಿದೆ. ಹೌದು ICRA ವರದಿ ಪ್ರಕಾರ ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಚೇತರಿಕೆ ಹಾದಿಯಲ್ಲಿ ಇದ್ದರೂ ದುರ್ಬಲವಾಗಿದೆ. ಹೆಚ್ಚುತ್ತಿರುವ ವೆಚ್ಚ ಮತ್ತು ಕೆಲವು ಪ್ರದೇಶಗಳಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿರುವ ಪೂರೈಕೆ ವ್ಯತ್ಯಯಗುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆ ಎಂದು ICRA ಹೇಳಿದೆ.
ದೇಶದಲ್ಲಿ ಕ್ಷೀಣಿಸುತ್ತಿದೆ ಕೊರೊನಾ ಪವರ್: ಗಣನೀಯವಾಗಿ ಕಡಿಮೆಯಾಗ್ತಿದೆ ಸೋಂಕಿತರ ಸಂಖ್ಯೆ
ದೇಶದಲ್ಲಿ ಕೊರೊನಾ ಮಹಾಮಾರಿ ಆರ್ಭಟ ಕ್ಷೀಣಿಸುತ್ತಿದೆ. ಆದ್ರೆ ಇದರ ನಡುವೆ ಹೊಸ ಹೊಸ ಸೋಂಕು ಪತ್ತೆಯಾಗ್ತಿರೋದು ದೇಶದ ಜನರ ನೆಮ್ಮದಿ ಕೆಡಿಸುತ್ತಿದೆ. ಇತ್ತೀಚೆಗಷ್ಟೇ ಆಂಧ್ರದಲ್ಲಿ ನಿಗೂಢ ಕಾಯಿಲೆ ಪತ್ತೆಯಾಗಿ ಆತಂಕ ಸೃಷ್ಟಿಸಿತ್ತು. ಅಲ್ಲದೇ ಹರಿಯಾಣ ದೆಹಲಿ ಭಾಗಗಳಲ್ಲೂ ಹೊಸ ಸೋಂಕು ಕಾಣಿಸಿಕೊಂಡು 9 ಜನರ ಬಲಿ ಪಡೆದಿತ್ತು. ಇದೀಗ ಕೇರಳದಲ್ಲಿ ಮತ್ತೊಂದು ಬ್ಯಾಕ್ಟೀರಿಯಾದ ಹಾವಳಿ ಶುರುವಾಗಿದೆ.
ನಿರುದ್ಯೋಗಿಗಳಿಗೆ ರಿಲೀಫ್.. 1 ಟ್ರಿಲಿಯನ್ ಡಾಲರ್ ಪ್ಯಾಕೇಜ್ ..!
ಅಮೆರಿಕಾ: ಕೊರೊನಾ ಹಾವಳಿಯಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಅನೇಕರು ಜೀಚವ ಕಳೆದುಕೊಂಡ್ರೆ , ಅನೇಕ ಕ್ಷೇತ್ರಗಳಲ್ಲಿ, ಉದ್ಯಮಗಳು ನಷ್ಟ ಅನುಭವಿಸಿದ್ದಾರೆ. ಲಕ್ಷಾಂತರ ಜನರು ನಿರುದ್ಯೋಗಿಗಳಾಗಿದ್ದಾರೆ. ಅನೇಕ ರಾಷ್ಟ್ರಗಳು ಆರ್ಥಿವಾಗಿ ಕುಸಿತ ಕಂಡಿವೆ. ಅದ್ರಲ್ಲಿ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕಾ ಸಹ ಒಂದು. ಹೀಗಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿರೋ ಅಮೆರಿಕಾ ಹೊಸ ಪ್ಲಾನ್ ಮಾಡಿದೆ. ಅಮೆರಿಕದ ಕ್ಯಾಪಿಟಲ್ ಹಿಲ್ ಸಮಾಲೋಚಕರು ಈ ಬಾರಿ ಆರ್ಥಿಕ ಪರಿಹಾರ ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ. ಅದರಂತೆ ಆರ್ಥಿಕ ಸಮಸ್ಯೆಯಿಂದ ಉದ್ಯೋಗ ಕಳೆದುಕೊಂಡ ಉದ್ಯಮ ಕುಸಿತ ಹಾಗೂ ರಾಷ್ಟ್ರಕ್ಕೆ ಲಸಿಕೆಯನ್ನು ತಲುಪಿಸಲು ಒಂದು ಟ್ರಿಲಿಯನ್ ಹಣ ಒದಗಿಸಲಾಗಿದೆ. ಈ ಒಪ್ಪಂದದ ಪ್ರಕಾರ ಪ್ರತಿ ವಾರ ನಿರುದ್ಯೋಗಿಗಳಿಗೆ 300 ಡಾಲರ್ ಹಣವನ್ನು ನೀಡಲಾಗುತ್ತದೆ. ಜೊತೆಗೆ ಶಾಲೆ, ಆರೋಗ್ಯ ಮತ್ತು ಇತರೆ ಸಂಸ್ಥೆಗಳಿಗೆ 600 ಡಾಲರ್ಗಳನ್ನು ನೀಡಲಾಗುತ್ತದೆ ಎನ್ನಾಗಿದೆ.
ಇಟಲಿಯಲ್ಲೂ ಆತಂಕ ಶುರು: ಹೊಸ ಸ್ವರೂಪದ ಕೊರೊನಾ ವೈರಸ್ ಪತ್ತೆ!
ಇಟಲಿ: ಇಡೀ ವಿಶ್ವವನ್ನೇ ಕೊರೊನಾ ಹೆಮ್ಮಾರಿ ಇನ್ನಲ್ಲದಂತೆ ಕಾಡ್ತಿದೆ. ಆದ್ರೆ ಭಾರತ ಸೇರಿ ಹಲವೆಡೆ ಸೋಂಕಿತ ತೀವ್ರತೆ ಕಡಿಮೆಯಾಗ್ತಿದೆ. ಆದ್ರೆ ಇದರ ಬೆನ್ನಲ್ಲೇ ಬ್ರಿಟನ್ ನಲ್ಲಿ ಹೊಸ ಸ್ವರೂಪದ ಕೊರೊನಾ ವೈರಸ್ ಪತ್ತೆಯಾಗಿ ಆತಂಕ ಸೃಷ್ಟಿ ಮಾಡಿತ್ತು. ಆದ್ರೆ ಇದೀಗ ಬ್ರಿಟನ್ ನ ನಂತರ ಇಟಲಿಯಲ್ಲೂ ಹೊಸ ಮಾದರಿಯ ಕೊರೊನಾ ಸೋಂಕು ಪತ್ತೆಯಾಗಿದೆ.
ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನ ಕ್ಲಿಕ್ ಮಾಡಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel