ನವದೆಹಲಿ: ರಾಷ್ಟ್ರೀಯ ಪಂಚಾಯತಿ ರಾಜ್ ದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಪಂಚಾಯತ್ ಅಧ್ಯಕ್ಷರೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದಾರೆ. ಮೋದಿ ಜತೆ ಪಂಚಾಯತಿ ರಾಜ್ ಸಚಿವ ನರೇಂದ್ರ ಸಿಂಗ್ ತೋಮರ್ ಕೂಡಾ ಉಪಸ್ಥಿತರಿದ್ದರು.
ಇದೇ ವೇಳೆ ಗ್ರಾಮಗಳ ಆರ್ಥಿಕತೆಗೆ ಉತ್ತೇಜನ ನೀಡಲು ಇ-ಗ್ರಾಮ್ ಆಪ್ ಮತ್ತು ಸ್ವಮಿತ್ವ ಯೋಜನೆಯನ್ನು ಉದ್ಘಾಟಿಸಿದ ಪ್ರಧಾನಿ, ಸಶಕ್ತ ಪಂಚಾಯಿತಿಗಳು, ಆರ್ಥಿಕತೆಯನ್ನು ಹಾಗೂ ರಾಷ್ಟ್ರವನ್ನು ಬಲಗೊಳಿಸುತ್ತವೆ ಎಂದರು.
ಮೊದಲು ಪಂಚಾಯತ್ ರಾಜ್ ಪ್ರಶಸ್ತಿ ಪಡೆದವರಿಗೆ ಶುಭಕೋರಿದ ಪ್ರಧಾನಿ ಇಂತಹ ಸಂದರ್ಭದಲ್ಲಿ ನಮ್ಮನ್ನು ತಂತ್ರಜ್ಞಾನ ಒಟ್ಟುಗೂಡಿಸಿದೆ. ತಂತ್ರಜ್ಞಾನದಿಂದಲೇ ನಾವಿಂದ ಭೇಟಿಯಾಗಲು ಸಾಧ್ಯವಾಯಿತು. ನಾವು ಜೀವಿಸುತ್ತಿದ್ದ ರೀತಿ ಹಾಗೂ ಕೆಲಸದ ಮೇಲೆ ಇಂದು ಕೊರೊನಾ ಹೆಚ್ಚು ಪ್ರಭಾವ ಬೀರಿದೆ. ಇದೀಗ ನಮ್ಮ ದಾರಿಯಲ್ಲಿ ನಾವೆಂದು ಎದುರಿಸದ ಹಲವು ಸವಾಲುಗಳನ್ನು ಕೊರೊನಾ ವೈರಸ್ ನೀಡಿದೆ. ಆದರೆ, ನಾವು ಯಾವಾಗಲು ಪರಿಸ್ಥಿತಿಯಿಂದ ಕಲಿಯಬೇಕಾಗಿದೆ. ಸಾಕಷ್ಟು ಯೋಚಿಸುವ, ಕಲಿಯುವ ಅವಕಾಶವನ್ನು ಕೊರೊನಾ ನಮಗೆ ನೀಡಿದೆ ಎಂದರು.








